ಕ್ಷೇತ್ರ ಪರಿಚಯ- 08 / ಸಾವಿರ ಕಾಂಬಗಳ ಬಸದಿ / ಮುದ್ದุบಿದರೆ / ದಕ್ಷಿಣ ಕನ್ನಡ

ಜೈ ಜಿನೇಂದ್ರ ಮಂಗಳೂರಿನಿಂದ 37 ಕಿ.ಮೀ ದೂರವಿರುವ ಮೂಡುಬಿದಿರೆಯ ಹಸಿರಾದ ಪ್ರಕೃತಿಯ ಮಡಿಲಿನಲ್ಲಿ ನೀವೂ ನೊಡುತ್ತಿರುವುದು ಒಂದು ಭವ್ಯ ವಿಶಾಲವಾದ ರಮಣೀಯ ಜೈನ ಬಸದಿ. ಈ ಬಸದಿಗೆ  ಸಾವಿರ ಕಂಬಗಳಿಂದ ನಿರ್ಮಾಣಗೊಂಡಿರುವುದರಿಂದ ಸಾವಿರ ಕಂಬದ ಬಸದಿ ಎಂದು ತ್ರೀಭೂವನ ತಿಲಕದಂತೆ ಚೂಡಾಮಣಿ ರತ್ನದಂತೆ ಮೇರೆಯುವುದರಿಂದ  ತ್ರೀಭೂವನ ತಿಲಕ ಚೂಡಾಮಣಿ ಬಸದಿ ಎಂದು ಚರಿತ್ರಕಾರರು ಹೆಸರಿಟ್ಟಿದಾರೆ.

14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಎರಡನೇ ದೇವರಾಯನಲ್ಲಿ ಅಂದಿನ ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಅಪೇಕ್ಷೆಯ ಮೇರೆಗೆ ಮಂಗಳೂರಿನ ತನ್ನ ಗವರ್ನರ್ ಗೆ ಆದೇಶ ನೀಡಿ ಬಸದಿ ನಿರ್ಮಾಣಕ್ಕೆ ಹತ್ತು ಎಕರೆ ಜಮೀನು ದಾನವಾಗಿ ನೀಡುತ್ತಾರೆ. ನಂತರ 1430ರಲ್ಲಿ ಕಟ್ಟಲು ಪ್ರಾರಂಭ ಮಾಡಿ 1469ಕ್ಕೆ ಪೂರ್ಣಗೊಂಡ ಈ ಬಸದಿ ಭಾರತದಲ್ಲಿ ಇದನ್ನು ಹೋಲುವ ದೇವಾಲಯ ಮತೊಂದಿಲ್ಲಾ ಆದುದರಿಂದಲ್ಲೆ ಏನೋ ತ್ರೀಭೂವನ ತಿಲಕ ಚೂಡಾಮಣಿ ಎಂಬ ಹೆಸರೇ ಅದರ ಭೌವ್ಯತ್ವವನ್ನು ದಿವ್ಯತ್ವವನ್ನು ಏತ್ತಿಯಿಡಿಯುತ್ತದೆ.

ಬಸದಿಯ ಮುಂಭಾಗದಲ್ಲಿ ತಲೆ ಎತ್ತಿ ನಿಂತಿರುವ ಮಾನ ಸ್ತಂಭವನ್ನು ಬೈರವರಸನ ಮಡದಿಯಾದ ನಾಗಲಾ ದೇವಿಯು 60 ಅಡಿ ಉತ್ತುಂಗವಾಗಿ ನಿರ್ಮಿನಿಸಿದರು. ಈ ಬಸದಿಯು ಬೈರವಾದೇವಿ ಮಂಟಪ, ಚಿತ್ರದೇವಿ ಮಂಟಪ, ನಮಸ್ಕಾರ ಮಂಟಪ, ತೀರ್ಥಂಕರ ಮಂಟಪ, ಲಕ್ಷ್ಮಿ ಮಂಟಪ, ಸುಕನಾಸಿ ಮಂಟಪ, ಗರ್ಭಗೃಹ

ಮಂಟಪಗಳೆಂಬ ಏಳು ಮಂಟಪಗಳ ಸಾಲುಗಳಿಂದ ಉದ್ದಕ್ಕೆ ಮೈಚಾಚಿ ಅಂದವಾಗಿ ನಿಂತಿದೆ. ಸನ್ 1463ರಲ್ಲಿ ಬೈರವದೇವಿಯು ನಿರ್ಮಿಸಿದ ಬೈರವದೇವಿ ಮಂಟಪ ಅದೊಂದು ಕಲೆಯ ಭಂಡಾರ ಇಲ್ಲಿನ ಶಿಲ್ಪಕಲೆ ನೈಪುಣ್ಯತೆಯಿಂದ ಕೊಡಿದೆ ಪ್ರತಿ ಸ್ತಂಭಗಳು ಮನಮೋಹಕವಾದ ಕುಸುರಿ ಕೆಲಸದಿಂದ ಸಿಂಗರಿಸಲ್ಪಟಿದೆ. ಯಾವೆರಡು ಕಂಬಗಳು ಒಂದೇ ರೀತಿಯಾಗಿಲ್ಲ ಎಲ್ಲ ಕಂಬಗಳು ದೇವತೆಗಳ ಪತ್ರ ಪುಷ್ಪಗಳ ಕೇತನೆ ಸಂಬೃಧವಾಗಿದೆ.

