ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕಕ್ಕೆ ಇನ್ನುಕೆಲವೇ ದಿನಗಳು ಮಾತ್ರ. ಮಹೋತ್ಸವದ ಪ್ರಾರಂಭದ ದಿನದ ಪೂಜಾಕಾರ್ಯಕ್ರಮದೊಂದಿಗೆ ನಾವು ನಿಮ್ಮ ಮುಂದಿದ್ದೇವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಶ್ರೀ ಶ್ರೀ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಸ್ಥಕಾಭಿಷೇಕದ ಪ್ರಾರಂಭದ ದಿನವಾದ ಇಂದು ಅಗ್ರೋಧಕ ಮೆರವಣಿಗೆ ಕ್ಷೇತ್ರದ ಪ್ರಮುಖ ಬೀದಿಗಳಿಂದ ಸಾಗಿ ರತ್ನಗಿರಿಗೆ ತಲುಪಿತು.
ಅಗ್ರೋಧಕ ಮೆರವಣಿಗೆ ಇಂದ್ರ ಪ್ರತಿಷ್ಟೆ ತೋರಣ ಮುಹೂರ್ತ ಈ ಕಾರ್ಯಕ್ರಮಗಳೊಂದಿಗೆ ಇಂದಿನ ದಿನ ಪ್ರಾರಂಭವಾಯಿತು.
ರತ್ನಗಿರಿಯ ಗೊಮ್ಮಟ ದೇವನ ಸಮ್ಮುಖದಲ್ಲಿ ಇಂದ್ರ ಪ್ರತಿಷ್ಟೆ ಪೂಜಾ ವಿಧಿಯು ನಡೆಯಿತು. ವಿಧಾನದಲ್ಲಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು, ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರು, ಹೆಗ್ಗಡೆ ಪರಿವಾರದವರಾದ ಶ್ರೀ ಡಿ. ಸುರೇಂದ್ರ ಕುಮಾರ್ ರವರು, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು, ಶ್ರೀಮತಿ ಸುಪ್ರಿಯ ಹರ್ಷೇಂದ್ರ ಕುಮಾರ್ ರವರು, ಶ್ರೀ ಡಿ. ರಾಜೇಂದ್ರ ಕುಮಾರ್ ರವರು, ಶ್ರದ್ಧಅಮಿತ್ ರವರು, ಹಾಗೂ ಸಕಲ ಪರಿವಾರದವರು ಪಾಲ್ಗೋಂಡು ನೆರೆವೇರಿಸಿದರು.
ತೋರಣ ಮುಹೂರ್ತ ಕಾರ್ಯವನ್ನು ಪರಿವಾರದವರು ಜೈನ ಬಂಧುಗಳು ಭಾಗವಹಿಸಿ ವಿಧಿ ಪೂರ್ವಕವಾಗಿ ನಡೆಸುವುದರ ಮೂಲಕ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಶ್ರೀ ಕ್ಷೇರದೆಡೆಗೆ ಜಗವೇ ತಿರುಗಿ
ನೋಡುವಂತೆ ಮಾಡಿರುವ ವೈಭಹೊಪಿ ಮಹೋತ್ಸವವನ್ನು ಒಮ್ಮೆ ಕಣ್ತುಂಬಿಕೊಳ್ಳಲು ಮರೆಯದಿರಿ ಎಂದು ಹೇಳುತ್ತಾ ನಡೆದ ಜನ ಕಲ್ಯಾಣ ಯೋಜನೆ ಉದ್ಘಾಟನ ಕಾರ್ಯಕ್ರಮಕ್ಕೆ ನಿಮ್ಮನ್ನು ಕರೆದೊಯುತ್ತಿದ್ದೇವೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಕರ್ನಾಟಕ ಸರ್ಕಾರದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃಧಿ ಯೋಜನೆ ಸಹ ಭಾಗಿತ್ವದಲ್ಲಿ ಜನಕಲ್ಯಾಣ ಕಾರ್ಯಕ್ರಮದ ಚತುಸ್ಪದ ರಸ್ತೆ ಕೆರೆಸಂಜೀವಿನಿ ಯೋಜನೆ ಉದ್ಘಾಟನ ಕಾರ್ಯಕ್ರಮ ದಿನಾಂಕ 9-2-2019ರಂದು ಮಾನ್ಯ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಯವರಿಂದ ನಡೆಯಿತು.
ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಪೇಜಾವರ ಮಠದ ಶ್ರೀಗಳಾದ ಪರಮ ಪೂಜ್ಯ ಶ್ರೀ ವಿಶ್ವೇಶ್ವರ ತೀರ್ಥ ಶ್ರೀ ಪಾದಂಗಳಿಂದ ದೀಪ ಪ್ರಜ್ವಲಿಸುವುದರ ಮೂಲಕ ನಡೆಸಲಾಯಿತು.
ಶ್ರೀ ಕ್ಷೇತ್ರದ ಧರ್ಮಾಧಿಕರಿಗಳಾದ ಪೂಜ್ಯ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರು ಈ ಸಂದರ್ಭದಲ್ಲಿ ಮಾತನಾಡಿ ನಡೆಯಲ್ಲಿರುವ ಜನಕಲ್ಯಾಣದ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಮಸ್ತಕಾಭಿಷೇಕದ ಮಹೋತ್ಸವದ ಪ್ರಧಾನ ಸಂಚಾಲಕರಾದ ಶ್ರೀ ಡಿ ಸುರೇಂದ್ರ ಕುಮಾರ್ ರವರು, ಸಂಚಾಲಕರಾದ ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು, ಶ್ರೀ ಸಿ.ಎನ್. ಪುಟ್ಟರಾಜು, ಸದಾನಂದ ಗೌಡರು, ಫಾರೂಕ್, ಯು .ಟಿ. ಖಾದರ್, ಶ್ರೀ ಹರೀಶ್ ಪುಂಜ, ಶ್ರೀ ಬೋಜೇಗೌಡರು, ಹೆಚ್,ಎಲ್ ಮಂಜುನಾಥ್, ಪೋಲಿಸ್ ವರಿಷ್ಟಾಧಿಕಾರಿಗಳಾದ ಅಶೋಕ್ ಪ್ರಸಾದ್ ರವರು ಉಪಸ್ಥಿತರಿದ್ದರು.
ಪೇಜಾವರ ಶ್ರೀಗಳವರು ಮಾತನಾಡಿ ಮೂರ್ತಿಗೆ ದ್ರವ್ಯಗಳ ಅಭಿಷೇಕ ಜನತೆಗೆ ಜ್ಞಾನ ಭಕ್ತಿಯ ಅಭಿಷೇಕ ನಡೆಯಲ್ಲಿದೆ, ಮಸ್ತಕಾಭಿಷೇಕ ನಮ್ಮ ಮಸ್ತಕ್ಕೆ ಅಭಿಷೇಕ ಎಂದು. ಇಂತಹ ದೊಡ್ಡ ಪ್ರಮಾಣದ ಮಹೋತ್ಸವಗಳಿಂದ ಅತ್ಯಂತ ಧೀರ್ಘಕಾಲಕ್ಕೆ ಒಳ್ಳೆಯ ಪರಿಣಾಮ ಉಂಟಾಗುತ್ತದೆ.
ಕವಂದರಿಂದ ನಿರಂತರ ಜನ ಕಲ್ಯಾಣ ಸಾಗುತ್ತಲಿರಲಿ ಎಂದು ಆಶೀರ್ವದಿಸಿದರು.
ಕೇವಲಿ ಶೀರೋನಾಮಿಯ ಸ್ಮರಣ ಸಂಚಿಕೆ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ಸದಾನಂದ ಗೌಡರಿಂದ ಲೋಕಾರ್ಪಣೆಗೊಂಡಿತ್ತು. ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು ಒಬ್ಬ ವ್ಯಕ್ತಿ ಸಮಾಜದ ಶಕ್ತಿ ಹಾಗಬೇಕೆಂದರೆ ಅವನಿಗೆ ಬೇಕಾದ ನೈತಿಕಥೆ ವ್ಯವಸ್ಥೆಗಳನ್ನು ಕಲ್ಪಿಸ ಬೇಕೆಂದು ಜನಕಲ್ಯಾಣದಲ್ಲಿ ತೊಡಗಿದ ಹೆಗ್ಗಡೆಯವರದು ನಿರಂತರ ಅಭಿಯಾನ ಎಂದು ಅಭಿಪ್ರಾಯ ಪಟ್ಟರು.
