ನಾವಿಂದು ತಿಳಿಯ ಹೊರಟಿರುವುದು ಕವಿ ರತ್ನಾಕರವರ್ಣಿ ರವರ ಬಗ್ಗೆ . ಕ್ರಿ.ಶ 16ನೆಯ ಶತಮಾನದಲ್ಲಿ ಕನ್ನಡದ ಕವಿಗಳಲ್ಲಿ ಅಗ್ರಗಣ್ಯನೆನಿಸಿದ ರತ್ನಾಕರವರ್ಣಿ ಸಾಂಗತ್ಯ ಚಕ್ರವರ್ತಿ ಎಂದು ಪ್ರಸಿದ್ದನಾದವನು ಧರ್ಮಾತ್ಮರಿಂದ ಕನ್ನಡದ ಕುಂದ ಕುಂದಾಚಾರ್ಯರೆಂದು ಪ್ರಶಂಸೆ ಗೊಳಗಾದವನು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಯಲ್ಲಿ ಸೂರ್ಯವಂಶಕ್ಕೆ ಸೇರಿದ ಜೈನ್ ಅರಸು ಮನೆತನದಲ್ಲಿ ಹುಟ್ಟಿದ ರತ್ನಾಕರ ದೇವರಾಜನ ಪುತ್ರನಾಗಿದ್ದ. ಬಾಲ್ಯದಿಂದಲೇ ಕಾವ್ಯಾಲಂಕಾರ ಲಕ್ಷಣ ಶಾಸ್ತ್ರಗಳನ್ನು ಅಭ್ಯಸಿಸಿ ಆಧ್ಯಾತ್ಮ ಕಾವ್ಯ ರಚನೆಯಲ್ಲಿ ಆಸಕ್ತನಾಗಿದ್ದ ಮುಂದೆ ಕವಿ ಶ್ರೇಷ್ಠ ನೆನಿಸಿ ಕಾರ್ಕಳಕ್ಕೆ ತೆರಳಿ ಭೈರವ ಸರ ಆಸ್ಥಾನ ಕವಿಯಾದ . ಅಲ್ಲಿ ತಾನು ಬರೆದ ಭರತೇಶ ವೈಭವ ಕೃತಿಗಾಗಿ ಶೃಂಗಾರಕವಿಹಂಸರಾಜ ಎಂನ ಅಬಿದಾನವನ್ನು ಪಡೆದ. ಯೋಗ ಶಾಸನ ನಿಪುಣನೆನಿಸಿ ದಶವಾಯುಸಿದ್ದಿ ವರದಾನ ಪಡೆದ ಕವಿ ರತ್ನಾಕರವರ್ಣಿ . ನಿಜಗುರು ಮಹೇಂದ್ರ ಕೀರ್ತಿಗಳಿಂದ ಅಣುವೃತದೀಕ್ಷೆಯನ್ನು ಪಡೆದು ಜೈನಾಕಮಗಳನ್ನು ಅತಿ ನಿಪುಣರಾಗಿ ಮೆರೆದ ಬಳಿಕ ರತ್ಣಾಕರ ಶತಕ , ಅಪರಾಜಿತಶತಕ . ತ್ರೀಲೋಕಶತಕಗಳನ್ನು ರಚಿಸಿದ ರತ್ನಾಕರ 2000 ದಷ್ಟು ಆಧ್ಯಾತ್ಮ ಗೀತೆಗಳನ್ನು ಬರೆದು ಪ್ರಸಿದ್ದನಾದ . ಈತನ ಕಾಲ ಕ್ರಿ.ಶ 1479 ರಿಂದ 1557. ರಾಜ ಒಡೆಯರ ಕಾಲದ ನಂತರ ಚಾಮರಾಜರ ಕಾಲದಲ್ಲಿ ಸಭೆಯಲ್ಲಿ ರತ್ನಾಕರ ಕವಿ ವಿರಚಿತ ಭಸವೇಶ್ವರ ಚರಿತೆಯ 84 ಸಂದಿಗಳನ್ನು ಓದಿದರು. ಮೂಡುಬಿದ್ರೆಯ ಪುಣ್ಯ ನೆಲದಲ್ಲಿ ಜೀವನಾತ್ಮವನ್ನು ಕಂಡ ರತ್ನಾಕರನ ಬದುಕಿನ ಘಟನೆಗಳಿಗೆ ಸಾಕ್ಷಿಯಾಗಿರುವ ಜೈನ ಪೇಟೆಯ ಬೆಟ್ಕೇರಿಯ ಪರಿಸರದಲ್ಲಿ ಅವನು ನೆಲೆಸಿದ ನಗರೇಶ್ವರ ಮನೆ ಅಲ್ಲಿ ಶಿಲಾಮಯ ಕೋಣೆ ತೂಗುಯ್ಯಾಲೆಯನ್ನು ನಾವಿಲ್ಲಿ ನೋಡಬಹುದು.