ಮಂಟಪದ ಕೆಳಗಿನ ಹೊರ ಪ್ರಾಕಾರದಲ್ಲಿ ಶಿಲೆಯಲ್ಲಿ ಜಿರಾಫೆ, ಚೀನಾದ ಡ್ರಾಗನ್, ಅರಬ್ಬೀ ದೇಶಗಳ ಕುದುರೆಗಳು, ಮತ್ಸಯ ಕನಿಕೆ ಕೇತಲ್ಲಪಟ್ಟಿದೆ. ಸಪ್ತಪರಮ ಸ್ಥಾನದ ಅಗ್ರಭಾಗದ ಸಮೋಸಹರಣದ  ಮಂಟಪದಲ್ಲಿ ಬಸದಿಯ ಮೂಲನಾಯಕ ಭಗವಾನ್ ಚಂದ್ರನಾಥ ಸ್ವಾಮಿಯು 700ಶ್ರಾವಕರ ಸುವರ್ಣ ದಾನದಿಂದ ನಿರ್ಮಿತವಾದ ಪಂಚಲೋಹದ 9ಅಡಿ ಎತ್ತರದ ಖಡ್ಗಾಸನ ಪ್ರತಿಮೆ. ಭಗವಂತನ ಸ್ವರ್ಣಾಲಂಕೃತ ಬಿಂಬದ ದರ್ಶನ ಬಹು ಬವಗಳ ಪಾಪ ಕಳೆಯುವಂತಹದು, ಅಮೋಘ ಪೂಣ್ಯಪ್ರದವಾದುದು. ಅಲ್ಲಿ ಲಕ್ಷದೀಪಾಲಂಕರ ನೊಡಲೂ ಕಣ್ಣೆರಡು ಸಾಲದೆಂಬಂತೆ ವೈಭವಯುತವಾಗಿರುತ್ತದೆ. ಇಂದಿನ ಶ್ರೀಗಳಾದ ಭಾರತ ಭೂಷಣ ಸ್ವಸ್ತಿಶ್ರೀ ಮಧನಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನ ನೇತೃತ್ವದಲ್ಲಿ ಈ ಬಸದಿ ಯಷ್ಟೆಯಲ್ಲದೆ ಮೂಡುಬಿದಿರೆಯ ಸಮಸ್ತ ಬಸದಿಗಳು ಪೂಜಾ ಕಾರ್ಯಕ್ರಮಗಳು ಅಭಿವೃಧಿಕಾರ್ಯಗಳು ನಡೆಯುತ್ತಾ ಬಂದಿದೆ.

(ಭಾರತ ಭೂಷಣ ಸ್ವಸ್ತಿಶ್ರೀ ಮಧನಭಿನವ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯವರ್ಯ ಮಹಾಸ್ವಾಮೀಜಿಯವರ ಮಾತನಾಡಿ ಈ ಭರತ  ಭೂಮಿಯಲ್ಲಿ  ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಒಂದು ನಗರವೇನಿದೆ ಇದು ಅತ್ಯಂತ ಪ್ರಾಚೀನವಾದ ಅತಿಶಯ ಕ್ಷೇತ್ರ ಸಿದ್ದಕ್ಷೇತ್ರ ತೀರ್ಥ ಕ್ಷೇತ್ರಗಳಲ್ಲಿ ಒಂದು ಅಥವ ಯಾವುದೋ ಒಂದು ಭಗವಂತ ಯಾವುದೊವಂದು ಮಹಾನ್ ಪುರುಷನ ಅಗೊಚರವಾಗಿರುವಂತಹ  ಒಂದು ಮೂರ್ತಿಯೂ ಗೊಚರವಾಗಿರುತ್ತದೊ ಅದರಿಂದಾಗಿ ಅತಿಶಯವೆಂದು ಕರೆಯಲ್ಪಡುತ್ತದೆ. ಅದೆ ರೀತಿಯಾಗಿ ಮೂದುಬಿದರೆಯಲ್ಲಿ ವಿಷ್ಣು ನಂದಿ ಎಂಬ ಮೂನಿಗಳ ಕಾಲದಲ್ಲಿ ಒಂದು ಅಗೊಚರವಾಗಿರುವಂತಹ  ಪಾರ್ಶ್ವನಾಥ ಬಿಂಬವು ಅವರ ವಿಶೇಷವಾಗಿರುವಂತಹ ಜ್ಞಾನಕ್ಕೆ ಮತ್ತು ಅವರ ತಪಸ್ಸಿಗೆ ಒಲಿದು ಆ ಪಾರ್ಶ್ವನಾಥಸ್ವಾಮಿಯು ಭೂಗರ್ಭದಿಂದ ಗೊಚರಕ್ಕೆ ಬರುತ್ತದೆ ಎಂದು ಮತ್ತು ಇನ್ನಷ್ಟು ಮೂಡುಬಿದಿರೆಯ ವಿಶೇಷತೆಯ ಬಗ್ಗೆ ತಿಳಿಸಿದರು).

ವಿಶಿಷ್ಟ ವಾಸ್ತು ವೈಭವದಿಂದ ಕಂಗೊಳಿಸುತ್ತಿರುವ ತ್ರೀ

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್