ಧರ್ಮ ಬಂಧುಗಳೇ, ನಿಮ್ಮೆಲ್ಲರಿಗು ತಿಳಿದಿರುವಂತೆ ಕರ್ನಾಟಕ ಜೈನ್ ಅಸೋಸಿಯೇಷನ್ ಬೆಂಗಳೂರು ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ನಡೆಯುತ್ತಿದ್ದು ಪ್ರಥಮ ಬಾರಿಗೆ ಕರ್ನಾಟಕ ಜೈನ್ ಅಸೋಸಿಯೇಷನ್ ಪದಾಧಿಕಾರಿಗಳು ಚುನಾವಣೆಗೆ ಸಹ ಕಾರ್ಯದರ್ಶಿ ಸ್ಥಾನಕ್ಕೆ ದಾವಣಗೆರೆ ದಿಗಂಬರ ಜೈನ ಸಮಾಜದ ಅಧ್ಯಕ್ಷರಾದ ಹಾಗೂ ದಾವಣಗೆರೆ ಹಾಲಿ ಕೆ ಜೆ ಎ ಇ ಸಿ ಮೆಂಬರ್ ಕೂಡ ಆದ ಧಾರ್ಮಿಕ ಹಾಗೂ ಸಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀಯುತ ಸುನೀಲ್ ಕುಮಾರ್ ಡಿ ಇವರು ಸ್ಪರ್ಧಿಸಿದ್ದು ಅವರ ಕಿರು ಪರಿಚಯವನ್ನು ಇಲ್ಲಿ ಮಾಡಲಾಗುತ್ತಿದೆ.
ವೃತ್ತಿಯಲ್ಲಿ ಬಿಲ್ಡರ್, ಲ್ಯಾಂಡ್ ಡೆವಲಪರ್, ಸಿಲ್ವರ್ ಸ್ಕೈ ಹೋಮ್ ಸಂಸ್ಥೆಯಲ್ಲಿ ಮಾಲೀಕತ್ವ ಪ್ರಸ್ತುತ ದಾವಣಗೆರೆ ಮೈಸೂರು ಮತ್ತು ಬೆಂಗಳೂರು ನಗರಗಳಲ್ಲಿ ವ್ಯವಹಾರ ನಿರ್ವಹಣೆ. ದಾವಣಗೆರೆಯಲ್ಲಿ ಸಮಾಜದ ಪರವಾಗಿ ಆದಿನಾಥ ಜಿನ ಮಂದಿರ ನಿರ್ಮಾಣದಲ್ಲಿ ಪ್ರಮುಖ ಪಾತ್ರ 2006 ಮತ್ತು 2013 ರಲ್ಲಿ ಪಂಚಕಲ್ಯಾಣ ಕಾರ್ಯಕ್ರಮ ಆಯೋಜನೆಯಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ. ದಾವಣಗೆರೆ ಜಿಲ್ಲಾ ಜೈನ್ ಡೈರೆಕ್ಟರಿ ಹೊರತರುವಲ್ಲಿ ಮತ್ತು ಇತ್ತೀಚಿನ ಅನಂತ ನೋಂಪಿ ಪೂಜಾ ಸಂಗ್ರಹ ಬೃಹತ್ ಶಾಸ್ತ್ರ ಗ್ರಂಥ ಪ್ರಕಾಶನ ಮಾಡುವಲ್ಲಿ ಪ್ರಧಾನ ಪಾತ್ರ. ಸತತ 25 ವರ್ಷಗಳ ಕಾಲ ಜೈನ ಸಮಾಜದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಈಗಾ ಹಾಲಿ ದಾವಣಗೆರೆ ಜೈನ ಸಮಾಜದ ಶ್ರೀ ಮಾಹವೀರ ಸಂಘದ ಅಧ್ಯಕ್ಷರಾಗಿ ಸೇವಾ ಕಾರ್ಯ. 2015 ರಿಂದ 2018ರ ವರೆಗೆ ಭಾರತೀಯ ಜೈನ್ ಮಿಲನ್ ಸಂಸ್ಥೆಯಲ್ಲಿ ರಾಜ್ಯಮಟ್ಟದ ಉಪಾಧ್ಯಕ್ಷರಾಗಿ ಸೇವೆ 2018ರಲ್ಲಿ ಭಾರತೀಯ ಜೈನ್ ಮಿಲನ್ ನ ರಾಜ್ಯಮಟ್ಟದ ಸಮಾವೇಶದಲ್ಲಿ ಮುಂಚೂಣಿ ನಾಯಕತ್ವ.