ಹಾಗೂ ಸಾವಿರ ಕಂಬದ ಬಸದಿಯಲ್ಲಿ ಗ್ರಂಥ ರಚನೆ ಕಾಲಕ್ಕೆ ತನ್ನ ಲೋಹದ ಕಂಠವನ್ನು ಕವಿ ಅಲ್ಲಿನ ಪೀಠ ಕಲ್ಲಿನಲ್ಲಿ ಕೊರೆದ ಕುರುಪು ಇಂದಿಗೂ ಕಾಣಸಿಗುತ್ತದೆ. ಇಂತಹ ಮಹಾಕವಿ 500 ವರ್ಷಗಳ ಬಳಿಕವೂ ಅವಿಸ್ಮರಣೀಯನೆನಿಸಿ ಆತನ ನೆನಪು ಮತ್ತು ಆದರ್ಶಗಳು ಮುಂದೆಯೂ ಸದಾ ನೆನಪುಳಿಯಂತಾಗಬೇಕು ಎನ್ನುವ ದೃಷ್ಠಿಯಿಂದ ಮೂಡುಬಿದಿರೆಯಲ್ಲಿ ರತ್ನಾಕರವರ್ಣಿಯ ಪ್ರತಿಮೆ ಸ್ಥಾಪನೆಯೊಂದಿಗೆ ಸ್ಮೃತಿ ಮಂಟಪವನ್ನು ನಿರ್ಮಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಆದರಣೀಯ ರಾಜಶ್ರೀ ಡಾ || ವೀರೇಂದ್ರ ಹೆಗ್ಗಡೆಯವರ ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಭಾರತೀಯ ಜೈನ್ ಮಿಲನ್ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ರವರ ಪ್ರೇರಣೆ ಮತ್ತು ಬೆಂಬಲದೊಂದಿಗೆ ಭಾರತೀಯ ಜೈನ್ ಮಿಲನ್ ನೇತೃತ್ವದಲ್ಲಿ ಹಾಗೂ ಸಮಾಜ ಭಾಂದವರ ಸಹಭಾಗಿತ್ವದಲ್ಲಿ ರತ್ನಾಕರವರ್ಣಿ ಸ್ಮೃತಿ ಮಂಟಪದ ರಚನಾ ಸಮಿತಿಯವರು ಸೇರಿ ಉದ್ಘಾತಿಸಿದ ಸುಂದರ ಮೂರ್ತಿ ಸ್ಮೃತಿ ಮಂಟಪ ನಾವು ಮೂಡುಬಿದ್ರೆ ಯಲ್ಲಿ ಕಾಣಬಹುದು. ಇಂತಹ ಮಹಾನ್ ಕವಿಯ ಬಗ್ಗೆ ಮುಂದಿನ ಪೀಳಿಗೆಯು ತಿಳಿಯುವಂತಾಗಲಿ ಎನ್ನುವ ಆಶಯ ದೊಂದಿಗೆ ನಮ್ಮಈ ಕೊಡುಗೆ. ಇಂತಹ ವಿಶೇಷ ಸುದ್ದಿಗಳೊಂದಿಗೆ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಾಮಾಲಾ ನ್ಯೂಸ್.














