ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಜಿನ ಭಕ್ತಿಗೀತೆಗಳ ಮಹಾ ಮಜ್ಜನ. ಅನಿತಾ ಸುರೇಂದ್ರ ಕುಮಾರ್ ರವರ ಕಲ್ಪನೆಯ ಕನಸು, ಕಳೆದೆರಡು ಬಾರಿಯ ಅಭೂತಪೂರ್ವ ಯಶಸ್ಸಿನೊಂದಿಗೆ ಈ ಬಾರಿಯ ಜಿನ ಭಜನಾ ಕಾರ್ಯಕ್ರಮ ಪ್ರತಿವಿಭಾಗದಲ್ಲು ಅದ್ದೂರಿ ಯಶಸ್ಸನ್ನು ಕಾಣಲು ನಾವುಗಳು ಜೊತೆಗೂಡೋಣ ಬನ್ನಿ. ಜೈನ ಭಕ್ತಿಗೀತೆಗಳ ಪ್ರಸ್ತುತಿಗಿರುವ ಏಕೈಕ ವೇದಿಕೆಯಲ್ಲಿ ಪಾಲ್ಗೋಳಲ್ಲು ಬನ್ನಿ ನಾವು ನಮ್ಮ ತಂಡದೊಡನೆ ಸಜ್ಜಾಗೋಣ. ಪ್ರತಿ ಬಾರಿಯಂತೆ ಈ ಬಾರಿಯು ಸಿಕ್ಕಿರುವ ಅವಕಾಶವನ್ನು ನಮ್ಮದಾಗಿಸೊಣ.
ಬನ್ನಿ ಈ ಬಾರಿಯ ಬೆಂಗಳೂರು ವಿಭಾಗಮಟ್ಟದ ಜಿನ ಭಜನಾ ಸ್ಪರ್ಧೆಯ ದೃಷ್ಯಾವಳಿಗಳು ನಿಮ್ಮ ಮುಂದೆ.
ದಿನಾಂಕ 18-11-2018ರಂದು ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ನಡೆಯುತ್ತಿರುವ ಜಿನ ಭಜನಾ ಸ್ಪರ್ಧೆಯ ಬೆಂಗಳೂರು ವಿಭಾಗದ ಭಜನಾ ಸ್ಪರ್ಧೆಯನ್ನು ಬಿ.ಬಿ.ಯು.ಎಲ್. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸೊಗಸಾದ ವೇದಿಕೆ ಅಂದವಾಗಿ ಸಿಂಗರಿಸಿಕೊಂಡು ಸಜ್ಜಾಗಿತ್ತು. ಎಲ್ಲೆಡೆ ಸಡಗರದ ವಾತಾವರಣ, ಕಾರ್ಯಕ್ರಮದ ಉದ್ಘಾಟಕರಾಗಿ ಪದ್ಮಶ್ರೀ ಡಾ|| ದೊಡ್ಡ ರಂಗೇಗೌಡರು, ಹಾಗೂ ಶ್ರೀ ಚಂಪಲಾಲ್ ಭಂಡಾರಿಯವರು ಬಾಗವಹಿಸಿದ್ದು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆಗೊಂಡಿತ್ತು.
(ಪದ್ಮಶ್ರೀ ಡಾ|| ದೊಡ್ಡ ರಂಗೇಗೌಡರು ಮಾತನಾಡಿ ಜಗತ್ತಿಗೆ ದಿವ್ಯ ಸಂದೇಶವನ್ನು ಮಹಾ ಕವಿ ಪಂಪರವರು ನೀಡಿದ್ದಾರೆ. ಮನುಕೂಲ ಜಾತಿ ಒಂದೇ ಎಂದು ಪಂಪ ಕವಿ
ಹೇಳಿದರು, ಅವರ ಇದ್ದಂತಹ ಕಾಲ 940. 9ನೇ ಶತಮಾನ, 10ನೇ ಶತಮಾನ ಮತ್ತು 11ನೇ ಶತಮಾನ ಜೈನಯುಗ ಎಂದು ಕರೆದರೆ ಅದು ತಪ್ಪಲ್ಲಾ, ಅನಂತರ ವಚನಕಾರರು ಬಂದ್ದಿದು ಎಂದರು. ಜೈನ ಧರ್ಮದ ಅಹಿಂಸ ಪರಮೊಧರ್ಮಹ ಎನ್ನುವ ತತ್ವ ನನಗೆ ಇಷ್ಟವಾದುದು ಎಂದರು).
