ಅಸ್ಥಾನಿಕ ಪರ್ವ

ಜೈ ಜಿನೇಂದ್ರ ನಾನು ಇಂದು ಹೇಳ ಹೊರಟಿರುವುದು ಆಷ್ಟಾನಿಕ ಪರ್ವದ ಬಗ್ಗೆ ಜೈನ ಶ್ರಾವಕರು ಆಚರಿಸುವ ಅನೇಕ ಪರ್ವಗಳಲ್ಲಿ ಆಷ್ಟಾನಿಕ ಪರ್ವವು ಒಂದು ಮುಖ್ಯವಾದ ಪರ್ವವಾಗಿದೆ. ಅದರಲ್ಲಿಯೂ ದಿಗಂಬರ ಜೈನ ಸಂಪ್ರದಾಯದಲ್ಲಿ ವಿಶೇಷವಾಗಿ ಆಚರಣೆಯಲ್ಲಿದೆ. ಪರ್ವವೆಂದರೆ ಹಬ್ಬವೆಂದರ್ಥ, ಹಬ್ಬವೆಂದರೆ ವಿಶೇಷ ಭೋಜನ ಹೊಸ ಬಟ್ಟೆಯುಟ್ಟು ಸಂಭ್ರಮಿಸುವುದು ಆದರೆ ಈ ಪರ್ವವು ಆ ರೀತಿಯಾಗಿ ಆಚರಿಸಲ್ಪಡುವುದಿಲ್ಲ ಈ ಆಷ್ಟಾನಿಕ ಪರ್ವವು ವರ್ಷದಲ್ಲಿ ಮೂರು ಬಾರಿ ಅಂದರೆ ಆಷಾಡ, ಕಾರ್ತಿಕ ಮತ್ತು ಪಾಲ್ಗೂಣ ಮಾಸಗಳಲ್ಲಿ ಶುಕ್ಲ ಪಕ್ಷದ ಆಷ್ಟಮಿಯಿಂದ ಪೌರ್ಣಮಿಯವರೆಗೆ ಅಚರಿಸಲ್ಪಡುತ್ತದೆ. ಈ ಪರ್ವದ ದಿನಗಳಲ್ಲಿ ವ್ರತ ನಿಯಮಗಳನ್ನು ಕೈಗೊಳ್ಳುವುದು ಉಪವಾಸ, ಏಕಬುಕ್ತ, ದೇವಪೂಜಾ, ನೊಂಪಿಗಳ ಆಚರಣೆ, ಆಗಮ ಗ್ರಂಥಗಳ ಸ್ವಾದ್ಯಾಯ, ಜಪ, ಧ್ಯಾನಗಳಿಂದ ಅಂತರಂಗದ ಶುದ್ಧ ಪರಿಣಾಮಗಳನ್ನು ಬೆಳೆಸಿಕೊಳ್ಳುವ ಅತ್ಮೊನತಿಯ ಪರ್ವವಾಗಿ ಅಚರಿಸ ಬೇಕು. ಜೈನ ಸಿದ್ದಾಂತದ ಅನುಸಾರ ಲೋಕವು ಉರ್ದ್ವಲೋಕ, ಮಧ್ಯಮ ಲೋಕ ಮತ್ತು ಅದೊಲೋಕಗಳೆಂದು ಮೂರು ಪ್ರಕಾರವಾಗಿದೆ. ಮಧ್ಯಮ ಲೋಕದಲ್ಲಿ ಜಂಬು ದ್ವೀಪ, ಧಾತಕಿ ಖಂಡ, ಪುಷ್ಕರವರ, ವಾರ್ಣಿವರ, ಕ್ಷೀರವರ, ಗೃತವರ, ಹೀಕ್ಷುವರ, ನಂದೀಶ್ ವರ, ಅರುಣವರ ಮತ್ತು ವಯಂಬು ರಮಣವೆಂಬ ಹತ್ತು ದ್ವೀಪಗಳಿವೆ. ಇದರಲ್ಲಿ ಜಂಬುದ್ವೀಪದಿಂದ ಎಂಟನೇಯದಾದ ನಂದೀಶ್ ವರ ದ್ವಿಪವು ಅದೆ ಹೆಸರಿನ ಸಮುದ್ರದಿಂದ ಅವರಿಸಲ್ಪಟಿದ್ದು 163 ಕೋಟಿ 84 ಲಕ್ಷ ಯೋಜನಾ ವಿಸ್ತಾರವಿದೆ.

