ಜೈ ಜಿನೇಂದ್ರ ವೀಕ್ಷಕರೆ ಪಂಡಿತ ರತ್ನ ಎತ್ತುರು ಶಾಂತಿರಾಜ ಶಾಸ್ತ್ರಿಗಳು ಆದರ್ಶ ಸರಳ ಸಜ್ಜನಿಕೆಯಾ ಸಕಾರ ಮೂರ್ತಿ ಅವರ ಜೀವನವನ್ನು ಸಮಾಜ ಹಾಗೂ ಸಾಹಿತ್ಯ ಸೇವೆಗೆಂದೆ ಮುಡಿಪಾಗಿಟ್ಟ ಶ್ರೇಷ್ಟ ವಿದ್ವಾಂಸರು. ಅಚಾರ್ಯ ಜಿನ ಸೇನಾ ಹಾಗೂ ಗುಣ ಭದ್ರರಿಂದ 9ನೇ ಶತಮಾನದಲ್ಲಿ ವಿರಚಿತವಾದ ಮಹಾಪುರಾಣದಂತಹ ಮಹಾಮೇರು ಕೃತಿಯನ್ನು ಸರಳ ಹೊಸಗನ್ನಡದಲ್ಲಿ ಭಾವಾರ್ತವನ್ನು ಮೂಲದ ಯಾವುದೊಂದು ಶಬ್ದಾರ್ಥವನ್ನು ಬಿಡದಂತೆ ಬರೆದು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮಹೋಪಕಾರ ಮಾಡಿದ ಧರ್ಮಾತ್ಮ. ಮೈಸೂರು ಅರಸರಿಂದ ಆಸ್ಥಾನ ಮಹಾನ್ ವಿಧ್ವಾನರಾದ ಇವರು ಪಂಡಿತ ರತ್ನ ಎಂಬ ಬಿರುದನ್ನು ಪಡೆದ ಆದರ್ಶ ವ್ಯಕ್ತಿ ಇಂತಹ ಶಾಸ್ತ್ರಿಗಳ ಜನ್ಮಶತಮಾನೋತ್ಸವದ ನಿಮಿತ್ತ ಅವರ ಅಷ್ಟೇ ಆದರ್ಶವಂತರಾದ ಸಾಹಿತ್ಯಾಸಕ್ತರಾದ ಅವರ ಮಕ್ಕಳು ಪಂಡಿತ ರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ನ ಮೂಲಕ ಅನೇಕ ಧಾರ್ಮಿಕ ಹಾಗೂ ಸಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದು. ಶಾಸ್ತ್ರಿಗಳ ಮಹಾಪುರಾಣ ಸೇರಿದಂತ್ತೆ ಅನೇಕ ಪುಸ್ತಕಗಳನ್ನು ಪುನರ್ ಮುದ್ರಿಸಿದಾರೆ. ಅದರಂತೆ ದಿನಾಂಕ 7-10-2018ರಂದು ಟ್ಟಸ್ಟ್ ನ 30ನೇ ವಾರ್ಷಿಕೋತ್ಸವದಂದು S D J M I ಮ್ಯಾನೇಜಿಂಗ್ ಟ್ರಸ್ಟ್ ಹಾಗೂ ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರವನ್ನು ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪರಮ ಪೂಜ್ಯ ಜಗದ್ಗುರು ಕರ್ಮ ಯೋಗಿ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳ ಪಾವನ ನೇತೃತ್ವ ಹಾಗೂ ಮಾರ್ಗ ದರ್ಶನದೊಂದಿಗೆ ವಾತ್ಸಲ್ಯ ವಾರಿದಿ ಪರಮ ಪೂಜ್ಯ ಅಚಾರ್ಯ ಶ್ರೀ ಶ್ರೀ ಶ್ರೀ 108 ವರ್ಧಮಾನ
ಸಾಗರ ಮಹಾರಾಜರ ಪಾವನ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಉಧ್ಘಾಟನೆಯನ್ನು ತ್ಯಾಗಿ ಸೇವಾ ಸಮಿತಿ ಟ್ರಸ್ಟ್ ನ ಅಧ್ಯಕ್ಷರಾದ ಸಮಾಜ ರತ್ನ ಧರ್ಮಸ್ಥಳ ಶ್ರೀ ಸುರೇಂದ್ರ ಕುಮಾರ್ ರವರು ನೆರೆವೇರಿಸಿದರು. ಕಾರ್ಯ ಕ್ರಮದ ಅಧ್ಯಕ್ಷರಾಗಿ ಟ್ರಸ್ಟ್ ನ ಚೇರ್ಮನ್ ಎಸ್. ನಾಗಕುಮಾರ್ ಕುಮಾರ್ ಹಾಗೂ ಮುಖ್ಯ ಅಥಿತಿಗಳಾಗಿ ಕರ್ನಾಟಕದ ಉಚ್ಚನ್ಯಾಯಲಯದ ಹಿರಿಯ ನ್ಯಾಧೀಶರಾದ ಶ್ರೀ ಕೆ.ಆರ್. ವೆಂಕಟ ರಾಮು ರವರು ಭಾಗವಹಿಸಿದ್ದ ವೇದಿಕೆಯಲ್ಲಿ ಟ್ರಸ್ಟ್ ನ ಧರ್ಮಧರ್ಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿಂದ್ದರು. ವೇದಿಕೆ ಗಣ್ಯರಿಂದ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಸ್ವಾಗತವನ್ನು ಡಾ|| ಎಸ್. ಪ್ರಸನ್ನ ಕುಮಾರ್ ರವರು ನೆರೆವೇರಿಸಿ, ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಉದ್ಘಾಟನ ನುಡಿಗಳನಾಡಿದರು.( ಪಂಡಿತ ರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ನ ವತಿಯಿಂದ ನಡೆಸಿಕೊಡು ಬರುತ್ತಿರುವ ಧಾರ್ಮಿಕ, ಸಮಾಜಿಕ ಕೆಲಸಗಳನ್ನು ಮತ್ತು ಪ್ರತಿಭಾ ಪುರಸ್ಕಾರದ ಬಗ್ಗೆ ಪ್ರಶಂಶಿಸಿದರು).
