ಜೈಜಿನೇಂದ್ರ ಜ್ವಾಲಾಮಾಲಾ ಡಾಟ್ ನ್ಯೂಸ್ ಗೆ ಸ್ವಾಗತ :
ಮೈಸೂರಿನ ಶ್ರೀ ದಿಗಂಬರ ಜೈನ ಸಮಾಜ ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ವತಿಯಿಂದ ವರ್ಷಾಯೋಗ ಚಾತುರ್ಮಾಸ ದಲ್ಲಿ ಲೋಕಕಲ್ಯಾಣಾರ್ಥವಾಗಿ ದಿನಾಂಕ 3/10/2017 ರಿಂದ 10/10/2017ರವರೆಗೆ ಸರ್ವತೋಭದ್ರ ಆರಾಧನೆ ನಡೆಯುತಲ್ಲಿದ್ದು 105 ಕ್ಷುಲ್ಲಕ ಶ್ರೀ ಪ್ರಶಸ್ತಮತಿ ಮಾತಾಜಿಯವರ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಶುಭ ಆಶೀರ್ವಾದದಲ್ಲಿ ವಿಧಿವತ್ತಾಗಿ ನಡೆಯುತ್ತಿದೆ. ಕೃತಿಮ ಅಕೃತಿಮ ಜಿನ ಚೈತ್ಯಾಲಯ ಗಳ ಜಿನಬಿಂಬಗಳಿಗೆ ಪಂಚಮೇರು ಜಿನಾಲಯಗಳ ಜಿನಬಿಂಬಗಳಿಗೆ ಹರಕೆ ಕೊಡುವ ಒಂದು ಪೂಜಾ ವಿಧಾನವೇ ಸರ್ವೋತೋಭದ್ರ ಆರಾಧನೆ. ಇಲ್ಲಿ 2500 ಹರಕೆಗಳನ್ನು ಪ್ರತಿದಿನ 200 ರಿಂದ 280 ಹರಕೆಗಳಂತೆ ಎಮ್. ಎಲ್ ಜೈನ್ ಬೋರ್ಡಿಂಗ್ ನಲ್ಲಿ ಮೈಸೂರಿನ ಶ್ರಾವಕಬಂಧುಗಳು ಪಾಲ್ಗೊಂಡು ಆರಾಧನೆ ನಡೆಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಜೈನ ಬಂಧುಗಳು ಭಾಗವಹಿಸಿ ಪುಣ್ಯಭಾಗಿಗಳಾಗ ಬೇಕಾಗಿ ಕೋರಲಾಗಿದೆ. ವಂದನೆಗಳೊಂದಿಗೆ ಜ್ವಾಲಾಮಾಲಾ ಡಾಟ್ ನ್ಯೂಸ್.














