ಮುದುಬಿದ್ರೆ ಜಿನಭಜನಾ ಸ್ಪರ್ಧೆ ಫಿನಾಲೆ 2018-2019/ ಜ್ವಲಮಲನ್ಯೂಸ್ / 2019

ಎಲ್ಲರಿಗೂ ಜೈ ಜಿನೇದ್ರ ಹಿಂದಿನಿಂದ ನಡೆದು ಬಂದ ಸಂಪ್ರದಾಯುತ ಕಲಾ ಪ್ರಕಾರದಲ್ಲೊಂದು ಜಿನ ಭಜನೆ. ಆಧುನಿಕಥೆಯ ಸೊಗಿನಲ್ಲಿ ನಶಿಸಿ ಹೋಗುತ್ತಿರುವ ಎನ್ನುವಂತಹ ಸಂದರ್ಭಹೊಂದಿತ್ತು ಅದರೆ ಈಗ ಹಾಗೆನ್ನಲಾಗದು ಈಗ ಸಮೃದ್ಧವಾಗಿದೆ ಜಿನ ಭಜನೆ, ಅದಕ್ಕೆ ಕಾರಣ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು.

ಭಜನೆಯ ರೂಪದಲ್ಲಿ ಭಕ್ತಿ ಮಾರ್ಗದಲ್ಲಿ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ನಮ್ಮ ಮಕ್ಕಳು ಸಹ ಧರ್ಮದ ಹಾದಿಯಲ್ಲಿ ನಡೆದು ಸಂಸ್ಕಾರವಂತರಾಗ ಬೇಕೆನ್ನುವ ಸಂಕಲ್ಪದೊಂದಿಗೆ ಯಾವುದೇ ಪ್ರತಿಫಲ ಪೇಕ್ಷೆಯು ಇಲ್ಲದೆ  ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಅಂದು ಇಟ್ಟ ಹೆಜ್ಜೆ ಇಂದು ಫಲಕೊಟ್ಟಿದೆ, ರಾಜ್ಯದದ್ದಕ್ಕೂ ಸ್ಪಂದನೆ ಸಿಕ್ಕಿದೆ. ವರ್ಷದಿಂದ ವರ್ಷಕ್ಕೆ ಸುಧಾರಿತ ಪಲಿತಾಂಶದೊಂದಿಗೆ ಮೂರನೇ ಸಿಜ಼ನ್ ವರೆಗೆ ಬಂದಿರುವ ಸಂಭ್ರಮ ನಮ್ಮಲಿ ಮನೆ ಮಾಡಿದೆ.

ಜಗತ್ ವಿಖ್ಯಾತ ಧಾರ್ಮಿಕ ಕ್ಷೇತ್ರ ನ್ಯಾಯ ನೀತಿಯ ಬೀಡು ತುಳುನಾಡಿನ ದಂಡೆಯಲ್ಲಿರುವ ಧರ್ಮ ಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಫೆಬ್ರವರಿ 2019ರಲ್ಲಿ ನಡೆಯಲ್ಲಿದು, ಇದರ ಅಂಗವಾಗಿ ಕ್ಷೇತ್ರದ ಯಶಸ್ವಿ ನೇತೃತ್ವ ವಹಿಸಿರುವ ಧರ್ಮಾಧಿಕಾರಿಗಳಾದ  ಪದ್ಮವಿಭೂಷಣ ರಾಜಶ್ರೀ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಹಾಗೂ ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಮಾರ್ಗ ದರ್ಶನದಲ್ಲಿ ಅವರು ನಡೆಸುವ ಭಜನಾ ಕಮ್ಮಟಗಳ ಸ್ಪೂರ್ತಿ ಪಡೆದು, ಶ್ರೀ ಹರ್ಷೆಂದ್ರ ಕುಮಾರ್

ದಂಪತಿಗಳ ಸಹಕಾರದೊಂದಿಗೆ, ಶ್ರೀ ಡಿ. ಸುರೇಂದ್ರ ಕುಮಾರ್ ರವರು ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಜೈನ್ ಮಿಲನ್ ವಲಯ ಎಂಟರ ಪ್ರತಿ ವಿಭಾಗಗಳು ಜೊತೆಗೂಡಿ ಧರ್ಮ ಸಮಾಜದವರು ಕೈಜೋಡಿಸಿ ಜಿನ ಭಜನಾ ಸ್ಪರ್ಧೆ ಅದ್ಬುತ ಯಶಸ್ಸನ್ನು ಕಂಡಿದೆ. ಅನಿತಕ್ಕನ ಕನಸು ನನಸಾಗಿದೆ .

