ಜಿನಸಮ್ಮಿಲನ ಭಾಗ 1 / ಜ್ವಾಲಾಮಲೆ ನ್ಯೂಸ್ / 2019

ಜೈ ಜಿನೇಂದ್ರ ವೀಕ್ಷಕರೆ ಒಂದೇ ವೇದಿಕೆಯಲ್ಲಿ ವಯಸ್ಸಿನ ಮಿತಿ ಇಲ್ಲದೆ ಎಲ್ಲ ಜೈನ ಭಾಂದವರನ್ನು ಒಗ್ಗೂಡಿಸಿದ ರಾಜ್ಯದೆಲ್ಲೆಡೆಯಿಂದ  ಬಂದ ಬಂಧುಗಳ ನಡುವೆ ಹೊಸ ಬಾಂಧವ್ಯ ಬೆಸೆಯುವಂತಹ ಒಂದು ಸ್ನೇಹ ಪೂರ್ಣ ಚೈತನ್ಯ ಪೂರ್ಣ ಕಾರ್ಯಕ್ರಮ ಒಂದು ಬೆಂಗಳೂರಿನ ಸುಹಾಸಿ ಜೈನ್ ಮಿಲನ್ ವತಿಯಿಂದ ಜಿನ ಸಮ್ಮಿಲನ ಎನ್ನುವ ಹೆಸರಿನಲ್ಲಿ ನಡೆಯಿತು.

ದಿನಾಂಕ 09-12-2018ರಂದು ನಡೆದ ಕಾರ್ಯಕ್ರಮ ದೀಪ ಪ್ರಜ್ವಲನೆಯ ಮೂಲಕ ಡಾ|| ಎಸ್. ಅನಿಲ್ ಕುಮಾರ್ ರವರು ಉದ್ಘಾಟನೆ ಮಾಡಿದರು. ಐ.ಪಿ.ಎಸ್. ಜಿನೇಂದ್ರ ಕಣಗಾವಿಯವರು ಕ್ರೀಡಾ ಜೋತಿಗೆ ಚಾಲನೆ ನೀಡಿದರು. ಕ್ರೀಡಾ ವೇದಿಕೆಯಲ್ಲಿ ಅಧ್ಯಕ್ಷರಾದ ಸಂತೋಷ್ ಜೈನ್, ಆರ್ ಅಶೋಕ್ ರವರು, ವಿಲಾಸ್ ಪಾಸಣ್ಣನವರು, ಅಶ್ವೇಂದ್ರ ಕುಮಾರ್ ಹಾಗೂ ರಜತ್ ರವರು ಭಾಗವಹಿಸಿದ್ದರು. 

ಗಣ್ಯರುಗಳು ಮಾತನಾಡಿ (ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾ ಸ್ಪರ್ಧಿಗಳಿಗೆ ಅಭಿನಂದಿಸಿದರು ಮತ್ತು ಕಳೆದ ಬಾರಿ ಕಬ್ಬಡಿ ಕ್ರೀಡೆಯನ್ನು ಅಯೋಜಿಸಿದ್ದೆವು ಅದರೆ ಈ ಬಾರಿ ಇನ್ನಷ್ಟು ಕ್ರೀಡೆಗಳನ್ನು ಸೇರ್ಪಡೆಗೊಳಿಸಿ ಜಿನ ಸಮ್ಮಿಲನ ಎಂದು ಅಯೋಜಿಸಿದ್ದೆವೆ ಎಂದರು).

ಎಸ್.ಎಸ್.ಎಂ.ಆರ್.ವಿ. ಡಿಗ್ರಿ ಕಾಲೇಜಿನ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದೆಲ್ಲೆಡೆಯಿಂದ ವಿವಿಧ ತಂಡಗಳು ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸ್ಪರ್ಧೆಯು ರೋಚಕತೆಯಿಂದ ಕೂಡಿತ್ತು. ಮತ್ತು ಕುತುಹಲವನ್ನು ಹೆಚ್ಚಿಸಿದವು.

ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್