2019 ರಿಂದ 2024 ರ ವರೆಗೆ ಕೆ ಜೆ ಎ ಸಂಸ್ಥೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ. ರಾಷ್ಟ್ರಮಟ್ಟದ ಕ್ರೀಡಾಯಿಸ್ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಶ್ರವಣ ಬೆಳಗೊಳ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕ, ಕನಕ ಗಿರಿ, ಹೊಂಬುಜ ಮತ್ತು ಸೋಂಧದಲ್ಲಿ ನಡೆದ ಪಂಚಕಲ್ಯಾಣ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸೇವೆ. ಕೋವಿಡ್ ಸಂದರ್ಭದಲ್ಲಿ ಫೋಡ್ ಪಾಕೆಟ್ ಗಳ ವಿತರಣೆ ಕಾರ್ಯಕ್ರಮ ಬೆಂಗಳೂರು ಕೆ ಜೆ ಎ ನೂತನ ಮಹಿಳಾ ಹಾಸ್ಟೆಲ್ ಖರೀದಿಸಿ 50 ವಿದ್ಯಾರ್ಥಿನಿಯರಿಗೆ ಸೌಲಭ್ಯ ಹೊದಗಿಸುವಲ್ಲಿ ಪ್ರಮುಖ ಪಾತ್ರ. ಅಷ್ಟೇ ಅಲ್ಲದೆ ಸ್ವತಃ ಅವರಿಂದಲೆ ಅವರ ಕಾರ್ಯಗಳನ್ನು ಕೇಳೋಣ.
ಸುನೀಲ್ ಕುಮಾರ್ ಡಿ :- ಎಲ್ಲರಿಗೂ ಜೈ ಜಿನೇಂದ್ರ, ದಾವಣಗೆರೆ ಜೈನ ಸಮಾಜದಲ್ಲಿ 1990 ರಲ್ಲಿ ನಮ್ಮ ಹಳೆಯ ಬಸದಿಯಲ್ಲಿ ಜೈನ್ ಯುವಕರ ಸಂಘ ಎಂದು ಮಾಡಿದೆವು. ಅಲ್ಲಿ ನಾನು ಜಾಂಟ್ ಸೆಕ್ರೆಟರಿ ಆಗಿದೆ. 1994 ರಲ್ಲಿ ಅವಿಭಾಜಿತ ಚಿತ್ರದುರ್ಗ ಜಿಲ್ಲೆ ದಾವಣಗೆರೆಗೆ ಸೇರಿತ್ತು. ಆಗ ಚಿತ್ರದುರ್ಗ ಜಿಲ್ಲಾ ಜೈನ್ ಡೈರೆಕ್ಟರಿ ಅನ್ನು ಯುವಕರೆಲ್ಲಾ ಸೇರಿ ಬಿಡುಗಡೆ ಮಾಡಿದೆವು. ಹಿಂದಿನ ಗುರುಗಳಾದ ಹೊಂಬುಜ ದೇವೇಂದ್ರ ಸ್ವಾಮೀಜಿಯವರಿಂದ ಬಿಡುಗಡೆ ಮಾಡಿಸಿದೆವು. ನಂತರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತ ಬಂದವು. 2005 ಜೈನ್ ಮಿಲನ್ ಜೂ಼ನ್ ನಲ್ಲಿ ಸ್ವಾಗತ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದೆ, ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟೆವು. 2006 ರಲ್ಲಿ 50 ವರ್ಷದ ನಿಮಿತ್ತ ಪಂಚಕಲ್ಯಾಣ ನೆರವೇರಿತ್ತು ಅದಕ್ಕು ನಾನು ಸ್ವಾಗತ ಸಮಿತಿ ಅಧ್ಯಕ್ಷನಾಗಿ ಕೆಲಸಗಳನ್ನು ಮಾಡಿದೆ.