ಎಲ್ಲರನ್ನು ಒಗ್ಗೂಡಿಸಿ ಸುಂದರ ಕ್ಷಣಗಳನ್ನು ಸೃಷ್ಟಿಸಿ ಕೊಟ್ಟ ಹಾಗೂ ಮುಂದಿನ ಪೀಳಿಗೆಯ ನಾಳೆಗಳನ್ನು ಸುಕೃತವಾಗಿಸುವ ಒಂದು ಪ್ರಯತ್ನದಲ್ಲಿ ಭಾಗಿಯಾದ ಎಲ್ಲರಿಗೂ ದನ್ಯವಾದಗಳನ್ನು ತಿಳಿಸುತ್ತ, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರದೆ ತವರುರಾದ ಜೈನಕಾಶಿ ಮೂಡುಬಿದ್ರೆಯಲ್ಲಿ ಈ ಬಾರಿ ಜಿನ ಭಜನಾ ಫೈನಲ್ಸ್ ಸ್ಪರ್ಧೆ ನಡೆಯುತ್ತಿದೆ. ಅದಕ್ಕೂ ಮುನ್ನ ಪ್ರತಿ ವಿಭಾಗಗಳಲ್ಲಿ ನಡೆದ ಸ್ಪರ್ಧೆಯ ಮರೆಯಲಾಗದ ಕ್ಷಣಗಳನೊಮ್ಮೆ ನೋಡಿ ಬರೋಣ.

ಕಾರ್ಯಕ್ರಮದ ಮೊದಲಿಗೆ ಮಹಾಕವಿ ಶೃಂಗಾರ ಕವಿ ಹಂಸರಾಜ ರತ್ನಾಕರವರ್ಣಿ ಪ್ರತಿಮೆಗೆ ದೀಪ ಬೆಳಗಿಸಿ ನೆನೆಯುವುದರ ಮೂಲಕ ಉದ್ಘಾಟಿಸಲಾಯಿತು. ಹಾಗೂ ಭರತೇಶ ವೈಭವ ಮತ್ತು ಮಹಾಪುರಾಣ ಕೃತಿಗಳು, ರೋಲಿಂಗ್ ಟ್ರೋಫಿಯಾದ ಶಾರದಮೂರ್ತಿಯನ್ನು ಮೆರವಣಿಗೆಯೊಂದಿಗೆ ಪದ್ಮಾವತಿ ಕಲಾಮಂದಿರದ ವೇದಿಕೆಗೆ ತರಲಾಯಿತು.

ದಿನಾಂಕ 5 ಮತ್ತು 6 ಜನವರಿ 2019ರ ಎರಡು ದಿನಗಳಲ್ಲಿ ಮೂಡುಬಿದ್ರೆಯ ಶ್ರೀ ಪದ್ಮಾವತಿ ಕಲಾಮಂದಿರದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ದಿನಾಂಕ 5-1-2019ರ ಸೆಮಿಫೈನಲ್ಸ್ ಸ್ಪರ್ಧೆಯನ್ನು ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರು ಮತ್ತು ಮೂಡುಬಿದ್ರೆಯ ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಸ್ವಾಮೀಜಿಯವರು ಶೀಲಾ ಸ್ಥಂಭಕೆ ಹಾಕಲಾದ ಘಂಟೆಯನ್ನು ಬಾರಿಸುವುದರ ಮೂಲಕ ವಿಭಿನ್ನತೆ ಯನ್ನು ಮೇರೆದ ಉದ್ಘಾಟನೆಯನ್ನು ನೆರೆವೇರಿಸಿದರು. ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿಯವರ

