ಶ್ರಾವಣಬೆಳಗೋಲ ಇಂದ್ರಧ್ವಜ ಆರಾಧನೆ 22 10 2017

ಜೈಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ :

ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ 2018 ಫೆಬ್ರವರಿಯಲ್ಲಿ ನಡೆಯಲಿರುವ  ಮಹಾಮಸ್ತಕಾಭೀಷೇಕದ  ನಿಮಿತ್ತ ಇಂದ್ರಧ್ವಜ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿಲಿದೆ. ಇದರ ಅಂಗವಾಗಿ  ಪ್ರಥಮ ದಿನದಂದು

ಪರಮ ಪೂಜ್ಯ ಶ್ರೀ ಚಾರುಕೀರ್ತಿ  ಸ್ವಾಮೀಜಿಯವರ ನೇತೃತ್ವ ದಲ್ಲಿ  ಹಾಗೂ ಆಚಾರ್ಯ ಶ್ರೀ 108  ವರ್ಧಮಾನ ಸಾಗರ ಮುನಿ ಮಹಾರಾಜರ ಹಾಗೂ ಸಂಘಸ್ಯ ತ್ಯಾಗಿಗಳ  ಪಾವನ ಸಾನಿಧ್ಯದಲ್ಲಿ  ಮಂಡಲದಲ್ಲಿ ಸ್ಥಾಪನೆಗೊಳ್ಳಲಿರುವ  478 ಜಿನ ಭಂಡಾರಗಳಿಗೆ ಜಲಾಭಿಷೇಕವನ್ನು ಮಾಡಲಾಯಿತು. 1200 ಜೈನ ಮಹಿಳೆಯರು ಒಂದೇ ರೀತಿಯ ಕೇಸರಿ ಮಿಶ್ರಿತ ಹಳದಿ ಸೀರೆಯುಟ್ಟು ಕಿರೀಟ ಧರಿಸಿ ಕಳಸ  ಹಿಡಿದು ಭಂಡಾರ ಬಸದಿಯ ‍ಬಾವಿಯ ತೀರ್ಥ ಜಲವನ್ನು ಪೂಜಾ ವಿಧಿವಿಧಾನಗಳೊಂದಿಗೆ  ಕಳಸಗಳಲ್ಲಿ ತುಂಬಿಸಿಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಬಂದ ರೀತಿ ನೋಡಲು ಮನೋಹರವಾಗಿತ್ತು.

 

ಇಂದ್ರಧ್ವಜ ಆರಾಧನೆಗಾಗಿ ಸಕಲ ಸಿದ್ದತೆ ಭರ ದಿಂದ  ಸಾಗುತಲಿದ್ದು ವಿಜೃಂಭಣೆಯಿಂದ ನಡೆಯುತ್ತಿದೆ. ಭಂಡಾರದ ಸೇವೆ ಅಚ್ಚುಕಟ್ಟಾಗಿ ಜೋಡಿಸಿದ ಪಂಚ ಲೋಹದ  ಮುದ್ದಾದ ಜಿನ ಭಂಡಾರಗಳಿಗೆ ಅಭಿಷೇಕ  ನೆರವೇರಿತು.

.