ಚಿನ್ಮಯಸಾಗರ ಮಹಾರಾಜರ ಎರಡು ಕಿರುಕೃತಿಗಳ ಕನ್ನಡ ಅನುವಾದ ಬಿಡುಗಡೆ

ದಂತೇರೆಸ್ ಶುಭದಿನದಂದು ಬನೇರುಘಟ್ಟದಲ್ಲಿ ಮುನಿಶ್ರೀ ಚಿನ್ಮಯಸಾಗರ ಮಹಾರಾಜರ ಎರಡು ಕಿರುಕೃತಿಗಳ ಕನ್ನಡ ಅನುವಾದ ಬಿಡುಗಡೆಯಾಯಿತ್ತು. ಶ್ರೀಮತಿ ಕೌಸಲ್ಯಧರಣೆಂದ್ರರವರ ಅನುವಾದಿತ ಯುವ ವಾರ್ತಿಕ ಮತ್ತು ಡಾಕ್ಟರ್ ನೀರಜಾ ನಾಗೇಂದ್ರರವರು ಅನುವಾದಿಸಿದ ಪ್ರೇಮ ವಿವಾಹ ಮತ್ತು ಪರಿತಾಪಗಳು ಇವು ಬಿಡುಗಡೆಯಾದ ಕೃತಿಗಳು. ಮುಖ್ಯ ಅತಿಥಿಗಳಾಗಿ ವಿಮಾನಪುರದ ಮಹಾವೀರ ಜಿನ ಮಂದಿರದ ಅಧ್ಯಕ್ಷರಾದ ಶ್ರೀ ಪದ್ಮನಾಭಯ್ಯನವರು ಆಗಮಿಸಿದರು.

ಅನುವಾದಕರಾದ ಡಾಕ್ಟರ್ ನೀರಜಾ ನಾಗೇಂದ್ರಕುಮಾರ್ ಮತ್ತು ಶ್ರೀಮತಿ ಕೌಸಲ್ಯಧರಣೆಂದ್ರ. ದಾನಿಗಳಾದ ಶ್ರೀ ಡಾಕ್ಟರ್ ಪಿ.ವೈ. ನಾಗೇಂದ್ರಕುಮಾರ್, ಪ್ರೆಸ್ ಶ್ರೀ ಚಂದ್ರಕಾಂತ್, ಜೆ. ಪದ್ಮನಾಭಯ್ಯ ಹಾಗೂ ಸುಮಲತಾ ಮೋದಿಯವರನ್ನು ಸನ್ಮಾನಿಸಲಾಯಿತು.

ಡಾಕ್ಟರ್ ನೀರಜಾರವರು ಮಾತನಾಡಿ ಚಿನ್ಮಯಸಾಗರ ಮಹಾರಾಜರಿಗೆ ಸಾಮಾಜಿಕ ಸ್ವಾಸ್ಥ್ಯ ಮತ್ತು ಉನ್ನತಿಯ ಬಗ್ಗೆ ಎಷ್ಟು ಕಾಳಜಿ ಕಳಕಳಿ ಇದೆ ಎಂಬುದು ಅವರ ಕೃತಿಗಳನ್ನು ಓದಿದಾಗಲೇ ನಮಗೆ ಅರ್ಥವಾಗುವುದು. ಯಾವ ಕಾಲಕ್ಕೂ ಯಾವ ದೇಶಕ್ಕೂ ಯುವಶಕ್ತಿ ಶಕ್ತಿಚಿಲುಮೆ ಏನುವಂತೆ ಕವಿ ವಾಣಿಯಂತೆ ನಮ್ಮ ಯುವಶಕ್ತಿಯನ್ನು ಜಾಗೃತಗೊಳಿಸುವುದು ಅವರನ್ನು ದುಷ್ಟಚಟಗಳಿಂದ ದೂರವಿರುಸುವುದು ತಂದೆತಾಯಿ ಸಮಾಜ ಸರ್ಕಾರ ಮತ್ತು ಸಮೂಹ ಮಾಧ್ಯಮಗಳ ಜವಾಬ್ದಾರಿ ಯುವಕರು ಉತ್ಸಾಹಶಾಲಿಗಳಾದಗಲೇ  ಸಂಸ್ಕೃತಿವಂತರಾದಗಲೇ ಅತ್ಯಾಚಾರ ಅನಾಚಾರಗಳಿಲ್ಲದಂತಹ ಸುಂದರ ಸಮಾಜ ನಿರ್ಮಾಣಗೊಳ್ಳುವುದು ಎಂದರು.

ಮುನಿಶ್ರೀಗಳು ಮಾತನಾಡಿ ಕೇವಲ ದೈಹಿಕ ಅಕರ್ಷಣೆಯನ್ನು ಪ್ರೇಮವೆಂದು ತಿಳಿದು ಹಾದಿ ತಪ್ಪಬೇಡಿ, ನಿಮ್ಮ ತಾಯಿ ತಂದೆ ಅನುರೂಪವಾದ ಬಾಳಸಂಗಾತಿಯನ್ನು ಹುಡುಕುವಾಗ ಅವರೊಡನೆ ಸಹಕರಿಸಿ, ಉತ್ತಮ ಬಾಳ್ವೆಯನ್ನುಮಾಡಿ ಎಂದು ಆದೇಶವಿತ್ತರು. ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇದನಗಳು ಅತ್ಯಚಾರಗಳು ಎಲ್ಲರನ್ನು ದಿಗ್ಬ್ರಂತರನ್ನಾಗಿ ಮಾಡಿದೆ. ಇದಕ್ಕೆ ಪರಿಹಾರ ಏನು ಎಂಬುದನ್ನು ಎಲ್ಲರೂ ಚಿಂತನೆ ಮಾಡಿ. ಸಮಾಜ ಸುದಾರಣೆಮಾಡುವಲ್ಲಿ ಕೈ ಜೋಡಿಸಿ ಎಂದರು.

ಕಾರ್ಯಕ್ರಮವನ್ನು ಶ್ರೀಮತಿ ಬ್ರಾಹ್ಮೀಲಾ ಮದನ್ ನಿರೂಪಿಸಿದರು.