ಪಾವನ ಸಾನಿಧ್ಯ ಉದ್ಘಾಟಕರಾಗಿ ಶ್ರೀ ಕ್ಷೇತ್ರ ಧರ್ಮ ಸ್ಥಳದ ಧರ್ಮಾಧಿಕಾರಿಗಲಾದ ಪೂಜ್ಯ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆಯವರು, ಮುಖ್ಯ ಅತಿಥಿಗಳಾಗಿ ಶ್ರೀ ಕೆ. ಅಭಯ್ ಚಂದ್ರ ಜೈನ್, ಡಾ|| ಎನ್ ಎಂ. ರಾಜೇಂದ್ರ ಕುಮಾರ್ ರವರು, ಗೌರವ ಉಪಸ್ಥಿತಿಯಲ್ಲಿ ಶ್ರೀ ಡಿ ಸುರೇಂದ್ರ ಕುಮಾರ್ ರವರು, ಶ್ರೀ ಮತಿ ಅನಿತಾ ಸುರೇಂದ್ರ ಕುಮಾರ್ ರವರು, ವಲಯ ಅಧ್ಯಕ್ಷರಾದ ಪುಷ್ಪರಾಜ್ ಜೈನ್, ಮೂಡುಬಿದ್ರೆಯ ಜೈನ್ ಮಿಲನ್ ಶ್ವೇತ ಜೈನ್ ರವರು ಉಪಸ್ಥಿತರಿದ್ದರು.

ಈ ಸುಸಂದರ್ಭದಲ್ಲಿ ಮಾತನಾಡಿದ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರು, ಭಜನೆಗೆ ಸಂಸಾರವನ್ನು ಒಂದುಗೂಡಿಸುವ ಶಕ್ತಿ ಇದೆ  ಭಕ್ತಿ ಸಾಹಿತ್ಯದಿಂದ  ಧರ್ಮ ಪ್ರಸಾರ ಸಾಧ್ಯ ಎಂದು ತಿಳಿಸಿದರು. 

ಭಾರತ ಭೂಷಣ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚರ್ಯವರ್ಯ ಮಹಾ ಸ್ವಾಮೀಜಿಯವರು ಮಾತನಾಡಿ ಭಗವಂತನನ್ನು ಸ್ಮರಿಸುವುದೆ ಮಂತ್ರ ಮತ್ತು ಭಜನೆಯ ಮೂಲಕ ಅದ್ದರಿಂದ ಮಂತ್ರ ಪಟಿಸಿದಾಗ ಭಜನೆ ಮಾಡಿದಾಗ ನೋವು ಕಳೆದು ಮನಸ್ಸು ಶಾಂತವಾಗುತ್ತದೆ, ಮತ್ತು ಅಹಲಾದಕ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಅದೇ ದಿನ ಸಂಜೆ ಸ್ಪರ್ಧೆಯ ನಂತರ ಎಸ್.ಡಿ.ಎಂ. ಕಲಾ ವೈಭವ ತಂಡದಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ಮೇರಗು ತಂದವು.

ಜಯ ಶ್ರೀ ಹೊರನಾಡುರವರಿಂದ ಪ್ರಾರ್ಥನೆ ಮೂಲಕ ಫೈನಲ್ಸ್ ಕಾರ್ಯ ಕ್ರಮ ಪ್ರಾರಂಭವಾಯಿತು. ಡಾ|| ಯಶೋವರ್ಮ ರವರು ಫೈನಲ್ಸ್ ಹಿಸ್ಟ್ ಗಳ ಪಟ್ಟಿಯನ್ನು ಪ್ರಕಟಿಸಿದರು.

