ಪುಟ್ಟೇನಹಳ್ಳಿ ದೇವಸ್ಥಾನದಲ್ಲಿ ಪಿ. ಪಿ. ಪುಣ್ಯ ಸಾಗರ್‌ಜಿ

ಭಗವಾನ್ ಶೀತಲನಾಥ ದಿಗಂಬರ  ಜಿನ ಮಂದಿರ ಪುಟ್ಟೇನಹಳ್ಳಿ ಬೆಂಗಳೂರು . ಇಲ್ಲಿ ದಿನಾಂಕ  19/07/2018ರಂದು ಪರಮಪೂಜ್ಯ 108 ಪುಣ್ಯ ಸಾಗರ ಮಹಾ ರಾಜರ 22ನೇ ಭವ್ಯ ಪಾವನ  ವರ್ಷಾಯೋಗ  ಮಂಗಳ ಕಳಸ ಸ್ಥಾಪನ ಮಹೋತ್ಸವವು ನಡೆಯಿತು.  ಆಷಾಢ ಶುದ್ಧ ಅಷ್ಟಮಿಯಿಂದ  ಕಾರ್ತಿಕ ಮಾಸ ಹುಣ್ಣಿಮೆಯ ತನಕ  ನಡೆಯುವ ಚಾತುರ್ಮಾಸ  ಜೈನರ ಅತ್ಯಂತ ಶ್ರೇಷ್ಠ  ಹಾಗು ನಾಲ್ಕು ತಿಂಗಳು ನಡೆಯುವ  ಅತಿ ದೀರ್ಘ ಪರ್ವ . ಈ ದಿನಗಳಲ್ಲಿ ಅಷ್ಟಾನಿಕ , ಶೋಡಷ ಭಾವನೆ, ದಶಲಕ್ಷಣ, ಹಾಗೂ ನೋಂಪಿಗಳು ಇದರಲ್ಲಿ ಅಂತರ್ಗತವಾಗಿದೆ.  ಇದನ್ನು ವರ್ಷಾಯೋಗವೆಂದು ಕರೆಯುತ್ತಾರೆ.  ಈ ಅವಧಿಯಲ್ಲಿ ಭೂಮಿಯಲ್ಲಿ  ಅಸಂಖ್ಯ ಜೀವಜಂತುಗಳು ಉತ್ಪತ್ತಿಯಾಗುವ  ಕಾಲವಾದ್ದರಿಂದ  ಅಹಿಂಸಾಚರಣೆ  ನಡೆಸುವ ಮುನಿಗಳಿಗೆ  ವಿಹಾರ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ  ಸಮಯದಲ್ಲಿ ಅವರು ಒಂದೆಡೆ ತಂಗಿ ತಮ್ಮ ಸುದೀರ್ಘ ತಪದಿಂದ ಹಾಗು ಧರ್ಮ ಸ್ವಾಧ್ಯಾಯದಿಂದ  ಪ್ರಾಪ್ತಿಮಾಡಿಕೊಂಡ  ಪುಣ್ಯ ಶಕ್ತಿಯನ್ನು ಜ್ನಾನವನ್ನು ಶ್ರಾವಕರಿಗೆ ಧಾರೆಯೆರೆಯುತ್ತಾ ನಿಗ್ರಂಥ ರತ್ನಗಳು  ವಿಶ್ವಶಾಂತಿಗಾಗಿ  ಧರ್ಮಪ್ರಭಾವನೆಗಾಗಿ ಪ್ರತಿದಿನ ತಮ್ಮ ಲ್ಲಿ ಆಗಮಿಸುವ  ಶ್ರಾವಕರಿಗೆ  ಶ್ರದ್ಧಾ ಭಕ್ತಿಯಿಂದ ಕೈ ಗೊಳ್ಳುವ  ಶ್ರೀ  ಜಿನ ಭಗವಂತನಆರಾಧನೆ  ವ್ರತಪಾಲನೆಯನ್ನು ಪರಿಚಯಿಸುತ್ತಾ ತಮ್ಮ ಚಾತುರ್ಮಾಸವನ್ನು  ಕಳೆಯುತ್ತಾರೆ.  ಇಂತಹ ಮುನಿಗಳ ಸಾನಿಧ್ಯ ದೊರಕುವುದು ಮಹಾಪುಣ್ಯದಿಂದಲೇ ಆಗಿದೆ.

 

