ಜೈ ಜಿನೇಂದ್ರ ವೀಕ್ಷಕರೆ ಆತ್ಮಶುದ್ದಿ ಆತ್ಮಕಲ್ಯಾಣದ ಕಾರಣ ಆತ್ಮನಿಗೆ ದುಃಖ ನೀಡುವಂತಹ ಕರ್ಮವನ್ನು ಆತ್ಮನಿಂದ ದೂರಗೊಳಿಸುವ ಸಲುವಾಗಿ ಹತ್ತು ಉಪಾಯಗಳನ್ನು ಹೇಳಿದ್ದು ಅವುಗಳನ್ನು ದಶಲಕ್ಷಣ ಧರ್ಮವೆಂದು ಹೇಳುತ್ತಾರೆ. ಈ ದಶ ಲಕ್ಷಣ ಪರ್ವದ ಆರಂಭ ಉತ್ತಮ ಕ್ಷಮೇಯಿಂದಾಗುತ್ತದೆ. ಹಾಗೂ ಇದರ ಪೂರ್ಣತೆ ಕ್ಷಮಾವಳಿ ಪರ್ವದಿಂದ ಕ್ಷಮಾವಳಿ ಎಂದು ಜಗತ್ತಿನ ಎಲ್ಲ ಜೀವಿಗಳಲ್ಲಿ ನನಗೆ ಮೈತ್ರಿ ಬಾವವಿರಲಿ ಎಂದು ಎಲ್ಲಾ ಜೀವಿಗಳಲ್ಲಿ ತಮ್ಮಿದಾದ ತಪ್ಪಿಗೆ ಕ್ಷಮೇಯಾಚಿಸಿ ಎಲ್ಲಾ ಜೀವಿಗಳನ್ನು ಸ್ವತಹ ತಾವು ಕ್ಷಮಿಸಿ ಕ್ಷಮೇಯ ವಿಚಾರವನ್ನು ಮಾತ್ರಮಾಡದೆ ಅದನ್ನು ಅಚರಣೆಗೆ ತರಬೇಕೆನ್ನುವುದು ಉದ್ದೇಶ.
ಈ ಕ್ಷಮಾವಳಿ ಪರ್ವವನ್ನು ನಗರದ ಹಲವೆಡೆಗಳಲ್ಲಿ ಚಾರುರ್ಮಾಸವನ್ನು ಅಚರಿಸುತ್ತ ಇತಿಹಾಸ ಸೃಷ್ಟಿಸಿದ ಬೆಂಗಳೂರಿನಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ವಾಸ್ತವ್ಯವಿರುವ ಪರಮ ಪೂಜ್ಯ ಅಚಾರ್ಯ ಶ್ರೀ ಶ್ರೀ 108 ಕುಮುದ ನಂದಿ ಮಹಾರಾಜರು ಹಾಗೂ ಪರ್ವ ಪೂಜ್ಯ ಶ್ರೀ ಶ್ರೀ 105 ಅರ್ಪಣ ಸಾಗರ ಮಹಾರಾಜರು, ಪರಮ ಪೂಜ್ಯ ವಾತ್ಸಲ್ಯ ಮೂರ್ತಿ ತಪೊನಿಧಿ ಜ್ಞಾನ ಭಾಸ್ಕರ ಶ್ರೀ ಶ್ರೀ 108 ಪೂಣ್ಯ ಸಾಗರ ಮಹಾರಾಜರು ಹಾಗೂ ಪರಮ ಪೂಜ್ಯ ಶಮ್ಹ ಶ್ರೀ ಶ್ರೀ 108 ಅದಿತ್ಯ ಸಾಗರ ಮಹಾರಾಜರು, ಪರಮ ಪೂಜ್ಯ ಶಮಣ ಶ್ರೀ ಶ್ರೀ 108 ಸಹಜ ಸಾಗರ ಮುನಿ ಮಹಾರಾಜರು ಅವರುಗಳ ದಿವ್ಯ ಸಾನಿಧ್ಯ ಹಾಗೂ ಪಾವನ ಉಪಸ್ಥಿತಿಯಲ್ಲಿ ದಿನಾಂಕ 2-10-2018ರಂದು ಕರ್ನಾಟಕ ಜೈನ ಭವನದಲ್ಲಿ ಸಾಮೂಹಿಕ ಕ್ಷಮಾವಳಿ ಸಮಾರಂಭ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟಕರಾಗಿ ಸಮಾಜ ರತ್ನ
ಧರ್ಮಸ್ಥಳ ಶ್ರೀ ಸುರೇಂದ್ರ ಕುಮಾರ್ ರವರು ಪಾಲ್ಗೋಂಡಿದರು.
ಅಧ್ಯಕ್ಷರಾಗಿ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಶ್ರೀ ಟಿ.ಜಿ. ದೊಡ್ಡ ಮನಿ, ಶ್ರೀ ಜೆ ಪದ್ಮನಾಭಯ್ಯ, ಶ್ರೀ ಚಂಪಾಲಾಲ್ ಭಂಡಾರಿ, ಡಾ|| ಎಸ್.ಡಿ ಪ್ರೇಮಕುಮಾರಿ, ಶ್ರೀ ಎ.ಆರ್ ನಿರ್ಮಲ್ ಕುಮಾರ್, ಶ್ರೀ ಬಿ.ಪಿ ಪ್ರಸನಯ್ಯ, ಶ್ರೀ ಬೇರು ಲಾಲಾ ಗಂಗಾ ವಾಲ್ ರವರು ಉಪಸ್ಥಿತರಿದ್ದರು.
ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮ ಗಣ್ಯರಿಂದ ಉದ್ಘಾಟನೆಗೊಂಡಿತು. ಶ್ರೀ ಪಿ.ವೈ ರಾಜೇಂದ್ರ ಕುಮಾರ್ ರವರು ಅತಿಥಿಗಣ್ಯರನ್ನು ಸ್ವಾಗತಿಸಿದರು. ಧರ್ಮ ಸ್ಥಳ ಶ್ರೀ ಸುರೇಂದ್ರ ಕುಮಾರ್ ರವರು ಮಾತನಾಡಿ. ಪ್ರಸ್ಥಾವಿಕ ಭಾಷಣದದ ಮೂಲಕ ಕ್ಷಮಾವಳಿ ಪರ್ವದ ವಿಶೇಷತೆ ಮತ್ತು ಕ್ಷಮೆ ಹಾಗೂ ಕ್ಷಮಾದ ಬಗ್ಗೆ ವಿವರಿಸಿದರು.
ಬೆಳಗಾವಿಯ ಶಾಸಕರಾದ ಶ್ರೀ ಅಭಯ ಪಾಟಿಲ್ ಹಾಗೂ ನೂತನ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಮತಿ ಪದ್ಮಿನಿ ಪದ್ಮರಾಜ್ ರವರನ್ನು ಸನ್ಮಾನಿಸಲಾಯಿತು. ಮುನಿ ಮಹಾರಾಜರುಗಳು ತಮ್ಮ ಪ್ರವಚನದಲ್ಲಿ ಕ್ಷಮಾವಳಿಯ ಮಹತ್ವವನ್ನು ತಿಳಿಸಿಕೊಟ್ಟರು.
ಹೆಚ್.ಬಿ ದೇವೇಂದ್ರ ಸ್ವಾಮಿಯವರು ವಂದಿಸಿದರು.
ಮುಂದಿನ ಸುದ್ದಿಯಲ್ಲಿ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್.














