ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ಚಾತುರ್ಮಾಸ ಅಷ್ಟಾನಿಕ ಪರ್ವದ ನಿಮಿತ್ತ ಪ್ರಪ್ರಥಮ ಬಾರಿಗೆ ಭಾಗವಾನ್ ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಜಗನ್ ಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾಸನ್ನಿದಿ ಹಾಗೂ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಇಂದ್ರದ್ವಜ ಮಹಾಮಂಡಲ ವಿಧಾನ ಇದೇ ನವೆಂಬರ್ 13 ರಿಂದ 20ರ ವರೆಗೆ ಅಮೋಘವಾಗಿ ಜರುಗಿತು. ಇನ್ನು ಇಲ್ಲಿನ ಇಂದ್ರ ದ್ವಜ ಮಹಾಮಂಡಲದ ಬಗ್ಗೆ ಹೇಳುವುದಾದರೆ ರಜತ ಮಂಟಪದಲ್ಲಿ ವಿಶೇಷವಾಗಿ 4 ದಿಕ್ಕಿಗೆ ಚತುರ್ಮುಖ ಬಿಂಬಗಳನ್ನು ಸ್ಥಾಪಿಸಿ ಸರ್ವತೋಭದ್ರ ಮಂಗಲಮಯವನ್ನಾಗಿಸಿ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಅತಿ ದೊಡ್ಡದಾದ ಬೃಹತ್ ಮಂಡಲ ರಚನೆ ಮಾಡಲಾಗಿ 30 ಅಡಿ ಅಗಲ ಮತ್ತು 30 ಅಡಿ ಉದ್ದದಲ್ಲಿ 48 ಗಂಟೆಗಳ ಕಾಲ ಬಹಳ ನಿಕರವಾಗಿ ರಚಿಸಲಾಗಿದೆ. ತಮಿಳುನಾಡಿನ ಅರಹಂತ ಗಿರಿ ಮಠದ ಸ್ವಸ್ತಿಶ್ರೀ ದವಳ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಮಾರ್ಗದರ್ಶನದಲ್ಲಿ ಅತಿ ಸುಂದರವಾಗಿ ರಚನೆ ಮಾಡಲಾಗಿದ್ದು ಅವರೊಟ್ಟಿಗೆ ಸೊಂಧಮಠದ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕರು ಹಾಗೂ ಹೊಂಬುಜ ಶ್ರೀಗಳವರು ಒಟ್ಟಿಗೆ ಸಾನಿಧ್ಯದಲ್ಲಿ ಪಂಡಿತರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ರಚಿಸಿ ತಮಿಳುನಾಡಿನಿಂದ ತರಿಸಲಾದ ಸುಮಾರು 800 ವರ್ಷಗಳ ಪೂರಾತನ ಪಂಚಮೇರುಗಳನ್ನು ಸ್ಥಾಪಿಸಿ ನಾಲ್ಕು ದಿಕ್ಕಿನಲ್ಲಿ ನಾಲ್ಕು ನಂದೀಶ್ವರನನ್ನು ಸ್ಥಾಪಿಸಿ ಹಾಗೂ ವಿಶೇಷವಾಗಿ ಮತ್ತು ಪ್ರಮುಖವಾಗಿ 458 ರತ್ನ ಬಿಂಬಗಳನ್ನು ಜೋಡಿಸಿ ಭಾರತ ದೇಶದಲ್ಲೇ ಮೊದಲ ಬಾರಿಗೆ ಹೊಂಬುಜ ಶ್ರೀಕ್ಷೇತ್ರದಲ್ಲಿ ಇಂತಹ ವೈಭವದ ದರ್ಶನ ಭಾಗ್ಯ ಲಭಿಸಿದೆ. ಕಂಬದ ಹಳ್ಳಿ ಪರಮ ಪೂಜ್ಯ ಸ್ವಸ್ತಿಶ್ರೀ ಭಾನು ಕೀರ್ತಿ ಭಟ್ಟಾರಕರು ಹಾಗೂ ಪೂಜ್ಯಾ ಆರಿಕ ರತ್ನ ಶಿವಮತಿ ಮಾತಾಜೀಯವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವೀಕ್ಷಕ ಬಂಧುಗಳೇ ಶ್ರೀ ಕ್ಷೇತ್ರ ಹೊಂಬುಜದಲ್ಲಿ ನಡೆದ ಇಂದ್ರ ದ್ವಜ ಆರಾಧನ ಮುಂದುವರೆದ ಭಾಗವನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ. ಆಚಾರ್ಯ ಶ್ರೀ ಶಾಂತಿಸಾಗರ ಮುನಿ ಮಹಾರಾಜರ ಆಚಾರ್ಯ ಪದಾರೋಹಣ ಶತಮಾನೋತ್ಸವ ಸ್ಮರಣಾರ್ಥ ಭಾರತ ಸರ್ಕಾರದ ಭಾರತೀಯ ಅಂಚೆ ಇಲಾಖೆಯ ಅಂಚೆ ಚೀಟಿ ಬಿಡುಗಡೆ ಐತಿಹಾಸಿಕ ಸಮಾರಂಭ ಹೊಂಬುಜ ಜೈನ ಮಠದಲ್ಲಿ ಕೇಂದ್ರ ಸಂಪರ್ಕ ಮತ್ತು ಸಂವಹನ ಸಚಿವಾಲಯ ಮತ್ತು ಶ್ರೀಮಠದ ಸಹ ಭಾಗಿತ್ವದಲ್ಲಿ ನಡೆಯಿತು. ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ, ಪದ್ಮ ವಿಭೂಷಣ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಅಂಚೆ ಚೀಟಿ ಬಿಡುಗಡೆಗೊಳಿಸಲಾಯಿತು. ಅರಹಂತ ಗಿರಿಯ ಶ್ರೀ ಧವಳ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಕಂಬದ ಹಳ್ಳಿ ಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಸೋಂದಾ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು, ಎನ್ ಆರ್ ಪುರದ ಶ್ರೀ ಲಕ್ಷ್ಮಿ ಸೇನಾ ಭಟ್ಟಾರಕ ಮಹಾಸ್ವಾಮೀಜಿಯವರು, ಕನಕಗಿರಿಯ ಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು, ಹಾಲ್ ಇಂಡಿಯ ಜೈನ್ ಯೂತ್ ಫೆಡರೆಷನ್ ಅಧ್ಯಕ್ಷರಾದ ಮಹೇಂದ್ರ ಸಿಂಗಿ, ದಿಗಂಬರ ಜೈನ ಸಮಾಜದ ರಾಜೇಂದ್ರ ಬಿಳಗಿ, ಭರತೇಶ್ ಎಜುಕೇಷನ್ ಟ್ರಸ್ಟ್ ನ ವಿನೋದ್ ದೊಡ್ಡಣ ನವರ್, ಶಾಂತ ಸಾಗರ ಮುನಿ ಫೌಂಡೇಶನ್ ಅನಿಲ್ ಸೇಟಿ, ರಾಕೇಶ್ ಸೇಟಿ, ವಿಕಾಸ್ ಜೈನ್ ಇವರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇಂದ್ರ ದ್ವಜ ಆರಾಧನ ವಿಧಾನವು ಜೈನ ಧರ್ಮದ ಆರಾಧನೆಯಲ್ಲಿ ಶ್ರೇಷ್ಠವಾದ ಆರಾಧನೆ. ಶ್ರಾವಕ ಶ್ರಾವಕಿಯರು ಶ್ರಧ್ದ ಭಕ್ತಿಯಿಂದ ವ್ರತ ನಿಯಮದೊಂದಿಗೆ ತ್ರಿಕರಣ ಶುದ್ದಿಯಿಂದ ಕೈಗೊಂಡು ಪೂಜಾರಾಧನೆಗಳ ನಂತರ ಇಂದ್ರ ದ್ವಜ ಮಹಾ ಮಂಡಲ ಪ್ರದಕ್ಷಿಣೆ ಗೈದು ಭಕ್ತಿ ಸಮರ್ಪಿಸಿದ್ದಲಿ ಕಾರ್ಯ ಸಿದ್ದಿ ಆರೋಗ್ಯ ವೃದ್ದಿಯೊಂದಿಗೆ ವಿಜಯ ಪ್ರಾಪ್ತಿಯಾಗುವುದು ಎಂದು ಆಗಮಗಳಲ್ಲಿ ತಿಳಿಸಲಾಗಿದೆ. ಇಂತಹ ಬೃಹತ್ ಆರಾಧನೆಯ ಸಂಕಲ್ಪವನ್ನು ಶ್ರೀಗಳವರು ಬಹಳ ದಿನಗಳಿಂದ ಕೈಗೊಂಡು ಪ್ರಪ್ರಥಮಬಾರಿಗೆ ಹೊಂಬುಜ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ವಿಧಿ ಪೂರ್ವಕವಾಗಿ ಅಯೋಜಿಸಿದ್ದಾರೆ. ಇಂತಹ ಪಾವನ ಕ್ಷಣಗಳು ನಿಮಗಾಗಿ ತಂದಿದ್ದೇವೆ ವೀಕ್ಷಿಸಿ ಆನಂದಿಸಿ.
ಆರಾಧನ ಮಹೋತ್ಸವದ ಅಂಗವಾಗಿ ವಿಧಾನ ಸಮಾಪ್ತಿಯ ದಿನದಂದು ಬೆಳ್ಳಿ ರಥೋತ್ಸವ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಹೊಂಬುಜ ಕ್ಷೇತ್ರ ಜಗಮಗಿಸುವ ವಿದ್ವತ್ ದೀಪಾಲಂಕಾರ ಹಾಗೂ ದೀಪದ ಅಂದದ ಸಾಲುಗಳು ರಂಗೋಲಿಗಳು ಬೆಳಗುವುದರ ಮೂಲಕ ಪ್ರಕಾಶಿಸಿಸಿದ ಮನಮೋಹಕ ದೃಶ್ಯಾವಳಿಗಳು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














