ಜ್ವಾಲಾಮಲೆ ಧರ್ಮಯಾತ್ರೆ

(ಕರ್ನಾಕದಲ್ಲಿ ಅನೇಕ ಪ್ರಾಚೀನ ತೀರ್ಥ ಕ್ಷೇತ್ರಗಳಿವೆ ಆ ಕ್ಷೇತ್ರಗಳು ನಾಡಿನಾಧ್ಯಂತ ಬೆಳಕಿಗೆ ಬರಬೇಕು ಅಲ್ಲಿನ ದರ್ಶನಗಳನ್ನು ಮಾಡಬಡಬೇಕು ಭಕ್ತಾದಿಗಳು ಅಲ್ಲಿಗೆ ಹೋಗಿ ದರ್ಶನ ಮಾಡಿಕೊಂಡು ಆ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಯತ್ನ ಮಾಡಬೇಕು ಸಹಕರಿಸ ಬೇಕು ಎಂಬ ಭಾವನೆಯಿಂದ ಜ್ವಾಲಮಾಲ ನ್ಯೂಸ್ ನ ಶ್ರೀಮತಿ ವೈಶಾಲಿಯವರು ಹಾಗೂ ಅವರ ತಂಡದವರು ಒಂದು ಸಮಯವನ್ನು ನಿಗದಿ ಮಾಡಿಕೊಂಡು ಕರ್ನಾಟಕದಲ್ಲಿ ಇರುವಂತಹ ಹಾಗೂ ಭಾರತ ದೇಶದಲ್ಲಿ ಇರುವಂತಹ ಪ್ರಾಚೀನ ಜಿನ ಬಸದಿಗಳ ದರ್ಶನವನ್ನು ಮಾಡುವಂತಹ ಒಂದು ಕಾರ್ಯಕ್ರಮವನ್ನ ಇವತ್ತಿನ ದಿನ ಪ್ರಾರಂಭ  ಮಾಡುತ್ತಿದೇವೆ. ಧರ್ಮಯಾತ್ರೆ ಎಂಬ ಸುಂದರ ಕಾರ್ಯಕ್ರಮ ಇಂದು ಮೂಡಿಬರುತ್ತಿದೆ, ಪ್ರಥಮ ಅವತರಣಿಕೆ ಇಂದು ಪ್ರಾರಂಭವಾಗಿದೆ. ಪ್ರಥಮ ಅವತರಣಿಕೆಯಲ್ಲಿ ಸ್ವಾಧಿ ಜೈನ ಮಠದ ಬಗ್ಗೆ ನವರಾತ್ರಿಯ ವಿಶೇಷದ ಬಗ್ಗೆ ಮೂಡಿ ಬರುತ್ತಿದೆ. ಈ ಕಾರ್ಯಕ್ರಮ ಹೀಗೆ ನಿರಂತರವಾಗಿ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿ ಜ್ವಾಲಮಾಲ ತಂಡದ ಎಲ್ಲರಿಗೂ ಶುಭಹಾರೈಸುತ್ತೇವೆ. ಎಲ್ಲರೂ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಿ ಎಲ್ಲರಿಗೂ ಮಂಗಳವಾಗಲಿ).

ವೀಕ್ಷಕ ಬಂಧುಗಳೇ, ನಿಮ್ಮೆಲ್ಲರ ನೆಚ್ಚಿನ ಜ್ವಾಲಮಾಲ ಧರ್ಮಯಾತ್ರೆಗೆ 50 ರ ಸಂಭ್ರಮ, ಈ ಸಂದರ್ಭದಲ್ಲಿ ನಿಮಗಾಗಿ ಸಂಕಲಿಸಿ ಪ್ರಸ್ತುತ ಪಡಿಸಲಾಗುತ್ತಿದ್ದ ಸಂಚಿಕೆಗಳನ್ನು ಪ್ರತಿವಾರವು ತಪ್ಪದೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಮೆಚ್ಚಿದ್ದೀರಿ, ನಮ್ಮನ್ನು ಪ್ರೋತ್ಸಾಹಿಸಿ ಹರಸಿದ್ದೀರಿ. ನಿಮ್ಮಗಳ ಹಾರೈಕೆ ಸದಾ ನಮ್ಮೊಂದಿಗೆ ಹೀಗೆ ಇರಲಿ ಎಂದು ಕೇಳುತ್ತ ಮತ್ತೊಮ್ಮೆ ನಿಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಹೃತ್ಪೂರ್ವಕ ಧನ್ಯವಾದಗಳು.

