ಶಾಂತಿರಾಜ ಶಾಸ್ತ್ರೀ ಟ್ರಸ್ಟ್, ಭಾಗ 2

ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್ (ರಿ ) , ನ ಬಗ್ಗೆ ಹೇಳುತ್ತಿದ್ದೆ. ಈ ಹಿಂದಿನ  ಭಾಗದಲ್ಲಿ ಹೇಳಿದಂತೆ  ಅಗಾಧ ಭಂಡಾರ.  ಇದನ್ನು ಕೆಲವೇ ನಿಮಿಷದಲ್ಲಿ ಸಂಕ್ಷೀಪ್ತ ಗೊಳಿಸುವುದು ನನ್ನ ಮುಂದಿರುವ  ಸವಾಲೇ ಸರಿ.

ಹಾಗೂ ಸೇವಾ ವೈಖರಿಯ ಬಗ್ಗೆ  ತಿಳಿಯುತ್ತಾ ಹೋಗೋಣ. ಶಾಸ್ತ್ರಿ ಗಳ ಮಕ್ಕಳಾದ  ಎಸ್. ನಾಗಕುಮಾರ್, ಎಸ್. ಜಿತೇಂದ್ರ ಕುಮಾರ್  ಪ್ರಸನ್ನಕುಮಾರ್, ಮತ್ತು ಎಸ್. ಗುಣವರ್ಮರವರು ಹಾಗೂ ಜಯಲಕ್ಷ್ಮಮ್ಮ ,ವಸಂತಲಕ್ಷ್ಮಿ , ಚಂದ್ರಕಲಾದೇವಿ ಮತ್ತು ಪ್ರೇಮಲತಾದೇವಿಯವರು  ಶಾಸ್ತ್ರಿಗಳ ಧಾರ್ಮಿಕ ಪ್ರವೃತ್ತಿಯನ್ನು  ಬೆಳಗಿರುವವರು.  ಅಂತಹ  ಒಬ್ಬ ಮಹನೀಯರ ಸ್ವರಣಾರ್ಥವಾಗಿ  ಅವರ ಜನ್ಮ ಶತಾಬ್ದಿ ಆಚರಣೆ ಸಂದರ್ಭದಲ್ಲಿ 1988 ರಲ್ಲಿ ಪರಮಪೂಜ್ಯ ಜಗದ್ಗುರು  ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ  ಮಾರ್ಗದರ್ಶನದಲ್ಲಿ ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್  ಸ್ಥಾಪನೆಯಾಯಿತು.

ಟ್ರಸ್ಟ್ ನಲ್ಲಿ ಐವರು  ಅಜೀವ ಧರ್ಮದರ್ಶಿಗಳಲ್ಲದೇ  ನಾಲ್ವರು ಗಣ್ಯ ವ್ಯಕ್ತಿಗಳು  ಧರ್ಮದರ್ಶಿಗಳಾಗಿದ್ದಾರೆ. ಧರ್ಮದರ್ಶಿಗಳಾಗಿ  ಎಸ್. ನಾಗಕುಮಾರ್, ಎಸ್. ಜಿತೇಂದ್ರ ಕುಮಾರ್ , ಎಸ್. ಪ್ರಸನ್ನಕುಮಾರ್, ಎಸ್ . ಗುಣವರ್ಮ, ಜಿ.ಪಿ. ನಾಗೇಂದ್ರ ಪ್ರಸಾದ್,  ಎಂ. ಎ. ಜಯಚಂದ್ರ , ಎಂ.ಜೆ. ಇಂದ್ರಕುಮಾರ್, ಎಸ್. ಎನ್. ಅಶೋಕ್ ಕುಮಾರ್, ಹೆಚ್. ಬಿ. ದೇವೇಂದ್ರಸ್ವಾಮಿಗಳು  ಧರ್ಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಟ್ರಸ್ಟ್ ನಡೆದುಬಂದ ರೀತಿ ಹಾಗು ಆಗುತ್ತಿರುವ ಬದಲಾವಣೆಗಳು , ಟ್ರಸ್ಟ್ ನ ಆಗುಹೋಗುಗಳನ್ನು ಕುರಿತು ಶ್ರೀ. ಎಸ್. ಜಿತೇಂದ್ರ ಕುಮಾರ್ ರವರು ಮಾತನಾಡಿದರು.

ಇದೊಂದು ಸಾರ್ವಜನಿಕ ದತ್ತಿ ಸಂಸ್ಥೆಯಾಗಿದ್ದು ಶಾಸ್ತ್ರಿ ಗಳ ಅಷ್ಟು ಕೃತಿಗಳನ್ನು ಪ್ರಕಾಶಿಸಿ ಈಗಲೂ ಶಾಸ್ತ್ರಿಗಳ ಕೃತಿ ಕೈ ಸೇರಲು ಕಾರಣವಾಗಿದ್ದಾರೆ.ಅಲ್ಲದೇ ಇನ್ನೂ ಇತರ ಖ್ಯಾತ ಲೇಖಕರುಗಳ ಕೃತಿಯನ್ನು ಸಹ ಅವರುಗಳು ಪ್ರಕಾಶಿಸುತ್ತಿದ್ದು ಟ್ರಸ್ಟ್ ವತಿಯಿಂದ ಹೊರಬಂದ ಕೃತಿಗಳು ಅತ್ಯಂತ ಗುಣಮಟ್ಟದ್ದಾಗಿದ್ದು  ಡಿಕ್ಶೆನರೀ ಮಾದರಿಯಲ್ಲಿ  ಪುಟಗಳ ಜೋಡಣೆ ಉತ್ತಮ ಗುಣಮಟ್ಟದ ಹಾಳೆ ಯನ್ನು ಹಾಗೂ  ಸೊಗಸಾದ ಬೈಂಡ್ ಗಳನ್ನು ಮುದ್ರಣ ಒಳಗೊಂಡಿರುತ್ತದೆ.ಹಾಗೆಯೆ ಕೃತಿಗಳ ಮುದ್ರಣ ಹಾಗೂ ಕೃತಿಗಳ ಬಿಡುಗಡೆ, ಕೃತಿಗಳ ಪ್ರಕಾಶನ ಹೀಗೆ ಪ್ರತಿಯೊಂದು ಹಂತದಲ್ಲೂ ಆದ ತೊಂದರೆಗಳು ಹಾಗೂ ಅದಕ್ಕೆ ಸಿಕ್ಕ ಪರಿಹಾರಗಳು , ಹೀಗೆ ತಮ್ಮ ಟ್ರಸ್ಟ್ ನ ಬೆಳವಣಿಗೆಯ ಬಗ್ಗೆ ಜಿತೇಂದ್ರ ಕುಮಾರ್ ರವರು ನಮ್ಮೊಂದಿಗೆ ತಮ್ಮ ಅನಿಸಿಕೆಗಳನ್ನು  ಹಂಚಿಕೊಂಡರು.