ನಮಗೆಲ್ಲ ಸಂತಸ ತಂದಿರುವ ಸಂಗತಿ 2017-18ನೇ ಸಾಲಿನ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತ್ಯಾಗ ಮತ್ತು ಅಹಿಂಸೆಯ ಪ್ರತೀಕವಾದ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಧಾರ್ಮಿಕ ಶೈಕ್ಷಣಿಕ ಸಮಾಜಿಕ ಆರೋಗ್ಯ ಕ್ಷೇತ್ರಕ್ಕೆ ಧರ್ಮಗುರುಗಳ ಕಾಣಿಕೆಯನ್ನು ಪರಿಗಣಿಸಿ ಸಾಧಕ ಸಂತ ಮಣಿಗಳ ಸಾಲಿನ ಹೆಗ್ಗುರುತ್ತು ಶ್ರವಣ ಬೆಳಗೊಳದ ಜೈನ ಮಠದ ಪೀಠಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿಗಳಿಗೆ ಶ್ರೀ ಕ್ಷೇತ್ರದಲ್ಲಿ ಸಂದ ಗೌರವ. ಇಂತಹ ಒಂದು ಶುಭ ಸಂದರ್ಭದಲ್ಲಿ ಶ್ರವಣ ಬೆಳಗೊಳದ ಪರಮ ಪೂಜ್ಯ ಶ್ರೀಗಳವರ ಸಂಕ್ಷಿಪ್ತ ಪರಿಚಯ ಒಂದು ಸಣ್ಣ ಪ್ರಯತ್ನ.
ಶ್ರೀಗಳವರು ಜೈನ ಪರಂಪರೆಯನ್ನು ಬೆಳಗಿದ ಸಾಧಕ ಸಂತ, 1949ರ ಮೇ 8ರಂದು ಮನೋಹರ ಬಸದಿಗಳ ತಾಣ ವರಾಂಗದಲ್ಲಿ ಜನನ ಇವರ ಪುರ್ವಾಶ್ರಮದ ಹೆಸರು ರತ್ನಮರ್ಮ, ಬಾಲ್ಯದಲ್ಲೆ ಸಾಮಾಜಿಕ ಧಾರ್ಮಿಕ ಸೇವೆಗೆ ಸಂಕಲ್ಪ. 20ನೇ ವಯಸ್ಸಿನಲ್ಲಿ 1969 ಡಿಸೆಂಬರ್ 11ರಂದು ಸನ್ಯಾಸ ಸ್ವೀಕಾರ 1970 ಏಪ್ರಿಲ್ 19ರಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯಾಗಿ ಶ್ರವಣ ಬೆಳಗೊಳದ ಜಿನ ಧರ್ಮಾಚಾರ್ಯ ಪೀಠವನ್ನೇರಿದ ಶ್ರೀಗಳು ಕನ್ನಡ, ಸಂಸ್ಕೃತ ಮತ್ತು ಪ್ರಾಕ್ಕೃತದಲ್ಲಿ ಜೈನ ತತ್ವಶಾಸ್ತ್ರಗಳ ಅಧ್ಯಾಯನ, ಮೈಸೂರು ವಿಶ್ವವಿದ್ಯಾಲಯದಲ್ಲಿ ಇತಿಹಾಸ, ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರಗಳಲ್ಲಿ ಸ್ನಾತಕೋತ್ತರ ಪಧವಿ, ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಕಟಿಭದ ಕಾರ್ಯಾಚರಣೆ. ಕ್ಷೇತ್ರದ 50ಕ್ಕೂ ಹೆಚ್ಚು ದೇವಸ್ಥಾನದ ಜೀರ್ಣೋದ್ದಾರ ಎಲ್ಲೆಡೆ ನಿತ್ಯವೂ ಪೂಜೆಗೆ ವ್ಯವಸ್ಥೆ. ಭಗವಾನ್