ಶ್ರೀ ಎಸ್. ಜಿತೇಂದ್ರ ಕುಮಾರ್ ರವರು ಟ್ರಸ್ಟ್ ನ ಸಾಧನೆ ಹಾಗೂ ಪರಿಚಯ ಮಾಡಿಕೊಟ್ಟರು. (ನಡೆಸಿಕೊಡು ಬರುತ್ತಿರುವ ಧಾರ್ಮಿಕ, ಸಮಾಜಿಕ, ಪ್ರತಿಭಾ ಪುರಸ್ಕಾರ ಮತ್ತು ಇದರೊಂದಿಗೆ ಚತುರ್ವಿಧದಾನವನ್ನು ಅಂದರೆ ಅಹಾರ ದಾನ ಮತ್ತು ಔಷಧ ದಾನವನ್ನು ಕೊಡುವುದರ ಮೂಲಕ ನಡೆಸಿಕೊಂಡು ಬರುತ್ತಿರುವ ಪರಿಯನ್ನು ವಿವರಿಸಿದರು).
ಪರಮ ಪೂಜ್ಯ ಶ್ರೀ ಗಳಿಂದ ಆಶಿರ್ವಚನ. ಆಶಿರ್ವಚನದ ನುಡಿಗಳಲ್ಲಿ ಶ್ರೀ ಎಸ್. ಜಿತೇಂದ್ರ ಕುಮಾರ್ ರವರ ಕಾರ್ಯವೈಕರಿ ಮತ್ತು ಪಂಡಿತ ರತ್ನ ಎ. ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಸಾಧನೆಯನ್ನು ಶ್ಲಾಘಿಸಿದರು).
ಅಚಾರ್ಯ ಶ್ರೀಗಳಿಂದ ಮಂಗಳ ಪ್ರವಚನ ನೀಡಿದರು.
ವಂದನಾರ್ಪಣೆಯನ್ನು ಟ್ರಸ್ಟ್ ನ ವ್ಯವಸ್ಥಾಪಕ ಧರ್ಮದರ್ಶಿಗಳಾದ ಜಿ.ಪಿ. ನಾಗೇಂದ್ರ ಪ್ರಸಾದ್ ರವರು ನಡೆಸಿಕೊಟ್ಟರು. ಶ್ರೀ ಎಸ್ .ಎನ್ ಅಶೋಕ್ ಕುಮಾರ್ ರವರು ಸುಂದರ ವಿವರಣೆಗಳಿಂದ ಕಾರ್ಯಕ್ರಮವನ್ನು ನಿರೂಪಿಸಿದರು.
ಮುಂದಿನ ಸುದ್ದಿಯಲ್ಲಿ ಮತ್ತೆ ಭೇಟಿಯಾಗೋಣ ವಂದನೆ
ನಡೆಸಿಕೊಟ್ಟರು. ಶ್ರೀ ಎಸ್ .ಎನ್ ಅಶೋಕ್ ಕುಮಾರ್ ರವರು ಸುಂದರ ವಿವರಣೆಗಳಿಂದ ಕಾರ್ಯಕ್ರಮವನ್ನು ನಿರೂಪಿಸಿದರು.
ಮುಂದಿನ ಸುದ್ದಿಯಲ್ಲಿ ಮತ್ತೆ ಭೇಟಿಯಾಗೋಣ ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














