ವಧುವರವೇಧಿಕೆ ಮೈಸೂರು/ ಜ್ವಾಲಾಮಲೆ ನ್ಯೂಸ್ / 2018

ಮೈಸೂರಿನಲ್ಲಿ ಅನೇಕ ವರ್ಷಗಳಿಂದ  ನಡೆದುಕೊಂಡು ಬಂದಿರುವ  ಶ್ರೀ ಪಾರ್ಶ್ವನಾಥ ಸ್ವಾಮಿ ದಿಗಂಬರ ಜೈನ ವಧು ವರರ ಮಾಹಿತಿ ಕೇಂದ್ರ,ದ ವತಿಯಿಂದ 12ನೇ ಸಮಾವೇಶ ಈ ಬಾರಿ  ದಿನಾಂಕ 30/09/2018ರಂದು  ಎನ್ . ಎಲ್ . ವರ್ಧಮಾನಯ್ಯ ಜೈನ್ ಬೋರ್ಡಿಂಗ್ ನಲ್ಲಿ ನಡೆಯಿತು. ಮಾಹಿತಿ ಕೇಂದ್ರ ಪ್ರಧಾನ ಸಂಚಾಲಕರಾದ  ಹೆಚ್. ಪಿ ರಾಜು ರವರ ಪರಿಶ್ರಮ ಹಾಗೂ ಮಾಹಿತಿ ಕೇಂದ್ರದ ಪದಾದಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಒಂದು ಸಾಮಾಜಿಕ ಸೇವೆಯಲ್ಲಿ ವಧು ವರರ ಮಾಹಿತಿ ಕೇಂದ್ರ  ತೊಡಗಿದ್ದು ಅಲ್ಲಿ ನಡೆದ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಮಾಹಿತಿ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ನೂತನ್ ಅಜಿತ್ ಕುಮಾರ್ ರವರು ವಹಿಸಿದ್ದರು. ಎಮ್. ಎನ್ ಜೈನ್ ಬೋರ್ಡಿಂಗ್ ನ ಕಾರ್ಯದರ್ಶಿಗಳಾದ ಶ್ರೀಮತಿ ಶ್ಯಾಮಲ ಮದನ್ ಕುಮಾರ್ , ಗೊಮ್ಮಟವಾಣಿ ಪತ್ರಿಕೆಯ ಸಂಪಾದಕರಾದ  ಶ್ರೀ ಎಸ್. ಎನ್  ಅಶೋಕ್ ಕುಮಾರ್  ದಿಗಂಬರ ಜೈನ ಸಮಾಜದ  ಅಧ್ಯಕ್ಷರಾದ ಶ್ರೀ ಎಂ. ಆರ್ ಸುನೀಲ್ ಕುಮಾರ್ , ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ  ಶೀಲ ಅನಂತುರಾಜುರವರು

ಸಂಯೋಜಕರಾದ ಶ್ರೀಮತಿ ಲತಾ ಸುದರ್ಶನ್ , ಶ್ರೀಮತಿ ನಿರ್ಮಲಾ ಭರತ್ ರಾಜ್ ಹಾಗೂ ಡಾ|| ಶ್ರೀಮತಿ  ಎಸ್. ಅರುಣಚಂದ್ರ ಪ್ರಕಾಶ್ ರವರು , ಕಾರ್ಯಕರ್ಶಿಗಳಾದ  ಶ್ರೀಮತಿ ಸರಸ್ವತಿ ಜ್ವಾಲೇಂದ್ರ ಪ್ರಸಾದ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ದೀಪ ಪ್ರಜ್ವಲನೆಯ ಮೂಲಕ  ಪ್ರಾರಂಭಗೊಂಡಿತು.

 

ಪ್ರಾರ್ಥನೆಯನ್ನು ಶ್ರೀಮತಿ ಸರಸ್ವತಿ ಜ್ವಾಲೇಂದ್ರ  ಪ್ರಸಾದ್ ರವರು ನಡೆಸಿಕೊಟ್ಟರು. ಸ್ವಾಗತವನ್ನು ಪ್ರಧಾನ ಸಂಚಾಲಕರಾದ ಹೆಚ್. ವಿ ರಾಜುರವರು ನೆರವೇರಿಸಿದರು. ವೇದಿಕೆಯ ಗಣ್ಯರುಗಳು ಮಾತನಾಡಿದರು. ಕಾರ್ಯಕ್ರಮದಲ್ಲಿ ವಧು ವರರ ಮಾಹಿತಿ ವಿನಿಮಯ ಹಾಗೂ  ಮುಖಾಮುಖಿ ಪರಿಚಯಮಾಷಿಕೊಳ್ಳುವುದರ ಮೂಲಕ  ಪೋಷಕರು ಹಾಗೂ ಸ್ವತಃ ವಧು ವರರು  ಪಾಲ್ಗೊಂಡರು . ಧರ್ಮ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಂಡಿತು.  ಹೀಗೆ ಜೈನ ಸುದ್ದಿಗಳ ಮೂಲಕ ಮುಂದೆಯೂ ಭೇಟಿಯಾಗಲಿದ್ದೇವೆ . ವಂದನೆಗಳೊಂದಿಗೆ ಜ್ವಾಲಾಮಾಲಾ ನ್ಯೂಸ್