ಬೆಂಗಳೂರಿನ ಸುಮೇರು ಫೌಂಡೇಶನ್ ಮತ್ತು ಚಿನ್ಮಯ ಸಾಗರ ಚಾರಿಟಬಲ್ ಟ್ರಸ್ಟ್ ಇವರ ವತಿಯಿಂದ ಸುಮೇರು ಫೌಂಡೇಶನ್ ನವರು ನಡೆಸಿಕೊಂಡು ಬರುತ್ತಿರುವ ಅಂಚೆ ಶಿಕ್ಷಣ ಕೋರ್ಸ್ಗಳ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು 16/10/2016ರ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಡಾಕ್ಟರ್ ನೀರಜಾ ನಾಗೇಂದ್ರ ಅವರು, ಸ್ವಾಗತಿಸುತ್ತಾ ಈ ಕಾರ್ಯಕ್ರಮದ ವೇದಿಕೆಯಲ್ಲಿ ಗುಡಿಬಂಡೆ ಪೂರ್ಣಿಮಾ ಪ್ರಸನ್ನಯ್ಯ ನವರು ನಿವೃತ್ತ ನ್ಯಾಯಾಧೀಶರಾದ ಸುಭಾಷ್ ಈರಣ್ಣನವರು ಸುಮಲತಾ ರವರು ಸರಸ್ವತಿ ವಿಜಯ್ ಕುಮಾರ್ ಹಾಗು ಹರಿಶ್ಚಂದ್ರ ಶಾಸ್ತ್ರಿಗಳು ಉಪಸ್ಥಿತರಿದ್ದರು. ನಂತರ ಗಣ್ಯರಿಂದ ದೀಪ ಪ್ರಜ್ವಲನೆ ನಡೆಯಿತು. ಮುಂದೆ ನಡೆದ ಕಾರ್ಯಕ್ರಮದಲ್ಲಿ ಮುನಿಶ್ರೀ ಗಳಿಗೆ ಪಾದಪೂಜೆ ಆರತಿ ಹಾಗೂ ವೇದಿಕೆ ಗಣ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪ್ರೊಫೆಸರ್ ಶ್ರೀಮತಿ ಉಷಾರಾಣಿರವರು ಪ್ರಾಯೋಜಿಸಿದ ಸುಮೇರು ಜೈನ್ ಫೌಂಡೇಶನ್ ವೆಬ್ ಸೈಟನ್ನು ಉದ್ಘಾಟನೆ ಕೂಡ ಮಾಡಲಾಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಸುಭಾಷ್ ಈರಣ್ಣನವರು ಮಾತನಾಡಿ ಗಾಂಧಿ ತತ್ವಕ್ಕೂ ಜೈನ ತತ್ವಕ್ಕೂ ಇರುವ ಹೊಂದಾಣಿಕೆಯನ್ನು ತಿಳಿಸಿದರು. ಚಿನ್ಮಯ ಸಾಗರ ಮುನಿಗಳು ಸುಮೆರು ಜೈನ್ ಫೌಂಡೇಶನ್ ರವರ ಕಾರ್ಯವೈಕರಿ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಪ್ರಮುಖ ಭಾಗವಾದ ಅನುಪ್ರೇಕ್ಷೆ ತೀರ್ಥಂಕರರ ಚರಿತ್ರೆ ಬರೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮುನಿಗಳ ಸಾನಿಧ್ಯದಲ್ಲಿ ಕಾರ್ಯಕ್ರಮ ಬಹಳ ಸೊಗಸಾಗಿ ಮೂಡಿಬಂತು.














