ಮಹಾಮಸ್ಥಕಾಭಿಷೇಕ, ಸರಾವಣಬೆಳಗೋಳದಲ್ಲಿ ಸಂಪ್ರದಾಯಿಕ ಮಸ್ಥಕಾಭಿಷೇಕ / ಜ್ವಾಲಾಮಲೆನ್ಯೂಸ್ / 2018

ಶ್ರೀ ಕ್ಷೇತ್ರ ಶ್ರವಣ ಬೆಳಗೊಳದಲ್ಲಿ ನಡೆಯುತ್ತಿರುವ ಗೊಮ್ಮಟೇಶ್ವರ ಭಗವಾನ್ ಶ್ರೀ ಶ್ರೀ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಅಂಗವಾಗಿ  ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಶ್ರವಣ ಬೆಳಗೊಳದ ದಿಗಂಬರ ಜೈನ ಸಮಾಜ ಮತ್ತು ಶ್ರೀ ಕುಷ್ಮಾಂಡಿನಿ ದಿಗಂಬರ ಜೈನ ಸಮಾಜವತಿಯಿಂದ 1967ರಲ್ಲಿ ನಡೆದಂತಹ ಸಾಂಪ್ರದಾಯಕ ಮಹಾಮಸ್ತಕಾಭಿಷೇಕ ಮಹೋತ್ಸವ ದಿನಾಂಕ 19-08-2018ರಂದು ವೈಭವದಿಂದ ಜರುಗಿತು.

ಪೌದನಿಶ, ದೊರ್ಭಲೇಶ, ಗೊಮ್ಮಟೇಶ ಸೌಂಧರ್ಯಯುತ ಸುಂದರಾಂಗನಿಗೆ ಎಷ್ಟು ಪೂಜಿಸಿದರು ಸಾಲದು, ಯಾವ ವಿಧದಲ್ಲಿ ಪೂಜಿಸಿದರು ತೃಪ್ತಿಸಿಗದು, ಎಲ್ಲ ವಿಧದ ಅಷ್ಟ ದ್ರವ್ಯಗಳಿಂದ ಪೂಜೆಗೈದು ವಿವಿಧ ರಂಗಿನಲ್ಲಿ ಕಂಡ ಕಣ್ಣುಗಳಿಗೆ ಸುಂದರ ಮನ್ಮಥನಿಗೆ ನೈವೇದ್ಯ ರೀತಿ ದ್ರವ್ಯ ಪಂಚಾಮೃತ ದ್ರವ್ಯಗಳಾದ ಹಣ್ಣುಗಳು, ತುಪ್ಪ, ತೆಂಗಿನ ತುರಿ, ಬೆಲ್ಲದ ಹುಡಿ, ಮೊಸರು, ಕಡಲೆ ಬೆಳೆ, ಹೆಸರು ಬೆಳೆ, ಒಣ ಹಣ್ಣುಗಳು, ಭತ್ತದ ಹರಳು ಇತ್ಯಾದಿಗಳಿಂದ ಪೂಜಿಸಿ ಕಣ್ತುಂಬಿಸಿ ಕೊಳ್ಳುವ ಭಾಗ್ಯ ಬಹಳ ವರ್ಷಗಳ ನಂತರ ಶ್ರೀಗಳವರು ನಮಗೆ ಕರುಣಿಸಿದ ದೃಷ್ಯಾವಳಿಗಳು ನೋಡಲು ಅತಿ ರಮಣೀಯ.

