ಜೈ ಜಿನೇಂದ್ರ ವಿಕ್ಷಕರೆ ಸುತ್ತಲು ಬೆಟ್ಟಗಳ ಸಾಲು ಹಿತವಾದ ಗಾಳಿ ಕಣ್ಣು ಹಾಯಿಸಿದ್ದುದಕು ಸುಂದರ ಹೊಲ ಗದ್ದೆಗಳ ಮನೋಹರ ನೋಟ, ಇಂತಹ ಅಹಲಾದಕರ ವಾತಾವರಣದ ಮಧ್ಯೆ ಬಳ್ಳಾರಿ ಜಿಲ್ಲೆಯ ಹರಪ್ಪನಳ್ಳಿ ತಾಲ್ಲೂಕಿನ ಮಾಡಲಗಿರಿ ಪ್ರದೇಶದಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ, ಶ್ರೀ ಬ್ರಹ್ಮದೇವರ ಹಾಗೂ ತಾಯಿ ಪದ್ಮಾವತಿ ದೇವಿಯ ಮೂರ್ತಿ ಒಂದೇ ವಿಗ್ರಹದಲ್ಲಿ ಮೂಡಿಬಂದಿರುವ ವಿಶೇಷತೆಯನ್ನು ಹೊಂದಿರುವ ಜೈನ ಮಂದಿರವನ್ನು ನೀವು ನೋಡುತ್ತಿದ್ದೀರಿ.
ಬಹಳ ಪ್ರಾಚೀನ ಮಂದಿರವಾದರು ರಸ್ತೆ ವ್ಯವಸ್ಥೆಗಳ ಕೊರತೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಸಮಾಜ ಭಾಂದವರಿಂದ ಅಭಿವೃಧಿಗೊಳಿಸಲಾಗಿದೆ. ಈ ಸಲುವಾಗಿ ಇತ್ತೀಚಿನ ದಿನಗಳಲ್ಲಿ ಪ್ರಚಲಿತಕೆ ಬಂದ್ದಿದು ಇಲ್ಲಿನ ಮಹಿಮೆ ಹಿಂದಾಗಿ ಭಕ್ತರು ಹೆಚ್ಚಾಗಿದ್ದಾರೆ. ಕ್ರಿ.ಶ. 10ನೇ ಶತಮಾನದ ಬಸದಿಯಗಿದ್ದು ಅಲ್ಲಿರುವ ಶಾಸನದ ಪ್ರಕಾರ ಅಂದಿನ ಕಾಲದಲ್ಲೆ ಜೈನ ಧರ್ಮ ಪ್ರಜ್ವಲ ಸ್ಥಿತಿಯಲ್ಲಿ ಇದ್ದುದನ್ನು ಕಾಣಬಹುದು. ದಕ್ಷಿಣಾಭಿ ಮುಖದಲ್ಲಿರುವ ಈ ಬಸದಿಯು ಅಮೃತ ಸೇನಾ ಮುನಿ ಮಹಾರಾಜರು ಅಲ್ಲಿ ಸುತ್ತಮುತ್ತಲಿನಲ್ಲಿ ಚಾತುರ್ಮಾಸ ಕೈಗೊಂಡಾಗ ಅವರ ಅಣತೆಯಂತೆ ಇಲ್ಲಿನ ಮಹಿಮೆಯ ಬಗ್ಗೆ ಅರಿತ ಗ್ರಾಮಸ್ಥರು ಇದನ್ನು ಹಂತ ಹಂತವಾಗಿ ಅಭಿವೃಧಿ ಪಡಿಸುತ್ತಾರೆ. ಹಾಗೆಯೇ ಪ್ರತಿ ವರ್ಷದಂತೆ ದಿನಾಂಕ 04-02-2019ರಂದು ಇಲ್ಲಿನ ಶ್ರೀ ಬ್ರಹ್ಮೇಶ ಮೂರ್ತಿಯ ಪಲ್ಲಕಿ ಉತ್ಸವವನ್ನು ಏರ್ಪಡಿಸಿ ಧ್ವಜಾರೋಹಣ, ಪಂಚಾಮೃತ ಅಭಿಷೇಕಗಳು ಸಹ ಬಹಳ ವಿಧಿವತ್ತಾಗಿ ನಡೆಯಿತು.
(ಪ್ರಶಾಂತ್ ರವರು ಮಾತನಾಡಿ, ಅಮೃತ ಸೇನಾ ಮುನಿ ಮಹಾರಾಜರು ನಮಗೆ ತಿಳಿಸಿಕೊಟ್ಟ ಮಾರ್ಗದರ್ಶನದಂತೆ ಪ್ರತಿ ಅಮಾವಾಸ್ಯೆ ದಿನದಂದು ಈ ಬಸದಿಯಲ್ಲಿ ಪೂಜಾ ಕಾರ್ಯವನ್ನು ನೆರೆವೇರಿಸಿಕೊಂಡು ಬರುತ್ತಿರುವುದರ ಬಗ್ಗೆ ತಿಳಿಸಿದರು).
ಇಲ್ಲಿನ ಭಕ್ತಾದಿಗಳು ಜ್ವಾಲಮಾಲ ಡಾಟ್ ನ್ಯೂಸ್ ಗಾಗಿ ಮಾತನಾಡಿ, ಸಂತಸ ವ್ಯಕ್ತಪಡಿಸಿದರು.
ಸಮಾಜದವರು ಮಾತನಾಡಿ ನಮ್ಮ ಕ್ಷೇತ್ರದ ಶಾಸಕರಾದ ಎಂ.ಪಿ ರವೀಂದ್ರ ರವರು ನಾಲ್ಕು ಲಕ್ಷ ಮತ್ತು ಮೂರು ಲಕ್ಷ ಅನುದಾನವನ್ನು ಕೊಡಿಸಿದರು ಎಂದು ತಿಳಿಸಿದರು.
ಇಂತಹ ಪಾವನ ಅತಿಶಯ ಯುಕ್ತ ಕ್ಷೇತ್ರಗಳ ದರ್ಶನಕ್ಕಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್.














