ಧರ್ಮಸ್ಥಳ ಮಸ್ಥಕಾಭಿಷೇಕ ದಿನ ೪ ಅಧಿನಾಥ ವೈರಾಗ್ಯ

ಹೋಗುತ್ತ ಹೋಗುತ್ತ ಇದುವರೆ ನಡೆದಿದ್ದನ್ನ ನೆನಪಿಸಿಕೊಳ್ಳಣ, ಭೋಗ ಭೂಮಿ ಕರ್ಮ ಭೂಮಿಯಾಗುವ ಕಾಲ ಸನ್ನಹಿತವಾಯಿತು, ಕಾಮಧೇನು ಕಲ್ಪವೃಕ್ಷಗಳು ನಿಧಾನವಾಗಿ ಕಣ್ಮರೆಯಾಗತೊಡಗಿದವು, ಆಗ ಕಂಗೆಟ್ಟು ಅಸಹಾಯಕರಾದ ಜನರಿಗೆ ವೃಷಭನಾಥರು ಹಸಿ, ಮಸಿ, ಕೃಷಿ, ವಾಣಿಜ್ಯ, ವಿಧ್ಯೆ, ಶಿಲ್ಪಗಳೆಂಬ ಆರು ಜೀವನ ಮಾರ್ಗಗಳನ್ನ ಬೋಧಿಸಿ ಹಾದಿ ಬ್ರಹ್ಮರೆನಿಸಿದರು. ಕ್ಷತ್ರೀಯ, ವೈಶ್ಯ, ಶ್ರಮಿಕರೆಂಬ ಮೂರು ವರ್ಗಗಳು ಸೃಷ್ಟಿಯಾದವು, ಇನ್ನೊಂದೆಡೆ ವೃಷಭನಾಥರು ಸಂಸಾರಿಯಾದರು, ಯಶಸ್ವತಿ, ಸುನಂದಾ ದೇವಿಯರನ್ನ ವಿವಾಹವಾದರು. ಅವರ ದಾಂಪತ್ಯದ ಫಲವಾಗಿ ಯಶಸ್ವತಿ ದೇವಿಯಿಂದ ಹಿರಿಯನಾದ ಭರತನೆ ಮೊದಲಾದ 100ಮಂದಿ ಗಂಡು ಮಕ್ಕಳು ಹಾಗೂ ಬ್ರಹ್ಮಿಎಂಬ ಹೆಣ್ಣುಮಗಳನ್ನು ಪಡೆದರು ಸುನಂದಾ ದೇವಿಯಿಂದ  ಬಾಹುಬಲಿ ಎಂಬ ಕುಮಾರನನ್ನ ಹಾಗೂ ಸುಂದರಿ ಎಂಬ ಹೆಣ್ಣುಮಗಳನ್ನ ಪಡೆದರು. ಪಡೆದ ಮಕ್ಕಳಿಗೆ  ಒಳ್ಳೆಯ ವಿಧ್ಯೆ ಬುದ್ಧಿ ಕಲಿಸಿ ಸುಸಂಸ್ಕೃತರನ್ನಾಗಿ ಮಾಡಿದರು.

(ಅದೆ ದಿನದಂದು ಊರ ಪರಊರ ಮಕ್ಕಳಿಗೂ ಗುರುಗಳಿಂದ ಅಕ್ಷರ ಅಭ್ಯಾಸ ಮತ್ತು ವ್ರತ ಸ್ವೀಕಾರ ಕಾರ್ಯಕ್ರಮ ನಡೆಯಿತು).

ಎಲ್ಲವೂ ಚನ್ನಾಗಿತ್ತು ಹೀಗೆ ರಾಜ ವೈಭವದ ಸುಖದಲ್ಲಿರುವಾಗಲೆ ದೇವೇಂದ್ರನ ಅಪೇಕ್ಷೆಯಂತೆ ನೀಲಾಂಜನ ನೃತ್ಯ ನಡೆಯಿತು.

ಜ್ವಾಲಮಾಲ ಡಾಟ್ ನ್ಯೂಸ್.