ಶ್ರೀಕ್ಷೇತ್ರ ಕನಕಗಿರಿಯಲ್ಲಿ 2017ನೇ ಜನವರಿ 26ರಿಂದ ಫೆಬ್ರವರಿ 5ರವರೆಗೆ ಅತಿಶಯ ಮಹೋತ್ಸವವು ನಡೆಯಲ್ಲಿದು ಪರಮಪೂಜ್ಯ ಅಂರ್ತಮನಾ ಮುನಿಶ್ರೀ ಪ್ರಸನ್ನ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಹಾಗೂ ಪರಮಪೂಜ್ಯ ಸ್ವಸ್ತಿಶ್ರೀ ಭುವನ ಕೀರ್ತಿ ಭಟಾರಕ ಭವ್ಯ ನೇತೃತ್ವದಲ್ಲಿ ಜಿನಸಹಸ್ರನಾಮ ಮಹಾವಿಧಾನ ಗಜರಥೋತ್ಸವ ಹಾಗೂ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಪ್ರತಿಷ್ಠಮಹೋತ್ಸವ ನಡೆಯಲಿದೆ.
ಇದರ ಅಂಗವಾಗಿ ಇಲ್ಲಿ ಪ್ರತಿಷ್ಟಾಪನೆಗೊಳಲು ಸಿದ್ದಾವಾಗುತ್ತಿರುವ 18ಅಡಿ ಎತ್ತರದ ಆಶೋಕ್ ಗುಡಿಗಾರ್ ರವರಿಂದ ಕೆತ್ತಲ್ಪಟ್ಟ ಹಾಗೂ ಶ್ರೀ ವಿಜಯೇಂದ್ರಯ್ಯ ಮತ್ತು ಶ್ರೀಮತಿ ಮದನಾವಳಿ ಪರಿವಾರ ವಿಷಾಗ್ ಮೆಡಿಕಲ್ಸ್ ಇವರ ಕೊಡುಗೆಯಲ್ಲಿ ನಿರ್ಮಾಣಗೊಂಡಿರುವ ಬಾಹುಬಲಿ ಮೂರ್ತಿಯ ವಿಹಾರ, ಬೆಂಗಳೂರಿನ ಬಿಡದಿಯಿಂದ ಸಕಲ ಪೂಜಾಕಾರ್ಯದೊಂದಿಗೆ ಶುರುವಾಯಿತ್ತು. ಎಲ್ಲೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜೈನ ಭಾಂದವರು ಪೂಜಾಕಾರ್ಯದಲ್ಲಿ ಭಕ್ತಿಯಿಂದ ಪಾಲ್ಗೊಂಡರು.
ಪರಮಪೂಜ್ಯಸ್ವಸ್ತಿಶ್ರೀ ಭುವನ ಕೀರ್ತಿ ಸ್ವಾಮಿಗಳ ನೇತೃತ್ವದಲ್ಲಿ ಶುಭಾರಂಭಗೊಂಡ ವಿಹಾರ ಅಲ್ಲಿಂದ ಹೊರಟು ಮಂಡ್ಯ ಮಾರ್ಗವಾಗಿ ಸಾಗಿತು.
ಮಂಡ್ಯದಲ್ಲಿ ನೆರೆದಿದ್ದ ಅನಂತನಾಥ ದಿಗಂಬರ ಸಮಾಜ, ಮಹಿಳಾ ಸಮಾಜದವರು ಹಾಗೂ ಜೈನ ಭಾಂದವರು ಬಾಹುಬಲಿ ಮೂರ್ತಿ ಸ್ವಾಗತಕ್ಕೆ ಸಕಲಸಿಧ್ಧತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಮುಂದೆ ಸಾಗಿ ಮೈಸೂರಿಗೆ ಬಂದಾಗ ನೆರೆದಿದ್ದ ಶ್ರೀ ದಿಗಂಬರ ಸಮಾಜದ ಪದಾಧಿಕಾರಿಗಳು ಸದಸ್ಯರು ಹಾಗೂ ಪದ್ಮಶ್ರೀ ಜೈನ ಮಹಿಳಾ ಸಮಾಜದ ಪದಾಧಿಕಾರಿಗಳು ಸದಸ್ಯರು ಭಕ್ತಿಪೂರ್ವಕವಾಗಿ ಪೂಜಾಕಾರ್ಯವನ್ನು ನೆರೆವೇರಿಸಿ ಬೀಳ್ಕೊಟ್ಟರು. 23ರ ಬೆಳಿಗ್ಗೆ ಕನಕ ಗಿರಿಯನ್ನು ತಲುಪಿದ ಮೂರ್ತಿಯನ್ನು ಶ್ರೀಗಳವರು ಕನಕಗಿರಿಯ ಭಕ್ತಾದಿಗಳು ಸೇರಿ ಸ್ವಾಗತ್ತಿಸಿದರು.
(ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ಸ್ವಾಮಿ ಪುಣ್ಯಕ್ಷೇತ್ರ ಅಚಾರ್ಯ ಶ್ರೀ ಪೂಜ್ಯಪಾದ ಮುನಿಗಳ ತಪೋಭೂಮಿ ಶ್ರೀ ಕ್ಷೇತ್ರ ಕನಕಗಿರಿಯಲ್ಲಿ ಜನವರಿ 26 ರಿಂದ ಫೆಬ್ರವರಿ 05. 2017ರ ವರೆಗೆ ಅಂರ್ತಮನಾ ಮುನಿಶ್ರೀ ಸಾಗರ ಮಹಾರಾಜರ ಮಂಗಲ ಆಶೀರ್ವಾದ ಮತ್ತು ದಿವ್ಯ ಉಪ ಸ್ಥಿತಿಯಲ್ಲಿ ಕನಕಗಿರಿ ಅತಿಶಯ ಮಹೋತ್ಸವ ಅತ್ಯಂತ ವೈಭವಯುತವಾಗಿ ನೆರೆವೇರಲಿದೆ. ಬನ್ನಿ ಭಾಗವಹಿಸಿ