(ಜ್ವಾಲ ಮಾಲ ಧರ್ಮಯಾತ್ರೆ ಪ್ರತಿವಾರ ನಮ್ಮ ದೂರದರ್ಶನದಲ್ಲಿ ಬೆಳಗ್ಗೆ 9:30 ಕ್ಕೆ ಸರಿಯಾದ ಸಮಯಕ್ಕೆ ಕಳೆದ 50 ಸಂಪುಟಗಳಲ್ಲಿ ನಿರಂತರವಾಗಿ ಪ್ರಸಾರವಾಗುತ್ತಿದೆ. ಈ ವಾರ 50ರ ಸಂಪುಟ ಪ್ರಸಾರವಾಗುತ್ತಿದೆ, ನಮ್ಮ ಕನ್ನಡದ ಕರ್ನಾಟಕದ ಭೂಮಿಯಲ್ಲಿ ನಡೆಯುತ್ತಿರುವಂತಹ ಎಲ್ಲ ಧಾರ್ಮಿಕ ವಿಚಾರಗಳನ್ನ ಜೈನ ಧರ್ಮಗಳ ಅನೇಕ ತೀರ್ಥಗಳ ದರ್ಶನ ನಡೆಯುತ್ತಿರುವ ಪ್ರಭಾವನೆ ಕಾರ್ಯಕ್ರಮಗಳನ್ನು ತ್ಯಾಗಿಗಳ ಪ್ರವಚನಗಳನ್ನು ಸಾಹಿತ್ಯ ಉಪಯೋಗಿ ಕಾರ್ಯಕ್ರಮಗಳು ಮತ್ತು ಸಮಾಜ ಉಪಯೋಗಿ ನಡೆಯುವಂತಹ ಎಲ್ಲ ಆದರ್ಶ ಕಾರ್ಯಕ್ರಮಗಳನ್ನ ಈ ಜ್ವಾಲಮಾಲ ಧರ್ಮಯಾತ್ರೆ ಕಾರ್ಯಕ್ರಮದಲ್ಲಿ ತೋರಿಸಲಾಗುತ್ತಿದೆ. ಶ್ರೀ ವೈಶಾಲಿ ಚಂದ್ರಪ್ರಭು ರವರ ಸಾರಥ್ಯದಲ್ಲಿ ನಡೆಯುತ್ತಿರುವ ನಡೆಯುತ್ತಿರುವ ದೂರದರ್ಶನ ಕಾರ್ಯಕ್ರಮ ವಿಭಿನ್ನವಾಗಿದ್ದು ಮುಂದಿನ ದಿನದಲ್ಲಿ ವಿಶೇಷವಾದಂತಹ ಧರ್ಮದ ಮತ್ತು ಸಂಸ್ಕಾರದ ಕೆಲಸ ಕಾರ್ಯಗಳನ್ನು ಮಾಡುವುದಾಗಲಿ ರಾಜ್ಯದಲ್ಲಿ ನಡೆಯುವಂತಹ ಎಲ್ಲ ಧಾರ್ಮಿಕ ಕಾರ್ಯಗಳನ್ನ ಪ್ರಸಾರ ಮಾಡಿ ಜನರಿಗೆ ಮನೆ ಕುಳಿತೆ ಧರ್ಮಲಾಭವನ್ನು ಮಾಡುವಂತಹ ಅನುಕುಲವನ್ನು ಮಾಡಿ ಕೊಡಲಾಗುತ್ತಿದೆ ತಂಡದ ಎಲ್ಲ ಸೈಯೋಜಕರಿಗೂ ಎಲ್ಲ ಸಂಘಟಕರಿಗೂ ಶುಭ ಆಶೀರ್ವಾಧಗಳು ಈ ಕಾರ್ಯಕ್ರಮ ನಿರಂತರವಾಗಿ ನಡೆಯಲ್ಲಿ ಎಂದು ಶುಭ ಹಾರೈಸುತ್ತೇವೆ.)