ಮಹಾ ಅತೀಶಯ ಶ್ರೀ ಜಿನನ್ನುಲೋಕಪೂಜಿತನನ್ನು ಮೊಸರಿನಿಂದ ಅಭಿಷೇಕಗೈದಾಗ ಮೂರ್ತಿ ಶ್ವೇತ ಮೂರ್ತಿಯಾಗಿ ಕಣ್ಮನ ಸೆಳೆದು ನೆರೆದಿದ್ದ ಭಕ್ತವೃಂದ

ಪುನೀತವಾದರು. ಕಾಯೋಸರ್ಗ ಭಂಗಿಯಲ್ಲಿ ವಿರಾಜಮಾನನಾಗಿರುವ ದಿವ್ಯ ಭವ್ಯ ಪರಿಪೂರ್ಣ ಶಿಲ್ಪ ವಿಶ್ವ ವಿಖ್ಯಾತ ಬಾಹುಬಲಿ ಮೂರ್ತಿಗೆ ಪವಿತ್ರ ಜಲ, ತಂಪಾದ ಎಳನೀರು ಹಾಗೂ ಸವಿಯಾದ ಕಬ್ಬಿನ ಹಾಲಿನ ಅಭಿಷೇಕದ ಮೂಲಕ ಅಷ್ಟ ದ್ರವ್ಯಗಳ ಪೂಜೆ ಆರಂಭ.

ಎಷ್ಟು ಹಾಡಿ ಹೋಗಳಿದರು ನಸು ನಗೆ ಮೊಗದ ಸ್ವಾಮಿಗೆ ನಡೆಯುವ ಕ್ಷೀರಾಭಿಷೇಕ ಕ್ಷೀರವು ಧಾರಕಾರವಾಗಿ ಪಾದದ ಕಡೆಗೆ ಹರಿದುಬರುವ ಪರಿ ಅವನತ್ಯ ಸೌಂದರ್ಯದಿಂದ ಕಂಗೊಳಿಸುವ ಘಳಿಗೆ ವರ್ಣಾನಾತೀತ. ಮಂದಸ್ಮಿತ ತೇಜೋಮೂರ್ತಿ ಕಲ್ಕಚೂರ್ಣದ ಅಭಿಷೇಕದಲ್ಲಿ ಮೋಡಗಳ ಮಧ್ಯ ತೇಲಿ ಬಂದ ದೇವನ ನೋಟ ಒಂದು ದಿವ್ಯ ನೋಟ.

ತ್ಯಾಗ ಅಹಿಂಸೆಯ ಪ್ರತಿಕವಾದ ಗೊಮ್ಮಟನ ಪಾವನ ಮೂರ್ತಿ ಕೇಸರಿ ಚಂದನದಿಂದ  ಮಿಂದ ಸಮಯ  ಸುತ್ತಲಿನ ವಾರವರಣವೆ ಗಮಗಮಿಸುತ್ತಾ ಸ್ವರ್ಗವೇ ಧರೆಗಿಳಿದಿರುವ ಅನುಭವ. ಭುಜಬಲಿಷನಿಗೆ ಬಗೆಬಗೆಯ ಕುಸುಮಗಳಿಂದ ಪುಷ್ಪಾಭಿಷೇಕವಾದಗ ಮನ ಭಾವತುಂಬಿ ನರ್ತಿಸುತದೆ. ಖಂಡಿತ ಎಂದು ಮರೆಯಲಾಗದ ಮನದಲ್ಲಿ ಅಚ್ಚಳಿಯದೆ ಮೂಡುವಂತಿತ್ತು. ಭಾನೆತ್ತರದ ಮೂರ್ತಿಗೆ ಎರಿಸಿದ ಏಲಕ್ಕಿ ಹಾರ ಮಹಾ ಮಂಗಳಾರತಿ.

ಇಂತಹ ವಿಶೇಷ ಚಿತ್ರಿಕೃತ ದೃಶ್ಯಾವಳಿಗಾಗಿ ತಪ್ಪದೆ ಸಂಪರ್ಕಿಸಿ ಜ್ವಾಲಮಾಲ ಕ್ರಿಯೇಷನ್ಸ್

ವಂದನೆಗಳೊಂದಿಗೆ ಮತ್ತೆ ಭೇಟಿಯಾಗೋಣ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.