ಜಮಕಾಂಡಿ ಜಿನಭಜನ/ ಜ್ವಲಾಮಲನ್ಯೂಸ್ / 2018

ಜೈ ಜಿನೇಂದ್ರ ವೀಕ್ಷಕರೆ ನೀವಿಗ ನೋಡುತ್ತಿರುವುದು ಭಾಗಲಕೋಟೆ ತಾಲ್ಲೂಕಿನ  ಜಮಖಂಡಿ. ಈ ಬಾರಿಯ ಜಿನ ಭಜನಾ ಸ್ಪರ್ಧೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿಭಾಗ ಪ್ರಥಮವಾಗಿ ಸ್ಪರ್ಧೆಯು ಜಮಖಂಡಿಯಿಂದ ಪ್ರಾರಂಭವಾಗಿದ್ದು ಅದ್ಭುತ ಯಶಸ್ಸನ್ನು ತನ್ನದಾಗಿಸಿಕೊಂಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕ 2019ರ ಪ್ರಯುಕ್ತ ಭಾರತೀಯ ಜೈನ್ ಮಿಲನ್ ವಲಯ 8ರ ವತಿಯಿಂದ ಜಮಖಂಡಿ ವಿಭಾಗದಲ್ಲಿ ದಿನಾಂಕ 11 ನವೆಂಬರ್ 2018ರಂದು ಅಲ್ಲಿನ ಬಸವ ಭವನದಲ್ಲಿ ಜಿನ ಭಜನಾ ಸಿಜ಼ನ್ ತ್ರಿ ವಿಭಾಗ ಮಟ್ಟದ ಸ್ಪರ್ಧೆ ನಡೆಯಿತು.

(ಕಾರ್ಯಕ್ರಮವನ್ನು ಕುರಿತು ಚಿಣ್ಣರು ಸಂತಸ ವ್ಯಕ್ತಪಡಿಸಿದರು).

ಶ್ರೀ ಮಹಾವೀರ ಶಾಂತುರಾರವರ ಸ್ವಾಗತದೊಂದಿಗೆ ಪ್ರಾರಂಭವಾದ ವೇದಿಕೆಯಲ್ಲಿ ಧರ್ಮಸ್ಥಳದ ಶ್ರೀ ಸುರೇಂದ್ರ ಕುಮಾರ್ ರವರು, ಜಿನ ಭಜನಾ ಸ್ಪರ್ಧೆಯ ರೂವಾರಿ ಅನಿತಾ ಡಿ. ಸುರೇಂದ್ರ ಕುಮಾರ್ ರವರು, ಖ್ಯಾತ ವೈದ್ಯರಾದ ಡಾ|| ಎ.ಜೆ. ನ್ಯಾಮಗೌಡರು ಉಪಸ್ಥಿತರಿದ್ದರು. ಹಾಗೂ ರಭ ಕವಿಯ ಪದ್ಮಾವತಿ ಇಂಟರ್ ನ್ಯಾಷನಲ್ ಸ್ಕೂಲ್ ನ ಅಧ್ಯಕ್ಷರಾದ ಶ್ರೀ ಸತೀಶ್ ಹಜಾರೆ, ಜನಪ್ರಿಯ ಶಾಸಕರಾದ ಶ್ರೀ ಆನಂದ್ ಸಿದ್ದು ನ್ಯಾಮ ಗೌಡರವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಮಕ್ಕಳಿಗೊಸ್ಕರ ಮಕ್ಕಳಿಂದಲೆ ಪ್ರಾರಂಭವಾಯಿತು ಭಜನಾ ಸ್ಪರ್ಧೆ, ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಕಲ್ಪಿಸಿಕೊಟ್ಟಂತಹ ಒಂದು ಸುಂದರ

ವೇದಿಕೆಯನ್ನು ಇಲ್ಲಿನ ಮಕ್ಕಳ ವಿಭಾಗದಿಂದ ಸ್ಪರ್ಧಿಸಿದ ಪುಟಾಣಿಗಳು ಉತ್ತಮ ರೀತಿಯಲ್ಲಿ ತಮ್ಮದಾಗಿಸಿ ಕೊಂಡರು. ಭಾಗವಹಿಸಿದ ಪ್ರತಿಮಕ್ಕಳು ಭಕ್ತಿ ತನ್ನಮಯೇತೆ ಯಿಂದ ಪಾಲ್ಗೋಂಡು ಸಭಿಕರ ತೀರ್ಪೂಗಾರರ ಮನಗೆದ್ದರು. ಕಾರ್ಯಕ್ರಮದ ಆಯೋಜಕರಿಗೂ ಸಾರ್ಥಕ ಭಾವವನ್ನುತುಂಬಿದರು.

ನಂತರ ಶುರುವಾಗಿದ್ದು ಹಿರಿಯರ ವಿಭಾಗದ ಸ್ಪರ್ಧೆ, ಈ ಸ್ಪರ್ಧೆಯ ತೀರ್ಪೂಗರರಾಗಿ ಪಂಡಿತ್ ಸದಾಶಿವ್ ಐಹೊಳೆ, ಸಿದ್ದರಾಜ್ ಪೂಜಾರಿ ಹಾಗೂ ಪುಜಾ ಮೋಹನ್ ರವರು ನಡೆಸಿಕೊಟ್ಟರು. ಅದ್ಭುತ ಯಶಸ್ಸನ್ನು ಕಂಡ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರ ತಂಡಗಳ ಹೆಸರನ್ನು ಗೊಷೀಸಲಾಯಿತು.

ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ತಂಡದಲ್ಲಿ ಜಮಖಂಡಿಯ ಅನೇಕ ಗಣ್ಯರುಗಳ ಜೊತೆ ಬೆಂಗಳೂರಿನ ವಿಲಾಸ್ ಪಾಸಣ್ಣನವರ್, ಯುವ ಅಜಿತ್ ರವರು, ಧರ್ಮರಾಜ್, ಚೇತನ್, ಪ್ರಿಯ ಹಾಗೂ ಜಮಖಂಡಿಯ ಸಹ ಸಯೋಜಕರಾದ ಶ್ರೀ ಬಾಹುಬಲಿ ಬಿರದಾರ್, ಸಯೋಜಕರಾದ ಮಹಾವೀರ್ ಶಾಪುರ್ ರವರು ವೇದಿಕೆಯಲ್ಲಿ.

ವೀಕ್ಷಿಸಿ ಸಂಭ್ರಮದ ಕ್ಷಣಗಳು.

ಇಂತಹ ವಿಶೇಷ ಸುದ್ದಿಯೊಂದಿಗೆ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.