ಜೈ ಜಿನೇಂದ್ರ ಆ ಧರ್ಮ ಈ ಧರ್ಮ ಶ್ರೇಷ್ಟವೆಂದು ಸಾರದೆ ಅಹಿಂಸಾ ಪರಮೋಧರ್ಮವೆಂದು ಜಗತ್ತಿಗೆ ಸಾರಿರುವ ಏಕೈಕ ಧರ್ಮ ಜೈನ ಧರ್ಮ. ಜೈನರು ಆತ್ಮ ಕಲ್ಯಾಣಕಾಗಿ ಅನೇಕ ವ್ರತ ಉಪವಾಸ ಹಬ್ಬಗಳನ್ನ ಅಚಾರಿಸುತ್ತಾರೆ. ಜೈನ ಧರ್ಮೀಯರ ಪವಿತ್ರವಾಗಿರುವತಂಹ ಮಹಾ ಪರ್ವವೆ ದಶಲಕ್ಷಣ ಪರ್ವ. ಉತ್ತಮ ಕ್ಷಮ, ಮಾರ್ದವ, ಆರ್ಜವ, ಬ್ರಹ್ಮಚರ್ಯ ಸೇರಿದಂತೆ ಹತ್ತು ಧರ್ಮಗಳನ್ನು ಕೂಡ ಆಚರಿಸಲಾಗುತ್ತಿದೆ. ಕರ್ನಾಟಕ ಜೈನ ಅಸೋಸಿಯೇಷನ್ ಹಾಗೂ ತ್ಯಾಗಿ ಸೇವಾ ಟ್ರಸ್ಟ್ ವತಿಯಿಂದ ಕರ್ನಾಟಕ ಜೈನ ಭವನದಲ್ಲಿ ನಡೆಯುತ್ತಿರುವ ಸಾಮೂಹಿಕ ಕ್ಷಮಾವಳಿ ಕಾರ್ಯಕ್ರಮದಲ್ಲಿ ಬನ್ನಿ ನಾವೆಲ್ಲರೂ ಪಾಲ್ಗೊಳೊಣಾ.
ಪರಮ ಪುಜ್ಯ ಪುಷ್ಪಗಿರಿ ಪ್ರಣೀತ ವಾತ್ಸಲ್ಯ ದಿವಾಕರ ಅಚಾರ್ಯ ಶ್ರೀ 108 ಪುಷ್ಪದಂತ ಸಾಗರಜೀ ಮಹಾರಾಜರು, ಪರಮ ಪೂಜ್ಯ ಶ್ರೀ ಶ್ರೀ 108 ಪ್ರಮುಖ ಸಾಗರ ಮಹಾರಾಜರು, ಪರಮ ಪೂಜ್ಯ ಶ್ರೀ ಶ್ರೀ 108 ಪೂಜ್ಯ ಸಾಗರ ಮಹಾರಾಜರು, ರಾಷ್ಟ್ರಸಂತ ಪರಮ ಪೂಜ್ಯ ಶ್ರೀ ಲಲಿತಾ ಪ್ರಭಾಸಾಗರ ಮಹಾರಾಜರು, ರಾಷ್ಟ್ರಸಂತ ಪರಮ ಪೂಜ್ಯ ಶ್ರೀ ಚಂದ್ರ ಪ್ರಭ ಸಾಗರ ಮಹಾರಾಜರು, ಪರಮ ಪೂಜ್ಯ ಡಾ|| ಶಾಂತಿ ಪ್ರಿಯ ಸಾಗರ ಮಹಾರಾಜರು ಹಾಗೂ ಪೂಜ್ಯ ಶ್ಕುಲಕ ಶ್ರೀ 105 ಪುಕಾರ ಸಾಗರ ಮಹಾರಾಜರ ಪಾವನ ಸನಿದ್ಯದಲ್ಲಿ.
ಪೂಜ್ಯ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಮಹಾ ಸ್ವಾಮೀಜಿಯವರ ಪಾವನ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜ ರತ್ನ ಧರ್ಮಸ್ಥಳ ಸುರೇಂದ್ರಕುಮಾರ್ ರವರು ದೀಪ ಪ್ರಜ್ವಲಿಸುವುದರ ಮೂಲಕ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀ ಎಸ್. ಜಿತೇಂದ್ರ ಕುಮಾರ್ ರವರು, ಮುಖ್ಯ ಅತಿಥಿಗಳಾದ ಅನಿತ ಸುರೇಂದ್ರ
ಕುಮಾರ್ ರವರು, ದೇವೇಂದ್ರ ಸ್ವಾಮಿಯವರು ಇನ್ನೂ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
(ಶ್ರೀ ಎಸ್. ಜಿತೇಂದ್ರ ಕುಮಾರ್ ರವರು ಮಾತನಾಡಿ ಕ್ಷಮಾವಳಿ ಸಮಾವೇಶ ಕಾರ್ಯಕ್ರಮವನ್ನು ಕುರಿತು ಸಂತಸ ವ್ಯಕ್ತಪಡಿಸಿದರು).