ಸ್ಪರ್ಧೆಯ ತೀರ್ಪೂಗಾರರಾಗಿ ಅನುಪಮ, ಜಯಲಕ್ಷ್ಮಿ, ವೀರೇಂದ್ರ ಕುಮಾರ್ ಬೇಗುರ್ ರವರು ಭಾಗವಹಿಸಿದ್ದರು. ಮಕ್ಕಳ ವಿಭಾಗದಲ್ಲಿ ಸಾಂಪ್ರದಾಯಕ ಉಡುಗೆಯಲ್ಲಿ ಪಾಲ್ಗೋಂಡ ಮಕ್ಕಳ ಉತ್ಸಾಹ ಮುದನೀಡುವಂತ್ತಿತು.
ಹಿರಿಯರ ವಿಭಾಗದ ಸ್ಪರ್ಧಾಳುಗಳು ಪ್ರತಿ ತಂಡವು ಅತ್ಯುತ್ತಮ ತಯಾರಿಯೋಂದಿಗೆ ಭಾಗವಹಿಸಿದ ಪರಿ ತೀರ್ಪೂಗಾರರಿಗರ ಕ್ಲೀಷ್ಟಕರವಾಗುವಂತ್ತಿತು. ವರ್ಷದಿಂದ ವರ್ಷಕ್ಕೆ ಸ್ಪರ್ಧಾಳುಗಳು ಉತ್ತಮ ಪ್ರದರ್ಶನ ನೀಡಿದರು.
(ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಹಿರಿಯರು ಮತ್ತು ಕಿರಿಯರ ತಂಡದವರು ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಸ್ಪರ್ಧೆಯು ಪ್ರೇರಣಾದಾಯಕವಾಗಿದೆ ಎಂದು ತಿಳಿದರು).
ಕಾರ್ಯಕ್ರಮಕ್ಕೆ ಮತ್ತಷ್ಟು ಮೇರುಗು ನೀಡಿದ್ದು ಮನೋಜ್ಞವಾಗಿ ಮೂಡಿಬಂದ ಚಿಣ್ಣರ ನೃತ್ಯ ಪ್ರಸ್ತುತಿ.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಚಲನ ಚಿತ್ರ ನಿರ್ದೇಶಕರಾದ ಶ್ರೀ ಟಿ.ಎಸ್. ನಾಗಭರಣರವರು ಅಗಮಿಸಿದ್ದರು. ಮೃತ್ಯುಂಜಯರವರು, ನೀರ್ಮಲ್ ಕುಮಾರ್ ರವರು, ಶ್ರೀ ಮತಿ ಪದ್ಮಿನಿ ಪದ್ಮರಾಜ್ ರವರು ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಟಿ.ಎಸ್. ನಾಗಭರಣರವರು ತಮ್ಮ ಮಾತಿನಲ್ಲಿ ಸ್ಪರ್ಧೆಯನ್ನು ಯಾವ ರೀತಿ ಸ್ವೀಕರಿಸ ಬೇಕು ಎನ್ನುವುದನ್ನು ಅತ್ಯುತ್ತಮ ರೀತಿಯಲ್ಲಿ ತಿಳಿಸಿಕೊಟ್ಟರು.
ಸ್ಪರ್ಧಾ ವಿಜೇತರಿಗೆ ಬಹುಮಾನ ವಿತ್ತರಿಸಲಾಯಿತ್ತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಾಣದ ಕೈಗಳು ವೇದಿಕೆಯಲ್ಲಿ.
ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂ
ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