ಅದರ ಪ್ರತಿಯೊಂದು ದಿಕ್ಕಿನಲ್ಲೂ ಅಂಜನಾ ಪರ್ವತ, ದದಿ ಮುಖ ಪರ್ವತ ಮತ್ತು ರತಿಕರ ಪರ್ವತವೆಂಬ ಪರ್ವತಗಳಿವೆ. ಅಂಜನಾ ಪರ್ವತದಲ್ಲಿ ಒಂದು, ದದಿ

ಮುಖ ಪರ್ವತದಲ್ಲಿ ನಾಲ್ಕು ಮತ್ತು  ರತಿಕರ ಪರ್ವತದಲ್ಲಿ ಎಂಟು, ಒಟ್ಟು 13 ಅಕೃತಿಮ ಜಿನ ಚೈತ್ಯಾಲಯಗಳಿವೆ. ನಾಲ್ಕು ದಿಕ್ಕುಗಳಿಂದ ಒಟ್ಟು 52 ಜಿನ ಚೈತ್ಯಾಲಯಗಳಾಗುತ್ತವೆ. ಅಕೃತಿಮ ಎಂದರೆ ಯಾರಿಂದಲೂ ನಿರ್ಮಾಣಗೊಳ್ಳದೆ ಸ್ವಯಂ ನಿರ್ಮಿತವಾಗಿರುವುದು ಎಂದರ್ಥ. ಈ ಒಂದೊಂದು ಅಕೃತಿಮ ಜಿನ ಚೈತ್ಯಾಲಯದಲ್ಲಿ ಅಪೂರ್ವ ಮಣಿಮಯ ರತ್ನಗಳಿಂದ ನಿರ್ಮಿಸಲ್ಪಟ್ಟ 108 ಅಕೃತಿಮ ಜಿನ ಬಿಂಬಗಳಿರುತವೆ. ಈ ಎಲ್ಲಾ ಜಿನಾಲಯಗಳಲ್ಲಿರುವ ಒಟ್ಟು ಜಿನ ಬಿಂಬಗಳ ಸಂಖ್ಯೆ 5,616. ಈ ಜಿನ ಬಿಂಬಗಳ ಸಮೂಹವನ್ನು ಪೂಜಿಸುವ ಸಲುವಾಗಿ ದೇವ ಲೋಕದ ದೇವತೆಗಳು ದೇವ ಲೋಕವನ್ನು ಬಿಟ್ಟು ಸ್ವರ್ಗದ ಭೋಗೊಪ ಬೋಗಗಳನ್ನು ತ್ಯಾಗ ಮಾಡಿ ನಂದೀಶ್ವರ ದ್ವೀಪಕ್ಕೆ ಆಗಮಿಸುತ್ತಾರೆ.  ಅಷ್ಟಾನಿಕ ಪರ್ವದ ಆ ಎಂಟು ದಿನಗಳು ಹಗಲು ರಾತ್ರಿ ಬೇಧ ವಿಲ್ಲದ್ದೆ ಅಖಂಡವಾಗಿ ಆ ಜಿನ ಬಿಂಬವನ್ನು ದರ್ಶನ ಮಾಡಿ ಪೂಜಿಸಿ ಆರಾಧಿಸಿ ಧನ್ಯರಾಗುತ್ತಾರೆ. ಗಾನ ನೃತ್ಯಗಳಿಂದ ಆರಾಧಿಸಿ ಆನಂದ ಒಂದುತ್ತಾರೆ.

ಮನಷ್ಯರಾದ ನಾವು ಅಲ್ಲಿಗೆ ಹೋಗಲ್ಲೂ ಸಾದ್ಯವಿಲ್ಲದಿರುವುದರಿಂದ ಈ ಪವಿತ್ರವಾದ ಕಲ್ಪನೆಯನ್ನು ಮನಸಿನಲ್ಲಿಯೆ ಭಾವಿಸುತ್ತ ಅದರ ಪ್ರತಿಕವಾಗಿ ಜಿನ ಬಸದಿಗಳಲ್ಲಿ  ನಾಲ್ಕು ದಿಕ್ಕುಗಳಿಗೆ ಜಿನ ಬಿಂಬಗಳನ್ನು ಜೋಡಿಸಿ ಭಕ್ತಿ ಶ್ರದ್ಧೆಯಿಂದ ವ್ರತ ನೊಂಪಿಗಳನ್ನು ಕೈಗೊಂಡು ಆರಾಧನೆ ಮಾಡುವುದರ ಮೂಲಕ ಅಚರಿಸುವುದೆ ಅಷ್ಟಾನಿಕ ಪರ್ವವಾಗಿದೆ. ಇದ್ದು ಸರ್ವಕಾಲಿಕ ಶಾಶ್ವತ ಪರ್ವವಾಗಿದೆ, ವರ್ಷದಲ್ಲಿ ಬರುವ ಮೂರು ಅಷ್ಟಾನಿಕ ಪರ್ವಗಳಲ್ಲಿ ಈ ಆಷಢಾ ಮಾಸದ ಅಷ್ಟಾನಿಕ ಪರ್ವವನ್ನು ಶ್ರೇಷ್ಟವೆಂದು ಹೇಳುವುದು ಉಂಟು, ಈ ಮಾಸವು ವ್ರತ ನಿಯಮದಾರಿಗಳಿಗೆ ಅನೂಕುಲಕರವಾಗಿಯೂ ಇರುತ್ತದೆ. ವ್ರತ ನೊಂಪಿಗಳನ್ನು ಹೊಸದಾಗಿ ಪ್ರಾರಂಭಿಸುವವರು ನಂತರ ಮುಕ್ತಾಯದ ಉಧ್ಯಾಪನೆಯನ್ನು ಮಾಡುವವರು ಈ ಆಷಾಢದ ಮಾಸದಲ್ಲೆಯೆ ಮಾಡುವುದು ಸಂಪ್ರದಾಯವಾಗಿದೆ. ಅಲ್ಲದೆ ಈ ಸಮಯದಲ್ಲಿ ಪ್ರಕೃತಿ ಸಹಜವಾಗಿಯೂ ಬಗೆಬಗೆಯ ಫಲ ಪುಷ್ಪಗಳು ಸಂಬೃಧವಾಗಿ ದೊರೆಯುತ್ತವೆ. ಈ ಅವಮಾನವು