ಮಹಾವೀರರ ನಿರ್ವಾಹಣದ 2500ನೇ ವರ್ಷದ ಸ್ಮರಣಾರ್ಥ ದಕ್ಷಿಣ ಭಾಗದ ಉದ್ದಗಲಕ್ಕೂ ಧರ್ಮ ಚಕ್ರ ಪವಿತ್ರ ಸಂಚಾರ ಭರ್ಜರಿ ಯಶಸ್ಸಿನ ಕೀರ್ತಿ ಧರ್ಮ ಸಂಘಟನೆಯಲ್ಲಿ ಮೈಲಿಗಲ್ಲು. 1981ರಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಜರುಗಿದ ಒಂದು ಸಾವಿರ ವರ್ಷದ ಮಹಾಮಸ್ತಕಾಭಿಷೇಕದ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸಿನೊಂದಿಗೆ ಅಂದಿನ ಪ್ರಧಾನಿ ಇಂದಿರ ಗಾಂಧಿಯವರಿಂದ ಪೂಜ್ಯರಿಗೆ ಸಂದ ಕರ್ಮ ಯೋಗಿ ಬಿರುದು. ಅದ್ಯತ್ಮಯೋಗಿ ಭಟ್ಟಾರಕ ಶೀರೊಮಣಿ ಇನ್ನು ಮುಂತಾದವುಗಳ ಬಿರುದಾವಳಿಗಳ ಗೌರವ ಇಲ್ಲಿಯ ವರೆಗೆ ನಾಲ್ಕುಮಹಾ ಮಸ್ತಕಾಭಿಷೇಕಗಳ ನಭೂತೋ ನಭವಿಷ್ಯದಿ ರೀತಿಯಲ್ಲಿ ಮಾದರಿ ನೇತೃತ್ವ ಶ್ರವಣ ಬೆಳಗೋಳದಲ್ಲಿ ಒಂದು ಸಾವಿರ ಜನರಿಗೆ ಉಚಿತ ನೇತ್ರ ಚಿಕಿತ್ಸೆ ಶಿಬಿರದ ಅಯೋಜನೆ, ಸುತ್ತಮುತ್ತಲಿನ ಹತ್ತು ಗ್ರಾಮಗಳ ಸಮಗ್ರ ಅಭಿವೃಧಿಗೆ ಪರಿಶ್ರಮ, ಧರ್ಮಶಾಸ್ತ್ರ ತತ್ವಶಾಸ್ತ್ರಗಳಲ್ಲಿ ವಿದ್ವಾಂಸರನ್ನು ರೂಪಿಸಲು ಗೊಮ್ಮಟೇಶ್ವರ ವಿಧ್ಯಾಪೀಠ. ಮಕ್ಕಳ ವಿಧ್ಯಾರ್ಜನೇಗಾಗಿ ಪೂರ್ವ ಪ್ರಾಥಮಿಕ ವಿದ್ಯಾಸಂಸ್ಥೆ, ಪಾಲಿಟೇಕ್ನೀಕ್ ಕಾಲೇಜುಗಳು, ಬೆಂಗಳೂರಿನ ಪ್ರಾಕೃತಿಕ ಜ್ಞಾನಭಾರತಿ ಸಂಸ್ಥೆ, ಪ್ರತಿ ಎರಡು ವರ್ಷಕೊಮ್ಮೆ ರಾಷ್ಟ್ರೀಯ ಪ್ರಾಕೃತ ಸಮಾವೇಶ ಹತ್ತು ಮಂದಿ ಸಾಧಕರಿಗೆ ಪ್ರಾಕೃತ ಜ್ಞಾನಭಾರತಿ ಪ್ರಶಸ್ತಿ ನೀಡಿ ಸನ್ಮಾನ.
ಇದೀಗ ಶ್ರವಣ ಬೆಳಗೊಳದಲ್ಲಿ ತಲೆ ಎತ್ತುತಿರುವ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಅತಿಥಿ ಗೃಹಗಳು, ಉಧ್ಯನವನಗಳು, ಆಯುರ್ವೇದ ಆಸ್ಪತ್ರೆಗಳ ನಿರ್ಮಾಣ. ಕನ್ನಡ ಭಾಷೆಯ ಮೇಲೆ ಪ್ರಭುತ್ವವಿರಿವ ಶ್ರೀಗಳಿಂದ ದೇಶ ವಿದೇಶಗಳಲ್ಲಿ ಉಪನ್ಯಾಸ ಸಾಗರದಾಚೆ ಧರ್ಮ ಪ್ರಚಾರ ಜ್ಞಾನ ಭಂಡಾರ ಹರಿಸಿದ ಮಹಾನ್ ತೇಜಸ್ವಿ. ಅನೇಕ ಕೃತಿಗಳ ಧರ್ಮ ಗ್ರಂಥಗಳ ಮುದ್ರಣ, ಧವಲ, ಜೈ ಧವಲ, ಮಹಾ ಧವಲ ಗ್ರಂಥಗಳ ಪ್ರಕಟಣೆಯಂತಹ ಬೃಹತ್ ಕಾರ್ಯ. ಧರ್ಮಾಚಾರ್ಯರು ಸುವರ್ಣ ವರ್ಷಾಚರಣೆಯ ಹೊಸ್ತಿಲಿನಲ್ಲಿರುವ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರಿಗೆ ಈ ಪ್ರಶಸ್ತಿ ಸಂದಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ.
ಬನ್ನಿ ಶ್ರೀ ಕ್ಷೇತ್ರದಲ್ಲಿ ಅವರಿಗೆ ಸಂದ ಗೌರವವನ್ನು ಕಣ್ತುಂಬಿಕೊಳ್ಳೋಣ.
