ದಿಗಂಬರ ಜೈನ ಸಮಾಜ ಮೈಸೂರು ನಿರ್ದೇಶಕರುಗಳ ಚುನಾವಣೆ

ಶ್ರೀ ದಿಗಂಬರ ಜೈನ ಸಮಾಜ ಮೈಸೂರು ಇಲ್ಲಿನ ನಿರ್ದೇಶಕರುಗಳ ಚುನಾವಣೆ ದಿನಾಂಕ :- 23-10-2016ರ ಭಾನುವಾರದಂದು ಎಂ ಎಲ್ ಜೈನ್ ಬೋರ್ಡಿಂಗಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ನಡೆಯಿತು. ಚುನಾವಣಾ ಅಧಿಕಾರಿಗಳಾದ ಶ್ರೀ ವೆಂಕಟೇಶ್ ರವರ ಸಮ್ಮುಖದಲ್ಲಿ ಮತದಾನ ಹಾಗೂ ಎಣಿಕೆ ಪ್ರಕ್ರಿಯೆ ಶಾಂತ ರೀತಿಯಿಂದ ನಡೆಯಿತು. ನಂತರ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಆಯ್ಕೆಯಾದ 21 ಅಭ್ಯರ್ಥಿಗಳ ಹೆಸರನ್ನು ಚುನಾವಣಾ ಅಧಿಕಾರಿಗಳು ಪ್ರಕಟಿಸಿದರು. (ಅಜಿತ್ ಕುಮಾರ್ .ಪಿ, ಡಾ|| ಎಮ್.ವಿ ಶಾಂತ್ ಕುಮಾರ್, ದೇವೇಂದ್ರ ಕುಮಾರ್ .ಎನ್, ಎಸ್.ಎನ್ ಪ್ರಕಾಶ್ ಬಾಬು, ಮಹೇಶ್ ಪ್ರಸಾದ್ ಎಸ್.ಡಿ, ಎಮ್.ಆರ್. ಸುನೀಲ್ ಕುಮಾರ್, ಬಿ.ಎಸ್ ಪ್ರಭಾಕರ್ ಜೈನ್, ಡಾ|| ಪಿ.ಡಿ ಪದ್ಮಕುಮಾರ್ ಜೈನ್, ಎಸ್.ಪಿ ಪಾಯಿಜಿರವರು, ಬಿ.ಎಸ್ ಪ್ರಕಾಶ್, ಬಿ. ಭರತ್ ರಾಜ್, ಅನಂತರಾಜು ಜಿ.ಪಿ, ಬಿ. ಪದ್ಮರಾಜಯ್ಯ, ಎನ್. ಪ್ರಸನ್ನ ಕುಮಾರ್, ಅಶೋಕ್ ಪಾಟೆಲ್, ಎಮ್.ಪಿ ದೀಲಿಪ್, ಕೆ. ಚಂದ್ರಶೇಖರ್ ಹಾರಿಗ, ವಸಂತ್ ಕುಮಾರಯ್ಯ, ಧರಣೆಂದ್ರ ಜೈನ್, ನಿರ್ಮಲಾ ವರದರಾಜ್, ಜಿ.ಪಿ ಪದ್ಮಜನ್ಯಕುಮಾರ್,) ಅಧ್ಯಕ್ಷರಾದ ಎಸ್.ಎನ್ ಪ್ರಕಾಶ್ ಬಾಬು ರವರು ಮಾತನಾಡಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದರು.