ಶ್ರೀ ವಿಮಲನಾಥ ಚೈತ್ಯಾಲಯ ಬೆಳ್ಳೂರು, ಇಲ್ಲಿ ಭಗವಾನ್ ಮಹಾವೀರರ 2,543ನೇ ಮೋಕ್ಷ ಕಲ್ಯಾಣದ ಪ್ರಯುಕ್ತ, 30/10/2016ನೇ ಭಾನುವಾರ ದೀಪಾವಳಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು.
ಮಹಾವೀರರ ಮೋಕ್ಷ ಕಲ್ಯಾಣ ಪೂಜೆಯನ್ನು ಬೆಳಗಿನ ಜಾವ 5:30ಕ್ಕೆ ಪಂಚಾಮೃತ ಅಭಿಷೇಕ ಬೃಹತ್, ಶಾಂತಿಮಂತ್ರ ಪಟಣೆ, ನಿರ್ವಹಣಾ ಲಾಡು ಸಮರ್ಪಣೆ ಹಾಗೂ ಮಹಾ ಮಂಗಳಾರತಿಯನ್ನು ಬೆಳ್ಳೂರಿನ ಶ್ರಾವಕ ಶ್ರಾವಕಿಯರು ಭಕ್ತಿಯಿಂದ ನೆರೆವೇರಿಸಿದರು. ನಂತರ ಇದೆ ದಿನ ಜೈನ ಸಮಾಜದಿಂದ ಭಕ್ತಾಂಬರ ಆರಾಧನೆಯನ್ನು ಏರ್ಪಡಿಸಿದರು. ಜೈನ ಸಮಾಜದ ಅಧ್ಯಕ್ಷರಾದ ಶ್ರೀ ಶಾಂತಿ ಪ್ರಸಾದ್ ಜೈನ್, ಮಹಿಳಾ ಸಮಾಜದ ಅಧ್ಯಕ್ಷರು ಶ್ರೀಮತಿ ವಸಂತಮ್ಮ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಶೀಲಾ ಪ್ರಸಾದ್ ಇವರುಗಳ ನೇತೃತ್ವದಲ್ಲಿ ಹಾಗೂ ಬೆಳ್ಳೂರಿನ ಎಲ್ಲಾ ಜೈನ ಭಾಂದವರ ಉಪ ಸ್ಥಿತಿಯಲ್ಲಿ ದಿನದ ಎಲ್ಲಾ ಕಾರ್ಯಕ್ರಮಗಳು ತ್ವಿಸ್ತಿತವಾಗಿ ನಡೆಯಿತು ಎಂದು ಶ್ರೀಮತಿ ಪರಿಮಳ ಮೋಹನ್ ರವರು ತಿಳಿಸಿದ್ದಾರೆ.