ಕನ್ನಡ ಮತ್ತು ಸಂಸ್ಕೃತಿಯಿಂದ ಇಲಾಖೆಯಿಂದ ಭಾರತದಲ್ಲಿ ಪ್ರಪ್ರಥಮವಾಗಿ ಮಹಾವೀರರ ಹೆಸರಿನಲ್ಲಿ ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ ನೀಡಲಾಗುತ್ತಿರುವ ಕೀರ್ತಿ ಕರ್ನಾಟಕ ಸರ್ಕಾರದ್ದು. ಈ ಪ್ರಶಸ್ತಿ ಹಿನ್ನೆಲೆಯಲ್ಲಿ ಕನಕಗಿರಿ ಕ್ಷೇತ್ರ ಶ್ರೀಗಳಾದ ಸ್ವಸ್ತಿಶ್ರೀ ಭುವನ ಕೀರ್ತಿ ಮಹಾಸ್ವಾಮಿಗಳು, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆಯವರು, ಡಿ. ಸುರೇಂದ್ರ ಹೆಗ್ಗಡೆಯವರು, ಜಿತೇಂದ್ರ ಕುಮಾರ್ ರವರು, ಪ್ರಸನಯ್ಯ ನವರು ಹಾಗೂ ಅನೇಕ ಗಣ್ಯರುಗಳು ಹಾಗೂ ಸತತ ಪ್ರಯತ್ನದಿಂದ 2016ರಿಂದ ಪ್ರಾರಂಭವಾಗಿ ಪ್ರಥಮವಾಗಿ ಶ್ರೀ ಶಿವಕುಮಾರ ಸ್ವಾಮಿಗಳಿಗೆ ನೀಡಿದ್ದು 2017 ನೇ ಸಾಲಿನ ಪ್ರಶಸ್ತಿಯನ್ನು ಶ್ರವಣ ಬೆಳಗೊಳದ ಶ್ರೀಗಳಿಗೆ ದಿನಾಂಕ 4-11-2018ರಂದು ಶ್ರೀ ಕ್ಷೇತ್ರದಲ್ಲಿ ಪ್ರಧಾನ ಮಾಡಲಾಯಿತು.
ಶ್ರೀ ಎಸ್.ಎನ್. ಅಶೋಕ್ ಕುಮಾರ್ ರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶ್ರೀ ಹೆಚ್.ಡಿ ರೇವಣ್ಣ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಶ್ರೀ ಸಿ.ಎನ್. ಬಾಲಕೃಷ್ಣ, ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಸಚಿವರಾದ ಡಾ|| ಜಯಮಾಲರವರು, ಮುಖ್ಯ ಅತಿಥಿಗಳಾಗಿ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು, ಶ್ರೀಮತಿ ಶ್ವೇತ ದೇವರಾಜ್, ಶ್ರೀ ಎಂ.ಎ. ಗೋಪಾಲಸ್ವಾಮಿ, ಶ್ರೀಮತಿ ಮಮತ ರಮೇಶ್, ಶ್ರೀಮತಿ ಮಹಾಲಕ್ಷ್ಮಿ ಶಿವರಾಜ್, ಶ್ರೀಮತಿ ಹೇಮ ಪ್ರಭಾಕರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರ್ವೇಶ್ ಜೈನ್ ದಂಪತಿಗಳ ಪ್ರರ್ಥನೆಯಿಂದ ಪ್ರಾರಂಭಗೊಂಡ ಸಮಾರಂಭದ ಉದ್ಘಾಟನೆ ಅತಿಥಿ ಗಣ್ಯರುಗಳು ಸೇರಿ ದೀಪ ಪ್ರಜ್ವಲನೆಯ ಮೂಲಕ ನಡೆಯಿತು. ಡಾ|| ಜಯಮಾಲರವರು ಹಾಗೂ ವೇದಿಕೆ ಗಣ್ಯರೆಲ್ಲರು ಕೊಡಿ ಶ್ರೀಗಳಿಗೆ ಪ್ರಶಸ್ತಿ ಪ್ರಧಾನದ ಚರಿತ್ರಾರ್ಹ ಕ್ಷಣ. ಈ ಕಾರ್ಯಕ್ರಮದ ಪಾಯೋಜಕರು ಶ್ರೀ ಬಿ. ಪ್ರಸನ್ನಯ್ಯ, ಶ್ರೀಮತಿ ಪದ್ಮಲತಾ ಪ್ರಸನ್ನಯ್ಯ, ಶ್ರೀ ಪ್ರಮೋದ್. ಶ್ರೀಮತಿ ರೂಪಾಲಿ ಪ್ರಮೋದ್ ಹಾಗೂ ಚಿರಂಜೀವಿ ಪ್ರತಿಕ್ ಜೈನ್














