ಪೂಜ್ಯಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಸಮಾಜದ ಉನ್ನತ ಕಾರ್ಯವೆಂದರೆ ಕೇವಲ ದೇವಸ್ಥಾನದ ಕಾರ್ಯಗಳಲ್ಲಾ ಇಂತಹ ಶೈಕ್ಷಣಿಕ ಉನ್ನತಿಯ ಕೆಲಸಗಳು ಸೇರುತ್ತವೆ ಎಂದರು. (ಪೂಜ್ಯಶ್ರೀಗಳವರು ತಮ್ಮ ಆಶೀರ್ವಚನದಲ್ಲಿ ಹಿಂದಿನ ಕಾಲದ ಜೈನ ಶ್ರಾವಕರ ಉಡುಗೆ ಹೇಗೆ ಇರುತಿತ್ತು ಮತ್ತು ಅವರಲ್ಲಿದ ಧಾರ್ಮಿಕ ಶಕ್ತಿ, ಕರ್ತವ್ಯ ಪ್ರೌವೃತಿ ಮತ್ತು ಸಮಾಜದ ಹೇಳಿಗೆಗಾಗಿ ಒಳ್ಳೆಯ ಕಾರ್ಯಕ್ರಮವನ್ನು ಮಾಡಿ ಯಶಸ್ವಿಗೊಳಿಸುತ್ತಿದರು ಎಂದು ತಿಳಿಸಿದರು).
ಎಸ್. ಜಿತೇಂದ್ರ ಕುಮಾರ್ ರವರು ಮಾತನಾಡಿ ಸ್ವಾಮೀಜಿಯವರು ನಮಗೆ ಬೆಂಗಳೂರಿನ ನಿವೇಶನದಲ್ಲಿ ಕಟ್ಟಡವನ್ನು ನಿರ್ಮಾಣ ಸಮಿತಿಯನ್ನು ಮಾಡಿ ಕಾರ್ಯಕ್ರಮವನ್ನು ಮಾಡಲು ಆದೇಶ ನೀಡಿದರು ಎಂದು ಹೇಳಿದರು. ನಂತರ ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರ ಸಹಕಾರ ಮತ್ತು ಅವರ ಸಹಯೋಗದಿಂದ ಮತ್ತು ಅವರ ಸಹೋದರರಾದ ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರನ್ನು ನಮ್ಮ ಕಾರ್ಯಯೋಜನೆಗೆ ಚೆರ್ಮೆನ್ ಹಾಗಿ ನಿಯೋಜಿಸಿಕೊಂಡು ಈ ಕಾರ್ಯಕ್ರಮವನ್ನು ನಡೆಸುತ್ತಿದೆವೆ ಮತ್ತು ಈ ಕಾರ್ಯ ಕ್ರಮಕ್ಕೆ ಸಮಾಜ ಮತ್ತು ಸಮಾಜಭಾಂದವರಿಗೆ, ಪೂಜ್ಯ ಸ್ವಾಮೀಜಿಯವರಿಗೆ, ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರಿಗೆ, ಮತ್ತು ಧರ್ಮಸ್ಥಳ ಸುರೇಂದ್ರ ಕುಮಾರ್ ರವರಿಗೆ
ಚಿರಋಣಿಯಾಗಿರುತ್ತೆವೆಯೆಂದರು. ಮತ್ತು ಜ್ವಾಲಮಾಲ ನ್ಯೂಸ್ ಗೆ ಶುಭ ಆರೈಸಿದರು.
ಕುಮಾರಿ ನಮಿತಾ ಜೈನ್ ರವರ ಸುಂದರ ನಿರೂಪಣೆ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಪಿ ವೈ ರಾಜೇಂದ್ರ ಕುಮಾರ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ವಂದನೆಗಳೊಂದಿಗೆ ಜ್ವಾಲಮಾಲ ಡಾಟ್ ನ್ಯೂಸ್