ಸಂತ ಶಿರೋಮಣಿ  ಪರಮಪೂಜ್ಯ  ಆಚಾರ್ಯ  ಶ್ರೀ108 ವಿದ್ಯಾಸಾಗರ  ಮಹಾರಾಜರ  ಪರಮ ಶಿಷ್ಯ ರಾದ ಪರಮ ಪೂಜ್ಯ ವಾತ್ಸಲ್ಯ ಮೂರ್ತಿ  ತಪೋನಿಧಿ ಸ್ವಾದ್ಯಾಯ ಪ್ರವರ್ತಕರು  ಅಬೀಷ್ನ ಜ್ನಾನ ಭಾಸ್ಕರ ಬಾಲಬ್ರಹ್ಮಚಾರಿ  108 ಪುಣ್ಯ ಸಾಗರ ಮಹಾರಾಜರಂತಹ ಮುನಿಗಳ ಸಾನಿಧ್ಯ ದೊರೆಯುವುದು ಕೂಡ ಒಂದು ಪುಣ್ಯವೇ ಆಗಿದೆ.  ಅವರ ವರ್ಷಾಯೋಗ ಚಾತುರ್ಮಾಸ  ಮಂಗಳ ಕಳಸ ಸ್ಥಾಪನೆಯ ಮೂಲಕ  ಭಾನುವಾರದಂದು ಪ್ರಾರಂಭವಾಯಿತು. ಅವರು ಜ್ವಾಲಾಮಾಲಾಕ್ಕಾಗಿ ವಿಶೇಷ ಸಂದೇಶ ನೀಡಿ ದರು. ಚಾತುರ್ಮಾಸ ಸಂದರ್ಭದಲ್ಲಿ ಮುನಿಗಳು, ಸಾಧು ಸಂತರು  ತ್ಯಾಗಿಗಳು ಭಾರತದಲ್ಲಿ ಎಲ್ಲಾ ಕಡೆ ಎಲ್ಲಾ ರಾಜ್ಯದಲ್ಲೂ ಕೂಡ  ನಾವೆಲ್ಲರೂ ಚಾತುರ್ಮಾಸ ಸಂದರ್ಭದಲ್ಲಿ ಜೀವಜಂತುಗಳು ಹಿಂಸೆಯಾಗಬಾರದು ಮೂಲಗುನಗಳು ಪಾಲನೆಯಾಗಬೇಕು . ನಮಗೆ ಈ ಚಾತುರ್ಮಾಸದಲ್ಲಿ ನಾಲ್ಕು ತಿಂಗಳುಗಳವರೆಗೆ ಮುನಿಗಳು ಒಂದೇ ಕಡೆಯಿದ್ದು  ಆಚರಣೆಯನ್ನು ವಿದಿವತ್ತಾಗಿ ಪಾಲಿಸಬೇಕು ಎಂದು ತಿಳಿಸಿ ಜ್ವಾಲಾಮಾಲಾ ನ್ಯೂಸ್ ಚಾನಲ್ ರವರು ಕಳೆದ ನಾಲ್ಕು ವರ್ಷಗಳಿಂದ ಉತ್ತಮವಾಗಿ ಪ್ರಸಾರವಾಗುತ್ತಿದೆಯೆಂದು ತಿಳಿಸಿದರು.  ಹಾಗೂ ಯೂಟ್ಯೂಬ್ ನಲ್ಲಿಯೂ ಪ್ರಸಾರವಾಗುತ್ತಿರುವುದಕ್ಕೆ ತಮ್ಮ ಆಶೀರ್ವಾದಗಳನ್ನು ತಿಳಿಸಿದರು.  ನಿಶ್ಚಯ್ ವಿಶ್ವ ಸಿಂಗ್ ಮತ್ತು ಕಾವ್ಯ ನಿಶ್ಚಯ್ ದಂಪತಿಗಳಿಂದ  ಜಿನ ಭಕ್ತಿಗೀತೆಗಳ ಸುಧೆಯು ಹರಿಯಿತು.

 

ಧರ್ಮಸ್ಥಳದ ಶ್ರೀ ಸುರೇಂದ್ರ ಕುಮಾರ್ ರವರು ಅನಿತಾ ಸುರೇಂದ್ರ ಕುಮಾರ್ ರವರು , ಕರ್ನಾಟಕ ಜೈನ್ ಅಸೋಸಿಯೇಟ್ಸ್ ಅಧ್ಯಕ್ಷರಾದ ಎಸ್. ಜಿತೇಂದ್ರ ಕುಮಾರ್ ರವರು  ಹುಟ್ಟೇನಹಳ್ಳಿ  ಶ್ರೀ ಶೀತಲನಾಥ್  ಎಜ್ಯುಕೇಷನ್ ಚಾರಿಟಬಲ್  ಟ್ರಸ್ಟ್ ನ ಮ್ಯಾನೆಜಿಂಗ್ ಟ್ರಸ್ಟಿಗಳಾದ ಬಿ. ಪ್ರಸನ್ನೇಯ ರವರು , ಶ್ರೀಮತಿ ಮತ್ತು ಶ್ರೀ ವೆಂಕಟಾರಾಮುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊಂಬುಜ ಶ್ರೀಗಳವರು ಆಶೀರ್ವಚನ ನೀಡಿ ಪರಮ  ಪೂಜ್ಯ ಪುಣ್ಯ ಸಾಗರ ಮಹಾರಾಜರು  ಪ್ರಭಾವನೆಯನ್ನು ತಿಳಿಸಿಕೊಟ್ಟರು.

ವೇದಿಕೆ ಮೇಲಿನ ಗಣ್ಯರುಗಳು ಚಾತುರ್ಮಾಸ ಪೂಜೆಯ ವೈಶಿಷ್ಟ್ಯತೆ ಬಗ್ಗೆ ಮಾತನಾಡಿದರು.

ನಮಿತಾ ಜೈನ್ ರವರು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. 

ಸಮಿತಿ ಪದಾದಿಕಾರಿಗಳು ಹಾಗೂ ಹೆಚ್ಚಿನ  ಸಂಖ್ಯೆಯಲ್ಲಿ ಜೈನ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.