ತಂಪಾಗಿರುವುದರಿಂದ ಹೆಚ್ಚಿನ ಅಯಾಸವೆನಿಸದೆ ಹರ್ಷ ಉಲ್ಲಾಸದಾಯಕ ವೆನಿಸುತ್ತದೆ. ಫಲವತ್ತಾದ ಮಣ್ಣಿನಲ್ಲಿ ಸಕಾಲದಲ್ಲಿ ಬೀತಿದ ಬೀಜವು ಸಂಬೃದವಾದ ಫಲಕೊಡುವಂತೆ ಈ ಆಷಾಢ ಮಾಸದಲ್ಲಿ ಮಾಡುವ ವ್ರತ ನೊಂಪಿ ದಾನ ಧರ್ಮ  ಮೊದಲಾದ ಧಾರ್ಮಿಕ ಕಾರ್ಯಗಳಿಂದ ಉತ್ತಮ ಫಲ ದೊರೆಯುವುದೆಂದು ಪೂರ್ವಚಾರ್ಯರು ತಿಳಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ತೀರ್ಥಂಕರ ಭಗವಂತರು ಅನೇಕ ಮಂದಿ ಕೆವಲ್ಲಿಗಳು ಮುಕ್ತಿಗಾಮಿಗಳು ತಮ್ಮ ಹಿಂದಿನ ಬಾವಗಳಲ್ಲಿ  ನಂದೀಶ್ವರ ದ್ವೀಪಕ್ಕೆ ಹೋಗಿ ಅಕ್ರತಿಮ ಜಿನಾಲಯಗಳಲ್ಲಿನ ಜಿನ ಬಿಂಬಗಳನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಆರಾಧಿಸಿದರೆಂಬ ವಿಚಾರವು ಆಗಮಗ್ರಂಥಗಳಲ್ಲಿ ಪುರಾಣಗಳಲ್ಲಿ ತಿಳಿದುಬರುತ್ತದೆ.

ಹೀಗೆ ಮಹತ್ವದಿಂದ ಕೂಡಿರುವ ಈ ಪರ್ವವನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಿ ಆರಾಧಿಸಿ ಎಂಟು ಕರ್ಮಗಳನ್ನು ನಾಶಗೊಳಿಸಿ ಎಂಟು ಗುಣಗಳನ್ನು ಪಡೆದುಕೊಂಡ ಮಹಾಪುರುಷರ ಪುರಾಣ ಪುರುಷರ ಕಥೆಗಳು ಮಹಾಪುರಾಣದಲ್ಲಿ ವಿಸ್ತಾರವಾಗಿ ಕಂಡುಬರುವುದು. ಮನುಷ್ಯ ಜನ್ಮ ಅತ್ಯಂತ ದುರ್ಲಭವಾದುದು ಅಂತಹ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಲು ಈ ಪರ್ವದ ದಿನಗಳಲ್ಲಿ ಜಿನ ದರ್ಶನ ಪೂಜೆ, ಜಪ, ಧ್ಯಾನಗಳಿಗೆ ಮೀಸಲಾಗಿಸ ಬೇಕು. ವಿಶೇಷವಾಗಿ ಧಾರ್ಮಿಕ ಪ್ರವಚನಗಳನ್ನು ಕೇಳುವುದರ ಮೂಲಕ ಪೂಜೆ ಆರಾಧನೆಗಳನ್ನು ಮಾಡುವುದರ ಮೂಲಕ ಜನ್ಮ ಸಾರ್ಥಕ ಪಡಿಸಿಕೊಳ್ಳೊಣ.

ಇಂತಹ ವಿಶೇಷ ವೀಡಿಯೊಗಳೊಂದಿಗೆ ಮತ್ತೆ ಭೇಟಿಯಾಗೋಣ ನಿಮ್ಮ ಜ್ವಾಲಮಾಲ ಡಾಟ್ ನ್ಯೂಸ್ ನಲ್ಲಿ.

ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್