ಧರ್ಮಸ್ಥಳ ಶ್ರೀ ಬಹುಬಲಿ ಮಸ್ಥಕಾಭಿಷೇಕ ಭಾಗ 1

ಜೈ ಜಿನೇಂದ್ರ ವೀಕ್ಷಕರೆ ತುಳು ನಾಡಿನ ಘಟ್ಟಗಳ ಮನೋಹರ ಪ್ರಕೃತಿ ಸೌಂದರ್ಯದ ನಡುವೆ ಅಂಕು ಡೊಂಕಾಗಿ ಬಳುಕುತ್ತ ಸಾಗುವ ಸೊಬಗಿನ ಹಾದಿಯಲ್ಲಿ ಸಾಗುತ್ತ ನಿಮಗೆ ಸಿಗುವುದು ನೇತ್ರವತಿ ದಂಡೆಯ ಪೂಣ್ಯ ಭೂಮಿ ಮಂಜುನಾಥ ಸ್ವಾಮಿಯ ನೇಲೆ ಬೀಡು, ಚಂದ್ರನಾಥ ಸ್ವಾಮಿಯ ತಾಣ ಶ್ರೀ ಕ್ಷೇತ್ರ ಧರ್ಮಸ್ಥಳ.

ಧರ್ಮಸ್ಥಳದಲ್ಲಿ ನೋಡಲೇ ಬೇಕಾದ ಅಕರ್ಷಣಿಯದಲ್ಲಿ ಒಂದು ರತ್ನಗಿರಿ, ಇಲ್ಲಿ ವಿರಾಜ ಮಾನವಾಗಿರುವುದು ಮುದ್ದಾದ ಮಂದಸ್ಮಿತ ಶ್ರೀ ಬಾಹುಬಲಿ ಸ್ವಾಮಿಯ ಖಡ್ಗಾಸನ ಪ್ರತಿಮೆ. 39 ಅಡಿ ಎತ್ತರದ ಕಲಾತ್ಮಕ ಕುಸರಿ ಏಕಶಿಲೆಯಲ್ಲಿ ಅರಳಿದೆ, ಪದ ಕಮಲಗಳಿಂದ ಮುಖ ಕಮಲದವರೆಗೆ, ಬೆರಳುಗಳು ಅದರ ಮೇಲಿನ ಉಗುರುಗಳಿಂದ ಹಿಡಿದು ಇಕ್ಕಿಲಗಳಲ್ಲಿ ನಿಂತ ಚಾಮರ ದಾರಿಣಿಯರ ಸುಂದರ ಕಲಾಕೃತಿಗಳು ಹಬ್ಬಿದ ಬಳ್ಳಿಗಳು ಸುಳಿಯಾಕರದ ಗುಂಗುರು ಕೂದಲು ಅರೆತೆರೆದ ನಯನಗಳು ಮನೋಗ್ಞವಾಗಿ ಮೂಡಿ ಬಂದಿವೆ. ಇಂತಹ ಮೂರ್ತಿಯ ಕೆತ್ತನೆಯ ಹಿಂದೆ ಪ್ರತಿಷ್ಟಾಪನೆಯ ಹಿಂದೆ ಒಂದು ರೋಚಕವಾದ ಸ್ಪೂರ್ತಿದಾಯಕ ವಾದ ಕಥೆ ಯೊಂದಿದೆ. ಮಹೋನ್ನತ ಕಾರ್ಯಸಾಧನೆ ಹಿಂದೆ ಮಹಾತ್ಮರೊಬ್ಬರಿದ್ದಾರೆ. ಕ್ಷೇತ್ರದ ಧರ್ಮಾಧಿಕಾರಿಯಾದ ಪದ್ಮವಿಭೂಷಣ ರಾಜಶ್ರೀ ಡಾ|| ವೀರೇಂದ್ರ ಹೆಗ್ಗಡೆ, ನಡೆದಾಡುವ ದೇವರು ಪೂಜ್ಯಕಾವಂದರು.

ತಂದೆ ಶ್ರೀ ರತ್ನ ವರ್ಮ ಹೆಗ್ಗಡೆ ಹಾಗೂ ಮಾತೃಶ್ರೀ ರತ್ನಮ್ಮನವರ ಅಪೇಕ್ಷೆಯ ಮೇರೆಗೆ ಅವರಿಂದ ಪ್ರಾರಂಭವಾದ ಬಾಹುಬಲಿ ಸ್ವಾಮಿಯ ಕೆತ್ತನೆ ಕಾರ್ಯ ಅವರ ದೇಹಾಂತ್ಯದ ನಂತರ ದೃಡಸಂಕಲ್ಪದಿಂದ ಅದರ ಜವಬ್ದಾರಿಯನ್ನು ಹೊತ್ತುನಿಂತರು ಪೂಜ್ಯ ವೀರೇಂದ್ರ ಹೆಗ್ಗಡೆಯವರು. ಎದುರಾದ ಸವಾಲನ್ನು ಸ್ವೀಕರಿಸಿ ಧರ್ಮಸ್ಥಳದ ರತ್ನಗಿರಿಯ ಮೇಲೆ ಮೂರ್ತಿ ಪ್ರತಿಷ್ಟಾಪಿಸಿದ ಸಹಾಸಗಾತೆಯನ್ನು ಪೂಜ್ಯಶ್ರೀ ಹೆಗ್ಗಡೆಯವರ ನುಡಿಗಳಿಂದಲೆ ಕೇಳೋಣ.