(ಶ್ರೀಮತಿ ವೈಶಾಲಿ ಚಂದ್ರಪ್ರಭು ಅವರು ಜ್ವಾಲಮಾಲ ನ್ಯೂಸ್ ಎಂಬ ಮಾಧ್ಯಮದ ಮುಖಾಂತರ ನಾಡಿನಾಧ್ಯಂತ ತಮ್ಮ ಮಾಧ್ಯಮದ ಮುಖಾಂತರ ಜಿನ ಧರ್ಮದ ಪ್ರಚಾರ ಪ್ರಸಾರ ಮಾಡುತ್ತ ಬಂದಿದ್ದಾರೆ. ಜ್ವಾಲಮಾಲ ನ್ಯೂಸ್ ತಂಡದವರಿಂದ ಧರ್ಮಯಾತ್ರೆ ನಾಮದಡಿಯಲ್ಲಿ ಜಿನ ಧರ್ಮದ ಪವಿತ್ರ ಕ್ಷೇತ್ರಗಳು ಬಸದಿಗಳು ಮತ್ತು ಜಿನ ಧರ್ಮಕ್ಕೆ ಸಂಬಂಧ ಪಟ್ಟಂತಹ ಐತಿಹಾಸಿಕ ಕರುಹುಗಳನ್ನ ಮಾಧ್ಯಮದ ಮುಖಾಂತರ ತಮ್ಮೆಲ್ಲರ ಮುಂದೆ ತೆರೆದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಜಿನ ಧರ್ಮದ ವೀರ ಮಹಿಳೆ ಎಂದು ಕೂಡ ನಾವು ಅವರನ್ನು ಕರೆಯಬಹುದು ಜ್ವಾಲಮಾಲ ತಂಡದವರಿಗೆ ಹಾಗೂ ಯಾರೇಲ್ಲ ತಂಡದ ಯಶಸ್ಸಿಗಾಗಿ ಹರಕೆಯನ್ನು ಮಾಡುತ್ತಿರುವ ಎಲ್ಲರಿಗು ಧರ್ಮವೃದ್ದಿಯಾಗಲಿ).

(ಕರ್ನಾಟಕ ನಾಡಿನ ಧರ್ಮ ಪ್ರಭು ಬಂಧುಗಳೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಜ್ವಾಲಮಾಲ ಧರ್ಮಯಾತ್ರೆ ಈ ಕಾರ್ಯಕ್ರಮವು ಧಾರ್ಮಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ನಡೆಯುವಂತಹ ಎಲ್ಲ ಕಾರ್ಯಗಳನ್ನು ನಮ್ಮ ಕರ್ನಾಟಕ ರಾಜ್ಯ ಮಂಡ್ಯ ಜಿಲ್ಲೆ ಬೆಳ್ಳೂರಿನ ಗ್ರಾಮಸ್ಥರಾದ ಶ್ರೀಮತಿ ವೈಶಾಲಿ ಚಂದ್ರಪ್ರಭು ರವರು ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಅಥವಾ ಪಂಚಕಲ್ಯಾಣಗಳಾಗಲಿ ಸಾಧು ಸಂತರ ಸೇವೆಗಳಾಗಲಿ ಮತ್ತು ಎಲ್ಲ ಮಠಗಳಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ತಮ್ಮ ಕಾರ್ಯಕ್ರಮದ ಮೂಲಕ ಪರಿಚಯಿಸುತ್ತಿದ್ದಾರೆ. ಜ್ವಾಲಮಾಲ ಧರ್ಮಯಾತ್ರೆ ಎಂಬ ಕಾರ್ಯಕ್ರಮ ಸುಮಾರು
1 ವರ್ಷ ದಿಂದ ನಡೆಯುತ್ತಿದೆ. ಇಂದು 50 ಸಂಪುಟ ಜ್ವಾಲಮಾಲ ಧರ್ಮಯಾತ್ರೆ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಧರ್ಮಪ್ರಭಾವನೆ ಆಗಲಿ ಎಂದು ಶುಭ ಹಾರೈಸುತ್ತೇವೆ).