ಪರಮ ಪೂಜ್ಯ ಲಲಿತ ಮಹಾಸಾಗರರು ಉಪದೇಶಿಸುತ್ತ ನಾನು ಹೇಳುವುದಾದರೆ ಈ ಉತ್ತಮ ಕ್ಷಮಾದಿನವು ವರ್ಷದಲ್ಲಿ ಒಂದು ಬಾರಿ ಬರದೆ ವರ್ಷದ 365ದಿನವು ಬಂದರೆ ಒಳ್ಳೆಯದಾಗುತ್ತದೆ. ಏಕೆಂದರೆ ಎಲ್ಲಾ ಪಂತದವರು ಒಂದೆ ವೇದಿಕೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪ್ರತಿದಿನವು ಬರುತ್ತದೆ. ಇದಕ್ಕಿಂತ ಖುಷಿಯ ವಿಷಯ ಮತ್ತೊಂದಿಲ್ಲ ಎಂದು ಅಭಿಪ್ರಾಯಪಟ್ಟರು.
ಪರಮ ಪೂಜ್ಯ ಚಂದ್ರಪ್ರಬಾ ಸಾಗರರು ಉಪದೇಶಿಸುತ್ತ ಮಾತನಾಡಿ ಜೈನರು ಸಿಕಂದರರಾಗುವುದಕ್ಕಿಂತ ಮಹಾವೀರರಾಗಲು ಇಷ್ಟ ಪಡುತ್ತಾರೆಂದು ಹೆಮ್ಮೆ ಪಟ್ಟರು.
ಪರಮ ಪೂಜ್ಯ ಶ್ರೀ ಪುಷ್ಪ ದಂತ ಸಾಗರರು ತಮ್ಮ ಉಪದೇಶದಲ್ಲಿ ಕ್ಷಮಾವಳಿಯ ಮಹತ್ವವನ್ನು ಹೇಳಿದರು.
ಶ್ರೀಯುತ ಸುರೇಂದ್ರ ಹೆಗ್ಗಡೆಯವರು ವಮ್ಮೊಂದಿಗಿದ್ದಾರೆ, (ಜ್ವಾಲಮಾಲ ಡಾಟ್ ನ್ಯೂಸ್ ನೊಂದಿಗೆ ಮಾತನಾಡಿ). ಜೈನ ಧರ್ಮದಲ್ಲಿ ನಡೆಯುವಂತ ವಿಶೇಷವಾದಂತಹ ದಶಲಕ್ಷಣ ಪರ್ವ ಬಹಳ ಮಹತ್ವದು ಬಹಳ ವಿಚಾರ ಪೂರ್ಣವಾಗಿ ನಡೆಯುವಂತಹದ್ದು ಹಾಗೂ ಈ ಪರ್ವದ ಉದ್ದೇಶ ನಮ್ಮಲ್ಲಿನ ಅಹಂಕಾರ ಮತ್ತು ಕ್ರೋದವನ್ನು ತೇಜಿಸುವತಹ ಪ್ರಯತ್ನವಾಗಿರುತ್ತದೆ. ಇದನ್ನು ಜೈನರು ಎಂಟು ದಿನ ಆಚರಿಸಲಾಗುತ್ತದೆ. ಅದರೆ ಈ ಬಾರಿ ಹನೋಂದು ದಿನ ಆಚರಿಸಲಾಗುತ್ತಿದೆ. ಅಚಾರ್ಯ ಶ್ರೀ 108 ಪುಷ್ಪದಂತ ಸಾಗರಜೀ ಮಹಾರಾಜರ ಸಾನಿಧ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಆಚರಿಲಾಯಿತ್ತು. ದೇಶದಲ್ಲಿ ಶಾಂತಿ ಮತ್ತು ಕಾಲ ಕಾಲಕ್ಕೆ ಸರಿಯಾಗಿ ಮಳೆಯಾಗಲ್ಲಿ ಹಾಗೇ ಎಲ್ಲರೂ ಚನ್ನಾಗಿರಲ್ಲಿ ಎನ್ನುವ ಸಂದೇಶವನ್ನು ಕರ್ನಾಟಕ ಜೈನ ಭವನದಿಂದ ಕಳಿಸಿದ್ದೆವೆ
ಎಂದರು. ನನ್ನ ವೈಯಕ್ತಿಕವಾಗಿ ಜ್ವಾಲಮಾಲ ಗ್ರೂಪಿಗು ಹಾಗೂ ಎಲ್ಲರಿಗೂ ಸುಭಾಷಯಗಳನ್ನು ತಿಳಿಸಿದರು.














