ನರಸಿಂಹರಾಜಪುರದ ದಿವ್ಯ ಡ್ರೀಮ್ about ಭಾರತ

ಜೈ  ಜಿನೆಂದ್ರ ಜ್ವಾಲಾಮಾಲಾ ನ್ಯೂಸ್ ಡಾಟ್ ಗೆ ಸ್ವಾಗತ : –

ಮಲೆನಾಡಿನ ನರಸಿಂಹರಾಜಪುರದ ಯುವ ವಿದ್ಯಾರ್ಥಿನಿ ಕೇವಲ ಎಂಟುವರೆ ನಿಮಿಷದಲ್ಲಿ ನಿರರ್ಗಳವಾಗಿ, ಮನಮುಟ್ಟುವಂತೆ ನಮ್ಮ ದೇಶ ವಿಶ್ವದ ದೊಡ್ಡಣ್ಣನಾಗಬೇಕಾದರೆ ಏನು ಮಾಡಬೇಕು, ದೇಶದ ಜನರು ಹೇಗೆ ಕಾರ್ಯನಿರ್ವಹಿಸಬೇಕು ಇತ್ಯಾದಿ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದಾಳೆ. ಯುವತಿಯ ಭಾಷಣ ಕೇಳಿ ಇತರರು ಖಂಡಿತ ಸ್ಪೂರ್ತಿ ಹೊಂದುತ್ತಾರೆ.

 

ಈ ಯುವ ವಿದ್ಯಾರ್ಥಿನಿ ಮಾತನಾಡಿದ ಒಂದೊಂದು ಮಾತುಗಳು ಪ್ರತಿಯೊಬ್ಬ  ಪ್ರಜೆಗಳಿಗೂ ಮನ ಮುಟ್ಟುವಂತೆ ಇತ್ತು. ಅವರು ಮಾತನಾಡಿದರ ನುಡಿಗಳಲ್ಲಿ ನಮ್ಮ ಭಾರತ ದೇಶದ ನಾಗರೀಕತೆ ಹಾಗೂ ವೈಙ್ನಾನಿಕತೆ , ಆಧುನಿಕತೆ, ಪಾರಂಪರಿಕತೆಯ ಬಗ್ಗೆ ಕೊಂಡಾಡಿ ಮಾತನಾಡಿದರು. ಭಾರತದಲ್ಲಿರುವ ಬಡತನ , ಕೋಮುಗಲಭೆ, ಇತ್ಯಾದಿ ಸಮಸ್ಯೆಗಳಿದ್ದರೂ ನಮ್ಮ ದೇಶ ಮುಂದುವರೆದ ರಾಷ್ಟ್ರ ಗಳಲ್ಲಿ ನಮ್ಮ ದೇಶ 5 ನೆಯ ಸ್ಥಾನದಲ್ಲಿರುವುದು ನಮಗೆ ಹಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ನಾವೆಲ್ಲರೂ ಕೂಡ ಒಟ್ಟಾಗಿ ಕೂಡಿ ನಮ್ಮ ಐಕ್ಯತೆಯನ್ನು ಇಡೀ ಜಗತ್ತಿನ ತುಂಬೆಲ್ಲಾ ಹರಡಬೇಕು, ಹಾಗೂ ಇದಕ್ಕಾಗಿ ನಾವೆಲ್ಲರೂ ಒಂದಾಗೋಣ ಬನ್ನಿ ಎಂದು ಸಾರಿದರು. ಯಾವುದೇ ಜಾತಿ ಧರ್ಮದ , ಬೇದ ಭಾವಗಳಿಲ್ಲದೇ  ದೇಶಾಭಿವೃದ್ದಿಯ ಬಗ್ಗೆ ಗಮನ ಹರಿಸೋಣ ಬನ್ನಿ ಎಂದರು.

ಹಾಗೆಯೇ ನಮ್ಮ ದೇಶದಲ್ಲಿ ಭಾಷೆಯ ಬಗ್ಗೆ ತಾರತಮ್ಯ ವಿಲ್ಲದೇ ಏಕ ರೂಪ ಶಿಕ್ಷಣ ವನ್ನು ಜಾರಿಗೊಳಿಸಬೇಕೆಂದು ತಮ್ಮ ಅನಿಸಿಕೆಯನ್ನು  ಹೇಳಿದರು. ನಾವು ಇಡೀ  ವಿಶ್ವದಲ್ಲೇ ದೊಡ್ಡಣ್ಣ ನಾಗಬೇಕೆಂದರೆ , ಜನಸಂಖ್ಯೆ ಯಿಂದಲ್ಲ  ಹೊರತಾಗಿ ಅಭಿವೃದ್ದಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಇದು ಸಾಧ್ಯವಾಗಬೇಕೆಂದರೆ ಸಾಕ್ಷರತೆ ಹಾಗೂ  ಸ್ವಾವಲಂಬನೆ ಮಾತ್ರ ಸಾಧ್ಯ ಎಂದು ಹೇಳಿದರು.