(ಪ್ರತಿ ಭಾನುವಾರ ಚಂದನ ವಾಹಿನಿಯಲ್ಲಿ ಈ ಕಾರ್ಯಕ್ರಮವನ್ನ ಅಳವಡಿಸಿದ್ದಾರೆ.  ಈ ಕಾರ್ಯಕ್ರಮ ವಿಶೇಷವಾಗಿ ಧಾರ್ಮಿಕರಿಗೆ ಜೈನ ಸಮಾಜದವರಿಗೆ ತಮ್ಮ ಕಾರ್ಯಕ್ರಮಗಳು ಸಮಾಜದಲ್ಲಿ ನಡೆಯುವಂತಹ ಧಾರ್ಮಿಕ ಮಹೋತ್ಸವಗಳು ಯಾತ್ರೆಗಳು ಮತ್ತು ಇತರ ಧಾರ್ಮಿಕ ಮತ್ತು ಸಾಮಾಜಿಕ ಸಭೆ ಸಮಾರಂಭ ಮಹೋತ್ಸವಗಳನ್ನ ಯತಾ ಸಮಯದಲ್ಲಿ ಬಿತ್ತರಿಸುತ್ತಾ ಇದ್ದಾರೆ. ಇದೊಂದು ವಿಶೇಷವಾಗಿರುವಂತಹ ಈ ಧಾರ್ಮಿಕ ಧರ್ಮಯಾತ್ರೆ ಕಾರ್ಯಕ್ರಮ ಎಂದು ಹೇಳಿ ನಾಮಕರಣವನ್ನು ಮಾಡಿದ್ದಾರೆ. ಸಮಾಜದವರು ಇದರಿಂದ ಹೆಚ್ಚಿನ ಲಾಭವನ್ನ ಪಡೆದುಕೊಳ್ಳುತ್ತಾರೆ ಎಂದು ನಮಗೆ ವಿಶ್ವಾಸವಿದೆ, ಈ ಕಾರ್ಯಕ್ರಮದಲ್ಲಿ ತಮ್ಮೇಲ್ಲರ ಸಹಕಾರ ಸೇವೆ ಮತ್ತು ನಿರಂತರ ತಮ್ಮ ವೀಕ್ಷಣೆ ಸಮಯವನ್ನು ನಿಗದಿಪಡಿಸಿಕೊಂಡು ಈ ಕಾರ್ಯ ಕ್ರಮದಿಂದ ಲಾಭ ಧರ್ಮ ಲಾಭವನ್ನ ಪಡೆಯುತ್ತೀರಿ ಎಂದು ಆಶಿಸುತ್ತ ಜ್ವಾಲಮಾಲ ಮತ್ತು ಧರ್ಮಯಾತ್ರೆ ಈ ಕಾರ್ಯಕ್ರಮಕ್ಕೆ ನಮ್ಮ ವಿಶೇಷವಾದಂತಹ ಆಶೀರ್ವಾದಗಳು ಶುಭಕಾಮನೆಗಳು).

(ಜ್ವಾಲಮಾಲ ಧರ್ಮಯಾತ್ರೆ ಒಂದು ವಿಶೆಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಜ್ವಾಲಮಾಲ ಧರ್ಮಯಾತ್ರೆಯಲ್ಲಿ ಕರ್ನಾಟಕದಲ್ಲಿ ಇರುವಂತಹ ಬಸದಿಗಳ ಸಂಪೂರ್ಣ ವಿವರ ಹಾಗೂ ಜೈನ ಧರ್ಮಗಳ ಕಾರ್ಯಕ್ರಮಗಳ ವಿವರವನ್ನು ನಡೆಸಿಕೊಡುತ್ತಾರೆ. ಜೈನ ಧರ್ಮದ ಗೀತೆಗಳು ಕ್ಷೇತ್ರದ ಪರಿಚಯಗಳು ಹಾಗೂ ಹಬ್ಬಗಳು ಹಾಗೂ ಆಚರಣೆಗಳು ನೋಂಪಿಗಳು ಪೂಜೆಗಳನ್ನೆ ಎಲ್ಲವನ್ನ ಟಿ ವಿ ವಾಹಿನಿ ಮುಖಾಂತರ ಎಲ್ಲರಿಗೂ ಪರಿಚಯ ಮಾಡಿರುವಂತಹ ವಿಶೇಷ ಕಾರ್ಯಕ್ರಮವನ್ನ ಮಾಡುತ್ತಿದ್ದಾರೆ ಜ್ವಾಲಮಾಲ ಧರ್ಮಯಾತ್ರೆಯ ನಿರ್ದೇಶನ ಮತ್ತು ನಿರ್ಮಾಣವನ್ನಶ್ರೀಮತಿ ವೈಶಾಲಿ ಚಂದ್ರಪ್ರಭು ಹಾಗೂ ಅವರ ತಂಡದವರು ಅತ್ಯಂತ ಶ್ರದ್ದೆಯಿಂದ ಈ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಈ ಒಂದು ಕೆಲಸ ಪರಿಪೂರ್ಣವಾಗಿ ಯಶಸ್ಸನ್ನು ತಂದುಕೊಡಲಿ ಎಂದು ಹೇಳುತ್ತ ಅವರಿಗೂ ಅವರ ತಂಡದವರಿಗೆ ಶುಭಾಷಯವನ್ನು ತಿಳಿಸುತ್ತ ಎಲ್ಲರಿಗೂ  ಒಳ್ಳೆಯದಾಗಲಿ ಎಂದು ಹೇಳಿ ಶುಭಹಾರೈಸುತ್ತಿದ್ದೇನೆ).

 

 

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್