(ಬೆಂಗಳೂರಿನಲ್ಲಿ ಶಶಿಕಾಂತ್ ಜೈನ್ ಎಂಬವರು ವಿದ್ವಾಂಸರು ಅಗಿದ್ದರು ನಮ್ಮ ತಂದೆಯವರಿಗರ ಅಪ್ತರು ಮತ್ತು ಜೋತಿಷ್ಯರು ಅಗಿದ್ದರು. ನಮ್ಮ ತಂದೆಯವರು ಅವರನ್ನು ವಿಚಾರಿಸಿದಾಗ ಅವರು ನಮ್ಮಗೆ ಈ ಬೆಟ್ಟವನ್ನು (ಚಂದ್ರಗಿರಿ) ಸೂಚಿಸಿದರು.
ಸಿವಿಲ್ ಇಂಜಿನಿಯರಿಂಗ್ ಡಿಪಾರ್ಟ್ ಮೆಂಟ್ ನ ಹೆಚ್.ಒ.ಡಿ ಯವರಾದ ಸೂರತ್ಕಲ್ ನವರಾದ ಬಸವರಾಜಯ್ಯರವರ ತಾಂತ್ರಿಕ ಯೋಜನೆಯ ಮೇರೆಗೆ ವಿಗ್ರಹವನ್ನು ನಿಲ್ಲಿಸಲಾಯಿತ್ತು. ಪ್ರಥಮ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಬಾಹುಬಲಿ ಮೂರ್ತಿಗೆ ದೊಡ್ಡದಾದ ದೊತಿ, ಅಂಗ ವಸ್ತ್ರ ಮತ್ತು ಪೇಟವನ್ನು ತೊಡಿಸಲಾಗಿತ್ತು, ದೀಕ್ಷಕಲ್ಯಾಣವಾದ ನಂತರ ಬಟ್ಟೆಯನ್ನು ತೆಗೆಯಲಾಯಿತು, ವಿಮಲ ಸಾಗರ ಮಿನಿ ಮಹಾರಾಜರು ಮತ್ತು ಅಚಾರ್ಯಶ್ರೀ ವಿದ್ಯಾನಂದ ಮುನಿ ಮಹಾರಾಜರು ಸೂರ್ಯ ಮಂತ್ರೋಪದೇಶವನ್ನು ಮಾಡುತ್ತೇವೆ ಎಂದು ಅದಕ್ಕಾಗಿ ಒಂದು ಟ್ರ್ಯಾಲಿಯನ್ನು ಮಾಡಿದ್ದೆವು ಅವರು ಬಾಹುಬಲಿ ಮೂರ್ತಿಯ ಕಿವಿಯಲ್ಲಿ ಮಂತ್ರೋಪದೇಶವನ್ನು ಮಾಡಿದರು. ಅದು ನಮ್ಮಗೆ ಐತಿಹಾಸಿಕ ಸಂದರ್ಭವಾಗಿತ್ತು).
ಮೂರ್ತಿಯನ್ನು ಸ್ಥಪಿಸಿಯೂ ಹಾಗಿತ್ತು 1982ರಲ್ಲಿ ಪ್ರತಿಷ್ಟಾಪನ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಪ್ರಸ್ತುತ ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಬಂದರೆ ಇನ್ನೂ ಕೆಲವೇ ದಿನಗಳು ಬಾಕಿಯಿದ್ದು ಅದರ ಪ್ರಗತಿ ಕಾರ್ಯಗಳ ಬಗ್ಗೆ ತಿಳಿಯೋಣ. ಜಗತ್ ಪ್ರಸಿದ್ದ ಕ್ಷೇತ್ರದ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ ನಡೆಯಲ್ಲಿದ್ದು ಅದರ ಅಂಗವಾಗಿ ಅಟ್ಟಣಿಗೆ ನಿರ್ಮಾಣ ಕಾರ್ಯ ಜನವರಿ 2ರಂದು ಅರಂಭವಾಗಿದೆ.
ಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರು ಪರಿವಾರ ಸಮೇತರಾಗಿ ಅಟ್ಟಣಿಗೆ ಪೂಜಾ ಕಾರ್ಯದ ಮೂಲಕ ಮಂಗಳ ಶುಭ ಕಾರ್ಯಕ್ಕೆ ಚಾಲನೆಯನ್ನು ನೀಡಿದರು. ಮೂನಿಗಳ ಹಾಗೂ ಮಾತಾಜೀ ಯವರ ದಿವ್ಯ ಉಪಸ್ಥಿತಿಯಲ್ಲಿ, ಸ್ಥಳದಲ್ಲಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಶ್ರೀ ಡಿ ಸುರೇಂದ್ರ ಕುಮಾರ್ ರವರು, ಶ್ರೀ ಡಿ ಹರ್ಷೇಂದ್ರ ಕುಮಾರ್ ದಂಪತಿಗಳವರು, ಶ್ರೀ ಮತಿ ಶ್ರದ್ಧ ಅಮಿತ್ ರವರು, ಮಸ್ತಕಾಭಿಷೇಕದ ಸಮತಿಯವರು ಪಾಲ್ಗೋಡಿದರು.
ಶ್ರೀ ಡಿ ಹರ್ಷೇಂದ್ರ ಕುಮಾರ್ ರವರು ಮಾತನಾಡಿ ಫೆಬ್ರವರಿ 9ನೇ ತಾರೀಕಿನಿಂದ ಫೆಬ್ರವರಿ 18ನೇ ತಾರೀಕಿನವರೆಗು ನಡೆಯುವ ನಾಲ್ಕನೇ ಮಹಾಮಸ್ತಕಾಭಿಷೇಕದ ಪೂರ್ವ ತಯಾರಿಯ ಬಗ್ಗೆ ವಿವರಿಸಿದರು.
ಶ್ರೀಮತಿ ಹೇಮಾವತಿ ಹೆಗ್ಗಡೆಯವರು ಮಾತನಾಡಿ ಅಟ್ಟಣಿಗೆ ನಿರ್ಮಾಣ ಕಾರ್ಯ ಮತ್ತು ಮಹಾಮಸ್ತಾಭಿಷೇಕದ ಪೂರ್ವ ಸಿದ್ಧತೆಯನ್ನು ಕುರಿತು ವಿವರಿಸಿದರು.
ಗಣ್ಯರುಗಳು ಅಟ್ಟಣಿಗೆ ನಿರ್ಮಾಣ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಶ್ರೀ ಡಿ ಸುರೇಂದ್ರ ಕುಮಾರ್ ರವರು ಮತನಾಡಿ ಇದುವರೆಗು 3ಬಾರಿ ಮಹಾಮಸ್ತಕಾಭಿಷೇಕ ನಡೆದಿದ್ದು ಈ ಬಾರಿ ನಾಲ್ಕನೇ ಬಾರಿ ನಡೆಯುತ್ತಿದೆ, ಈ ಬಾರಿಯ ವಿಶೇಷ ಪ್ರಭಂದಕರಾಗಿ ಮತ್ತು ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದೆನೆ ಎಂದು ತಿಳಿಸಿದರು.
(ಮನವನ ಮೂಲ ದೋಷಗಳು ಎಂದರೆ ಅಹಂಕಾರ, ದರ್ಪ, ಮತಾಂಧತೆ, ಧರ್ಮಾಂಧತೆ, ಜಾತಿ ಮತ ಬೇಧಗಳು ಇರುವವರೆಗು ಭಗವಾನ್ ಬಾಹುಬಲಿ ಸಂದೇಶಗಳು ಇರುತ್ತವೆ ಎಂದರು).
(ಈ ಬಾರಿ ಮಹಾಮಸ್ತಾಕಭಿಷೇಕದ ವೈಶಿಷ್ಟವೆನೆಂದರೆ ಬಾಹುಬಲಿ ಪಂಚ ಮಹಾ ವೈಭವ ನಡೆಯುತ್ತಿರುವುದು ಮತ್ತು ಕೊನೆಯ ದಿನದಂದು ತೀರ್ಥಂಕರರು ಕುಳಿತು ದಿವ್ಯ ಸಂದೇಶವನ್ನು ಕೊಡುತ್ತಾರೆ.
ಶ್ರಾವಕರನ್ನು ಮಹಾಮಸ್ತಾಕಭಿಷೇಕಕ್ಕೆ ಬರಬೇಕು, ಇಲ್ಲಿ ದೂರದಿಂದ ಬರುವವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಹಾಗೇ ಎಲ್ಲರು ಈ ಪೂಣ್ಯ ಕಾರ್ಯಕ್ಕೆ ಭಾಗವಹಿಸ ಬೇಕು ಎಂದರು).
ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