ಪ್ರಥಮ ಹಂತದ ಚತುಷ್ ಪದ ರಸ್ತೆಯ ಉದ್ಘಾಟನೆಗೊಳಿಸಿ ಸಭೆಗೆ ಆಗಮಿಸಿದ ಮಾನ್ಯ ಮುಖ್ಯ ಮಂತ್ರಿಗಳು ಸಭೆಯನ್ನುದೇಶಿಸಿ ಅಪೂರ್ವ ಸಂಕಲ್ಪ ಶಕ್ತಿ ಅನನ್ಯ ಧಾರ್ಮಿಕ ಪರಂಪರ ಮೂರ್ತಿ ರೂಪ ಬಾಹುಬಲಿಗೆ ನಮಿಸಿ ಧರ್ಮಸ್ಥಳದ ನ್ಯಾಯ ಪೀಠದಲ್ಲಿ ನಂಬಿಕೆ ಜೊತೆಗೆ ಬದುಕು ನಡೆಸಲು ಅಭಯವು ದೊರೆಯುತ್ತದೆ ಎಂದರು.
ಕೆರೆ ಸಂರಕ್ಷಣೆ ಅಭಿವೃಧಿ ಪ್ರಾಧಿಕಾರದ ಅಡ್ಡಿಯಲ್ಲಿ ಕೆರೆ ಸಂಜೀವಿನಿ ಯೋಜನೆ ಜಾರಿಗೆ ತಂದು ಕೆರೆಗಳ ಹೂಳೆತ್ತುವುದರ ಮೂಲಕ ಮಹಾಮಸ್ತಕಾಭಿಷೇಕದ ಪ್ರಯುಕ್ತ ಮೂರು ಕೆರೆಗಳನ್ನು ಹೆಚ್ಚುವರಿಯಾಗಿ ಅಭಿವೃಧ್ಧಿ ಪಡಿಸಲು ಕೈಗೆತ್ತುಕೊಳ್ಳಲಾಗಿದೆ. ಈ ವಿಷಯವಾಗಿ ಮಾನ್ಯ ಮುಖ್ಯ ಮಂತ್ರಿಗಳು 88ಲಕ್ಷ ರೂಗಳ ಚಕ್ಕನ್ನು ಶ್ರೀ ಕ್ಷೇತ್ರದ ಗ್ರಾಮಾಭಿವೃಧ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕರಾದ ಮಂಜುನಾಥ್ ರವರಿಗೆ ಹಸ್ತಾಂತರಿಸುವುದರ ಮೂಲಕ ಕಾರ್ಯಕ್ರಮದ ಒಡಂಬಡಿಕೆ ಮಾಡಿಕೊಳ್ಳಲಾಯಿತ್ತು.
ಸಾಂಕೇತಿಕವಾಗಿ ಅನೇಕ ಕೆರೆ ಅಭಿವೃಧ್ಧಿ ಸಂಘಗಳಿಗೆ ಕೆರೆ ಬಳಕೆದಾರರ ಸಂಘಗಳಿಗೆ ಅನುದಾನವನ್ನು ನೀಡಲಾಯಿತು. ಮಸ್ತಕಾಭಿಷೇಕದ ಅಂಗವಾಗಿ ವಿಶೇಷ ಪೋರ್ಟಲ್ ಕವರ್ ಅನ್ನು ಯು.ಟಿ. ಖಾದರ್ ರವರು ಉದ್ಘಾಟಿಸಿದರು ಈ ಸಂದರ್ಭದಲ್ಲಿ ವಿಮಲ್ ತಾಳಿ
ಕೋಟೆರವರು, ಪ್ರಸನ್ನ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷಿಯ ಭಾಷಣದಲ್ಲಿ ಪೂಜ್ಯ ಕಾವಂದರು ಧರ್ಮಸ್ಥಳಕ್ಕೆ ಸಾವಿರ ವರ್ಷ ಉಳಿಯುವಂತಹ ಕೆಲಸ ಮಾಡಿದ ರೇವಣ್ಣರವರನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿ ಕುಮಾರ್ ಸ್ವಾಮಿಯವರ ಉನ್ನತ ವ್ಯಕ್ತಿತ್ವದ ಬಗ್ಗೆ ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಅಜಿತ್ ಕುಮಾರ್ ಕೋಕ್ರಾಡಿಯವರು ಅದ್ಭುತವಾಗಿ ನಡೆಸಿಕೊಟ್ಟರು. ಮಹಾಮಸ್ತಕಾಭಿಷೇಕದ ಮುಂದುವರಿದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














