ವೆಣೂರು ಮುಕುಟಸಪ್ತಮಿ

ಶ್ರೀ ಕ್ಷೇತ್ರ ವೇಣೂರಿನಲ್ಲಿ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೋಕ್ಷ ಕಲ್ಯಾಣವನ್ನು ಆಚಾರ್ಯ ಶ್ರೀ ಪುಷ್ಪನಂದ ಸಾಗರರ ಪರಮಶಿಷ್ಯರಾದ  ಕರ್ನಾಟಕ ಕ್ರಾಂತಿಕಾರಿ ಸಂತ ಧರ್ಮ ಪ್ರಭಾವಕ ಪರಮ ಪೂಜ್ಯ 108 ಮುನಿಶ್ರೀ ಪ್ರಸಂಗ ಸಾಗರ ಮುನಿ ಮಹಾರಾಜರ ಸಾನಿಧ್ಯದಲ್ಲಿ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮವು ವೈಭವಯುತ ಮೆರವಣಿಗೆಯ ಮೂಲಕ ಪ್ರಾರಂಭವಾಯಿತು. ಶ್ರೀ ರಾಮಮಂದಿರದ ಹತ್ತಿರದಿಂದ ಸಭಾಂಗಣದವರೆಗೆ ಸಾಗಿದ ಮೆರವಣಿಗೆಯಲ್ಲಿ 24 ತೀರ್ಥಂಕರರ  ಪಲ್ಲಕ್ಕಿಯನ್ನು ಸಿಂಗರಿಸಿ ಕೊಂಡೊಯ್ಯಲಾಯಿತು. ನಂತರ 24  ತೀರ್ಥಂಕರರಿಗೆ ಪೂಜೆ ಅಭಿಷೇಕ ಹಾಗು ಶ್ರೀ ಪಾರ್ಶ್ವನಾಥ ಭಗವಾನ್ ರವರಿಗೆ 23 ಕೆ.ಜಿ ಯ ಲಾಡುವನ್ನು ಏರಿಸುವುದರ ಮೂಲಕ  ಕಾರ್ಯಕ್ರಮ ಮುಕ್ತಾಯಗೊಂಡಿತು.  ವೇದಿಕೆಯನ್ನು ಸುಂದರವಾಗಿ ಸಮ್ಯೇಂದ್ರ ಶಿಖರ್ ಜಿಯ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು.

ಶ್ರೀಮತಿ ಜಯಶ್ರೀ ಧರಣೇಂದ್ರ ಜೈನ್ ರವರಿಂದ ಸುಶ್ರಾವ್ಯ ವಾದ ಗಾನಗಳ ಸುರಿಮಳೆ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಕಾರ್ಯಕ್ರಮದಲ್ಲಿ ಪರಮಪೂಜ್ಯ 105 ಶ್ರೀ ಸುಧರ್ಮ ಗುಪ್ತ ಕ್ಷುಲ್ಲಕ ಮಹಾರಾಜರು , ಶ್ರೀ ಶ್ರೀಕಾಂತ  ಬೈಯ್ಯಾಜಿ, ಶ್ರೀ ಸೋಮದೇವ ಬಯ್ಯಾಜಿ, ಶ್ರೀ ಧರ್ಮನಾಥ ಬಯ್ಯಾಜಿರವರು, ಮುಖ್ಯ ಅತಿಥಿಗಳಾಗಿ ಡಾ|| ಎಮ್. ಎನ್. ರಾಜೇಂದ್ರ ಕುಮಾರ್ , ಮುನಿರಾಜ ರಂಜಾಳರವರು ಹಾಗೂ ಡಾ|| ಪದ್ಮಪ್ರಸಾದ್ ಅಜಿಲರು ಭಾಗವಹಿಸಿದ್ದರು. ಮುಕುಟ ಸಪ್ತಮಿಯ ಬಗ್ಗೆ  ಶ್ರೀ ಮುನಿ ಮಹಾರಾಜರು  ಕಾರ್ಯಕ್ರಮವನ್ನು ಉದ್ದೇಶಿಸಿ  ಆಶೀರ್ವಚನ ನೀಡಿದರು.