ಜೈನ ಸಮಾಜಕ್ಕೆ ಒಂದು ಜಿನ ಮಂದಿರ ಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೆವು. ನಮ್ಮ ಹಳೆಯ ಜೈನ್ ಹಾಸ್ಟೆಲ್ ನಲ್ಲಿ ಜಿನ ಮಂದಿರ ಕಟ್ಟ ಬೇಕು ಎಂದು ನಮ್ಮ ಜನರಲ್ಲಿ ಉದ್ದೇಶವಿತ್ತು. ಆದರೆ ಸಹಕಾರವಿಲ್ಲದೆ ಸುಮ್ಮನೆ ಇದ್ದೇವು. 2010 ರಲ್ಲಿ ಪ್ರಮುಖ ಸಾಗರ ಮಹಾರಾಜರು ದಾವಣಗೆರೆಗೆ ವಿಹಾರ ಬಂದಾಗ ಇಲ್ಲಿ ಒಂದು ದೇವಸ್ಥಾನ ಬೇಕು ಅದಕ್ಕೆ ಹಾಸ್ಟೆಲ್ ನ ಮೇಲ್ಬಾಗದಲ್ಲಿ ನಿರ್ಮಾಣ ಮಾಡಿ ಎಂದು ಈಗಾ ಒಂದು ಲಘು ಪಂಚಕಲ್ಯಾಣ ಮಾಡುತ್ತೇನೆ ಎಂದು ಒಂದು ರತ್ನತ್ರೇಯ ಮೂರ್ತಿ ಕೊಟ್ಟು ಲಘು ಪಂಚಕಲ್ಯಾಣ ಮಾಡಿದರು. ನಂತರ 2011 ರಲ್ಲಿ ದೇವಸ್ಥಾನ ನಿರ್ಮಾಣ ಕೆಲಸವನ್ನು ಆರಂಭಿಸಿದೆವು. ದಾನಿಗಳ ಸಹಾಯದಿಂದ ದೊಡ್ಡದಾಗಿ ಆದಿನಾಥ ಜಿನ ಮಂದಿರವನ್ನು ಮಾಡಿದೆವು. ನಂತರ ಗರ್ಭ ಗುಡಿಯ ವಿಷಯವಾಗಿ ಕನಕಗಿರಿಯ ಮಹಾಸ್ವಾಮೀಜಿಯವರ ಮಾರ್ಗದರ್ಶನದಂತೆ ವಿನ್ಯಾಸಮಾಡಿ ಮೂರ್ತಿ ಕೆತ್ತನೆಯನ್ನು ರಾಜಸ್ಥಾನದ ಶಿಲ್ಪಿಯವನ್ನು ನಮ್ಮ ತಂಡದವರ ಜೊತೆ ಬೇಟಿಮಾಡಿ ಮೂರ್ತಿಯನ್ನು ಕೆತ್ತನೆ ಮಾಡಿಸಿ ಪ್ರತಿಷ್ಟಾಪಿಸಲಾಯಿತು.