ಭೋಜನ ವಿರಾಮದ ನಂತರ ಜರುಗಿದ ಮೂಡುಬಿದ್ರೆಯನ್ನು ಪರಿಚಯಿಸುವ ಯಕ್ಷಗಾನ ಹೊಸ ಅಕೀರ್ತನೆಯ ಮೆರವಣಿಗೆ ಮತ್ತು ಮೂಡುಬಿದ್ರೆಯ ಜೈನ್ ಮಿಲನ್ ಕಾರ್ಯಕ್ರಮಗಳು ನೇರೆದಿದ್ದವರನೆಲ್ಲಾ ಮನರಂಜಿಸಿದವು.

ಚಲನಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಗುರುಕಿರಣ್ ರವರು ಮತ್ತು ಖ್ಯಾತ ನಟ ಶ್ರೀ ವಿಜಯ ರಾಘವೇಂದ್ರ ರವರು ಮುಖ್ಯ ಅತಿಥಿಗಳಾಗಿ ಸಂಜೆ ಸಮಾರೋಪ ಸಮಾರಂಭದಲ್ಲಿ ಪಾಲ್ಗೋಂಡಿದರು.

ದಿನಾಂಕ 6 ಜನವರಿ 2019ರ ಫೈನಲ್ಸ್ ಸ್ಪರ್ಧೆಯ ದಿನ ಪರಮ ಪೂಜ್ಯ ಡಾ|| ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯವರ ಪೂಜ್ಯ ಶ್ರೀಮತಿ ಹೇಮಾವತಿ  ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದು ಸಂಸಾರ ಮತ್ತು ಸಂಸ್ಕಾರಗಳ ಬಗ್ಗೆ ತಿಳಿಸಿದರು.

ಶ್ರೀ ಡಿ.ಆರ್. ಹರ್ಷೆಂದ್ರ ಕುಮಾರ್ ರವರು ಅಧ್ಯಕ್ಷಿಯ ಭಾಷಣದಲ್ಲಿ ಭಜನಾ ಕಾರ್ಯಕ್ರಮವನ್ನು ಶ್ಲಾಘೀಸಿದರು.

(ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಮಾತನಾಡಿ ತಮ್ಮ ತವರೂರಾದ ಮೂಡುಬಿದ್ರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು).

ಕಿರಿಯರ ವಿಭಾಗದಲ್ಲಿ ಬೆಂಗಳೂರು ವಿಭಾಗದ ಹಂಸ ಗಾನ ಪ್ರಥಮ ಸ್ಥಾನ, ಮಂಗಳೂರು ವಿಭಾಗದ ಜೈ ಧವಳ ಭಜನಾ ತಂಡ ದ್ವೀತಿಯ ಸ್ಥಾನ, ಜಮಖಂಡಿಯ ವಿಭಾಗದ ಪಾರ್ಶ್ವನಾಥ ಜಿನ ಭಜನಾ ಮಂಡಳಿ ಜಮಖಂಡಿ ತೃತೀಯ ಸ್ಥಾನ ಪಡೆದವು.

ಹಿರಿಯರ ವಿಭಾಗದಲ್ಲಿ ಜಮಖಂಡಿಯ ವಿಭಾಗದ ಶಾಂತಿನಾಥ ಭಜನಾ ಮಂಡಳಿ ಅಲಗೂರು ಪ್ರಥಮ ಸ್ಥಾನ, ಮಂಗಳೂರು ವಿಭಾಗದ  ಹೇಮಶ್ರೀ ಭಜನಾ ತಂಡ ದ್ವೀತಿಯ ಸ್ಥಾನ, ಬೆಂಗಳೂರು ವಿಭಾಗದ ಸ್ವರಾಭಿಷೇಕ ತೃತೀಯ ಸ್ಥಾನ ಪಡೆದವು.

ರೋಲಿಂಗ್ ಟೋಫಿಯನ್ನು ಜಮಖಂಡಿ ವಿಭಾಗದವರು ಪಡೆದವು.

(ಗಣ್ಯರುಗಳು ಮಾತನಾಡಿ ಕಾರ್ಯಕ್ರಮದ ವಿಶೇಷತೆಯ ಬಗ್ಗೆ ಮತ್ತು ವೈಭವವನ್ನು ವಿವರಿಸಿದರು).

ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.