ಜೈ ಜಿನೇಂದ್ರ ವೀಕ್ಷಕರೆ ಈ ಬಾರಿಯ ಜಿನ ಭಜನಾ ಸ್ಪರ್ಧೆ ಅಂಗವಾಗಿ ಬೆಂಗಳೂರು ವಿಭಾಗದ ಮಕ್ಕಳಿಗೆ ಹಾಗೂ ಯುವ ಜನರಿಗೆ ಭಜನಾ ಕಮ್ಮಟದ ಹೆಸರಿನಲ್ಲಿ ತರಬೇತಿ ಶಿಬಿರವನ್ನು ಭಾರತೀಯ ಜೈನ್ ಮಿಲನ್ ವಲಯ ವತಿಯಿಂದ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು ಶೋಲೊಕ ವಿಶ್ಲೆಷಕರಾಗಿ ವೀರೇಂದ್ರ ಬೆಗುರ್ ರವರು ಹಾಗೂ ಕೆ.ಪ್ರಸನ್ನ ಕುಮಾರ್ ರವರು, ಡಾ|| ಭರತೇಶ್ ಜಗತ್ ಶೆಟ್ಟಿಯವರು ಉಪಸ್ಥಿತಿಯಲ್ಲಿದರು. ಈ ಕಾರ್ಯಕ್ರಮದ ಉದ್ಘಾಟನೆಯು ಗಣ್ಯರೆಲ್ಲರು ಸೇರಿ ಮಕ್ಕಳಿಂದಲೆ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟನೆ ಮಾಡಿದರು.
ಧರ್ಮಸ್ಥಳದ ಶ್ರೀ ಡಿ. ಸುರೇಂದ್ರ ಕುಮಾರ್ ರವರು ಮಾತನಾಡಿ ( ಮಕ್ಕಳನ್ನು ಪ್ರೇರೆಪಿಸಿ ಕಮ್ಮಟಕ್ಕೆ ಬಂದು ಜಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಮತ್ತು ಅವರ ಬಳಗಕ್ಕೆ ಅಬಿನಂಧಿಸಿದರು).
ಮಕ್ಕಳಿಗೆ ತಮ್ಮ ಶೈಕ್ಷಣಿಕ ಚಟುವಟಿಕೆಯೊಂದಿಗೆ ಧಾರ್ಮಿಕ ಚಟುವಟಿಕೆಗಳಲು ಪಾಲ್ಗೋಳಲ್ಲೂ ಪ್ರೇರಣದಾಯಕವಾದ ಇಂತಹ ಒಂದು ಕಾರ್ಯಕ್ರಮ ಮಕ್ಕಳ ಮೇಲೆ ಅತ್ಯುತ್ತಮ ಪರಿಣಾಮ ಬೀರುವಲಿ ಯಶಸ್ವಿಯಾಯಿತು. ರವರು ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ಮಕ್ಕಳ ಧರ್ಮ ಮತ್ತು ಸಂಸ್ಕಾರ ವಿಷಯದಲ್ಲಿನ ಕಾಳಜಿ ಇಂತಹ ಒಂದು ಕಾರ್ಯಕ್ರಮಗಳ ರೂಪುರೆಶೇಗೆ ಕಾರಣ. ಅಂದು ಮಕ್ಕಳ ಸ್ಪಂದನೆ ಕೂಡ ಅದ್ಭುತ ಅದರೊಟ್ಟಿಗೆ ಅವರಿಗೆ ಭಜನಾ ಕಮ್ಮಟವನ್ನು ಅಚ್ಚುಕಟ್ಟಾಗಿ ನಡೆಸಿ ಕೊಟ್ಟ ಶ್ರೀ ಗಿರಿಧರ್ ಐತಾಂಡ್, ನಿಶ್ಚಯ್ ವಿಶ್ವಸೇನ್, ಶ್ರೀಮತಿ ಕಾವ್ಯ ನಿಶ್ಚಯ್, ಕುಮಾರಿ ಪುಜಾ ಮೋಹನ್ ರವರ ಭೋಧನ ಪರಿ ಕೂಡ ಅದ್ಬುತವಾಗಿತ್ತು.
(ಗಣ್ಯರುಗಳು ಮಾತನಾಡಿ ಕಮ್ಮಟ ಜಿನ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳಿಗೆ ಮತ್ತು ಮಕ್ಕಳನ್ನು ಕರೆದುಕೊಂಡು ಬಂದಿದ್ದ ಪಾಲಕರಿಗೂ ಅಭಿನಂದಿಸಿದರು).
ಈ ಕಾರ್ಯ ಕ್ರಮದಲ್ಲಿ ಶ್ರಮಿಸಿದವರ ಹಾಗೂ ಪಾಲ್ಗೋಂಡವರ ತಂಡ.
ಇಂತಹ ಅದ್ಭುತ ಕಾರ್ಯಕ್ರಮಗಳೊಂದಿಗೆ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