ಸತತ 26 ವರ್ಷಗಳಿಂದ ಮಹಾವೀರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೀನಿ. ಅದಕ್ಕಿಂತ ಹಿಂದೆ 2019ರಲ್ಲಿ ಕರ್ನಾಟಕ ಜೈನ್ ಅಸೋಸಿಯೇಷನ್ ನ ದಾವಣಗೆರೆ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರ್ಜಿಸಲ್ಲಿಸಿದ್ದೆ ನಾನು ಅವಿರೋಧವಾಗಿ ಆಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. 2020-21ರ ಕರೋನ ಸಂದರ್ಭದಲ್ಲಿ ನಿರ್ಗತಿಕರಿಗೆ ನಮ್ಮ ಜೈನ ಸಮಾಜದಿಂದ ಸಹಾಯ ಮಾಡಬೇಕು ಎಂದು ಸುಮಾರು 35 ರಿಂದ 40 ದಿನಗಳ ಕಾಲ ದಿನಕ್ಕೆ ಸುಮಾರು 5,000 ಫೂಡ್ ಪಾಕೆಟ್ ಗಳನ್ನು ಹಂಚಿದೆವು. ನಮ್ಮ ಕರ್ನಾಟಕ ಜೈನ್ ಅಸೋಸಿಯೇಷನ್ ನಿಂದ ಒಂದು ದಿನದ ಫೂಡ್ ಪಾಕೆಟ್ ಗಳನ್ನು ಹಂಚಲು ಸಹಾಕಾರ ನೀಡಿದರು. ನನ್ನ ಹೊತ್ತಾಯ ಮಾಡಿದೆ ಕರ್ನಾಟಕದ ಎಲ್ಲ ಜಿಲ್ಲೆಯಲ್ಲಿಯೂ ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾಮಟ್ಟದಲ್ಲಿ ಆಹಾರ ಪೊಟ್ಟಣವನ್ನು ಹಂಚುವ ವಿಷಯವಾಗಿ ಶ್ರಮಿಸಿದೆ.
ನಂತರ ಇದೇ ಸಂದರ್ಭದಲ್ಲಿ ಪುರೋಹಿತರಿಗೂ ದಿನಸಿ, ಫೂಡ್ ಪಾಕೆಟ್ ಗಳನ್ನು ಹಂಚಿದೆವು. ಮತ್ತು ಸರ್ಕಾರದಿಂದ ತಿಂಗಳ ಮಾಸಶನ ಕೊಡಿಸ ಬೇಕು ಎಂದು ಹೇಳಿ 8 ಜನರಿಗೆ ಅಲ್ಪಸಂಖ್ಯಾತ ಅಭಿವೃಧಿ ನಿಗಮದಿಂದ ಬರುವಂತೆ ಮಾಡಿದೆ. ನಮ್ಮ ಕರ್ನಾಟಕ ಜೈನ್ ಅಸೋಸಿಯೇಷನ್ ನಲ್ಲಿ ಮಹಿಳೆಯರಿಗೆ ಹಾಸ್ಟೆಲ್ ನ ಅವಶ್ಯಕತೆ ಇತ್ತು. 2023ರಲ್ಲಿ ಹೊಸಕೆರೆ ಹಳ್ಳಿಯ ಒಂದು ಪ್ರದೇಶದಲ್ಲಿ ಇದ್ದಂತಹ ಕಟ್ಟಡವನ್ನು ನಮ್ಮ ಕರ್ನಾಟಕ ಜೈನ್ ಅಸೋಸಿಯೇಷನ್ ಗೆ ಖರೀದಿಮಾಡಿದೆವು.