(ಶ್ರೀ ರತ್ನ ವರ್ಮ ಹೆಗ್ಗಡೆ ಹಾಗೂ ಮಾತೃಶ್ರೀ ರತ್ನಮ್ಮನವರ ಅಪೇಕ್ಷೆಯಂತೆ ಶ್ರೀ ಬಾಹುಬಲಿ ಸ್ವಾಮಿಯ 39 ಅಡಿ ಎತ್ತರದ ಖಡ್ಗಾಸನ ಪ್ರತಿಮೆ ನಿರ್ಮಿಸಲಾಯಿತು. ಮಂಗಳೂರಿನವರಾದ ಶ್ರೀ ಜಿನಾರಾಜ್ ಹೆಗ್ಗಡೆಯವರು ಪ್ರತಿಮೆ ನಿರ್ಮಿಸಲು ಪ್ರೋತ್ಸಹವನ್ನು ನೀಡಿದರು ಮತ್ತು ಅವರು ಮೂರ್ತಿಯನ್ನು ಕೆತ್ತಲು ರಂಜಾಳ ಗೋಪಾಲ ಶಣೈರವರ ಹೆಸರನ್ನು ಹೆಸರಿಸಿದರು. ನಂತರ ಸಹ ಶಿಲ್ಪಿಗಳನ್ನು

ತಮಿಳುನಾಡಿನಿಂದ ಕರೆಸಲಾಯಿತು, ಮೂರ್ತಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳ್ಳಿಸಲು ಸುಮಾರು 9ವರ್ಷಗಳು ಬೇಕಾಯಿತು ಎಂದರು).

1967ರಿಂದ ಮೂರ್ತಿಯ ಕೆತ್ತನೆ ಅರಂಭವಾದಗ ವಿಗ್ರಹಕ್ಕಾಗಿ ಕಾರ್ಕಳದ ಮಂಗಳ ಪಾದೆ ಶಿಲೆಯನ್ನು ಅರಿಸಿಕೊಳ್ಳಲಾಯಿತ್ತು. ಶ್ರೀ ಜಿನಾರಾಜ ಹೆಗ್ಗಗಡೆಯವರು ಸೂಚಿಸಿದ ರಂಜಾಳ ಗೋಪಾಲ ಶಣೈಯವರನ್ನು ಶಿಲ್ಪಯಾಗಿ ನಿರ್ಧರಿಸಲಾಯಿತ್ತು. ಅವರಿಂದ ಸುಂದರ ಮೂರ್ತಿ ಏನೊ ನಿರ್ಮಾಣವಾಯಿತ್ತು ಅದರೆ ಆ ಬೃಹತ್ ಮೂರ್ತಿಯನ್ನು ಧರ್ಮಸ್ಥಳಕ್ಕೆ ಸಾಗಿಸುವುದೆ ಮುಂದಿರುವ ಸವಾಲು.

(ಮುಂಬೈಗೆ ಹೊಗಿ ದೀನನಾಥ್ ಒಬ್ನರವರನ್ನು ಬೇಟಿಯಾದಗ ಅವರು ಒಂದು ವಿಶೇಷವಾದಂತಹ ಟ್ರ್ಯಾಲಿಯನ್ನು ತಯಾರಿಸಿ ಕೊಟ್ಟರು, ಆ ಟ್ರ್ಯಾಲಿಯಲ್ಲಿ 64 ಚಕ್ರಗಳ್ಳಿದವು ಅದರ ಜೊತೆಗೆ ಎರಡು ಲಾರಿಗಳನ್ನು ಬಳಸಲಾಯಿತು, ನಂತರ ಅರಣ್ಯ ಇಲಾಖೆಯಿಂದ 21 ಆನೆಗಳನ್ನು ತರಿಸಿದ್ದೆವು ಅದರೆ ಅ ಆನೆಗಳು ಸರಿಯಾಗಿ ಸಹಕರಿಸಲ್ಲಿಲ ಹಾಗಾಗಿ ಅನೆಗಳನ್ನು ಮೆರವಣಿಗೆಗೆ ಬಳಸಲಾಯಿತು. 1500ರಿಂದ 2000ದಷ್ಟು ಜನ ಹಗ್ಗ ಕಟ್ಟಿ ಹೇಳೆದಾಗ ಮೂರ್ತಿ ಮುಂದೆ ಬಂದಿತ್ತು. ಮೂರ್ತಿಯನ್ನು ಟ್ರ್ಯಾಲಿಯ ಮೇಲೆ ಇರಿಸಲ್ಲು ಮಹಾರಾಷ್ಟ್ರದಿಂದ 200ಜನ ಅಮಾಲಿಗಳನ್ನು ಕರೆಸಲಾಗಿತ್ತು ಅವರು ಶೃತಿ ಬದ್ದವಾಗಿ ಹಾಡುತ್ತಾ ಹಾಡುತ್ತಾ ಟ್ರ್ಯಾಲಿಯ ಮೇಲೆ ಇರಿಸಿದರು. ಮೂರ್ತಿಯು ಧರ್ಮಸ್ಥಳ ತಲುಪಿದಾಗ ಜನರು ಹರ್ಷೊದ್ಗಾರ ಪಟ್ಟರು ನಂತರ ಟ್ರ್ಯಾಲಿಯಲ್ಲಿ ದೇವಸ್ಥಾನವನ್ನು ಪ್ರದಕ್ಷಣೆಮಾಡಲಾಯಿತ್ತು. ಬೆಟ್ಟದಲ್ಲಿ(ರತ್ನಗಿರಿ) ಅನೇಕ ಮಹಾತ್ಮರು ಗಳು ಬಂದಿದ್ದರು. 80ರಲ್ಲಿ ಇಂತಹ ಕಾರ್ಯನಡೆದಿದು ವಿಶೇಷ ಎಂದರು).

ಮುಂದುವರೆಯುವೆವು………

ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.