ಜ್ಙಾನಮತಿ ಮಾತಾಜಿ ಜನ್ಮ ಜಯಂತಿ

ಬೆಳ್ಳೂರಿನ ವಿಮಲನಾಥ ಬಸದಿಯಲ್ಲಿ 16-10-2016ರಂದು 105 ಅರಿಕಾ ಪೂಜ್ಯಶ್ರೀ ಜ್ಞಾನಮತಿ ಮಾತಾಜಿರವರ ಜನ್ಮದಿನದ ಅಂಗವಾಗಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅಂದು ಪಂಚಪರಿಮೇಷ್ಠಿಗಳಿಗೆ ಪೂಜೆ ಭಜನೆ ಹಾಗೂ ಪ್ರವಚನ ಕಾರ್ಯಕ್ರಮ ಜರುಗಿತು. ದಿನಾಂಕ 10-10-2016ರಂದು ಜ್ಞಾನಮತಿ ಮಾತಾಜಿರವರ ಜೀವನ ಚರಿತ್ರೆ ಬಗ್ಗೆ ನಡೆಸಲಾಗಿದ ಪರೀಕ್ಷೆಯಲ್ಲಿ ಉತೀರ್ಣರಾದವರಿಗೆ ಬಹುಮಾನ ವಿತರಣೆ ಕೂಡ ನಡೆಯಿತು. ಪ್ರಥಮ ಬಹುಮಾನವನ್ನು ಕ್ರಮವಾಗಿ ಮಾಲಪ್ರಭ ಸ್ಮಿತಪ್ರಸಾದ್ ಹಾಗೂ ಸೌಮ್ಯ ಮಂಜುನಾಥ್ ರವರು ಸ್ವೀಕರಿಸಿದರು ಹಾಗೂ ಸಮಾಧಾನಕರ ಬಹುಮಾನವನ್ನು ಕಲಾವತಿರಾಮಚಂದ್ರ ಮತ್ತು ವನಿತದೇವೇಂದ್ರರವರು ಪಡೆದರು. ಹೆಚ್ಚಿನ ಸಂಖ್ಯೆಯಲ್ಲಿ ಜೈನ ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.