ಈ ಬಾರಿಯ ಕರ್ನಾಟಕ ಜೈನ್ ಅಸೋಸಿಯೇಷನ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನ ಮುಂದಿನ ಆಲೋಚನೆಗಳು ಅಭಿವೃದ್ದಿಯತ್ತ ಕೇಂದ್ರಿಕರಿಸುತ್ತೇನೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇನೆ. ಕರ್ನಾಟಕ ಜೈನ್ ಅಸೋಸಿಯೇಷನ್ ನ ಮೂಲ ಉದ್ದೇಶವೇನಿದೆ ಎಂದರೆ ಕರ್ನಾಟಕದ ಎಲ್ಲ ಪ್ರದೇಶಗಳಿಗೂ ಪ್ರಾತಿನಿಧ್ಯ ಕೊಡ ಬೇಕು ಎಂಬ ಆಲೋಚನೆ ಇದೆ. ಅಭಿವೃಧಿಯ ಬಗ್ಗೆ ಯೋಚಿಸುವುದ್ದಾದರೆ ನಮ್ಮ ಕರ್ನಾಟಕ ಜೈನ್ ಅಸೋಸಿಯೇಷನ್ ಅನ್ನು ಎತ್ತರಕ್ಕೆ ಬೆಳಸ ಬೇಕು ಎಂಬ ಯೋಚನೆಗಳು ಇದೆ. ಈ ಬಾರಿ ಕರ್ನಾಟಕ ಜೈನ್ ಅಸೋಸಿಯೇಷನ್ ನಿಂದ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಮಾಡಿ ಅಭಿವೃದ್ದಿ ಪಥದ ಹಾದಿಗೆ ಕರೆದುಕೊಂಡು ಹೋಗ ಬೇಕು ಜನರಿಗೆ ತಿಳುವಳಿಕೆ ನೀಡ ಬೇಕು ಸರ್ಕಾರದಿಂದ ಸಿಗುವ ಸೌಲಭ್ಯವನ್ನ ಹೆಚ್ಚು ಹೆಚ್ಚು ಸಿಗುವಂತೆ ಮಾಡುವುದು ನನ್ನ ಮೂಲ ಕರ್ತವ್ಯ ಎಂದು ಬಾವಿಸುತ್ತೇನೆ.
ಈ ಬಾರಿ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ತಾವುಗಳು ಈ ಹಿಂದೆ ಸಹಕಾರ ಕೊಟ್ಟಂತೆ ಪ್ರೋತ್ಸಹ ಕೊಟ್ಟಂತೆ ಸಹಕರಿಸಿ ನನ್ನನ್ನು ಆರಿಸ ಬೇಕು ಎಂದು ತಮ್ಮಲಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. 2019 ರಿಂದ 2024ರ ವರೆಗೆ ನಾನು ಕೆಲಸವನ್ನು ಮಾಡಿದ್ದೇನೆ, ನನ್ನ ಕೈಲಾದಷ್ಟು ಸೇವೆಯನ್ನು ಮಾಡಿದ್ದೇನೆ. ಮುಂಬರುವ 2ನೇ ಅವಧಿಯಲು ಸಹ ಹೆಚ್ಚಿನ ಕೆಲಸವನ್ನು ಮಾಡಲು ತಾವುಗಳು ಅವಕಾಶ ಮಾಡಿ ಕೊಡಬೇಕೆಂದು ಕೇಳಿ ಕೊಳ್ಳುತ್ತೇನೆ ಜೈ ಜಿನೇಂದ್ರ.
ಇಷ್ಟೇಲ್ಲಾ ಧರ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಾಯಕತ್ವದ ಗುಣವಿರುವ ಕ್ರಮಸಂಖ್ಯೆ 4 ಶ್ರೀಯುತ ಸುನೀಲ್ ಕುಮಾರ್ ರವರರಿಗೆ ಹಾಗೂ ಎಸ್ ಜಿತೇಂದ್ರ ಕುಮಾರ್ ತಂಡದ ಸದಸ್ಯರಿಗೆ ಮತ ನೀಡಬೇಕೆಂದು ತಂಡದ ಪರವಾಗಿ ಕೇಳುತ್ತಿದ್ದಾರೆ ನಿಮ್ಮ ಸೇವಾಕಾಂಕ್ಷಿ ಶ್ರೀಯುತ ಸುನೀಲ್ ಕುಮಾರ್ ಡಿ ರವರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














