ನಮಗೆ ಈ ವರ್ಷ ದೀಕ್ಷೆ ತೆಗೆದುಕೊಂಡು 50 ವರ್ಷವಾಯಿತು, ನಾವು ಓದಿದ್ದು ಪಾಠಶಾಲೆಯಲ್ಲಿ, ನಾವು ಹುಟ್ಟಿದು ವರಂಗ ಅದು ಒಂದು ಧಾರ್ಮಿಕ ಕ್ಷೇತ್ರ, ನಾವು ಒಂದು ದಿನ ನಮ್ಮ ತಾಯಿಯವರಿಗೆ ಕೇಳಿದೆವು ನಮಗೆ ಎಂತಂಹ ಕ್ಷೇತ್ರ ಸಿಕ್ಕಿದೆ ಎಂದರೆ ಪ್ರತಿ ದಿನ ಮುನಿಗಳಿಗೆ ಮಾತಾಜೀ ಅವರಿಗೆ ನಮಸ್ಕಾರ ಮಾಡಬೇಕು ಇಷ್ಟೊಂದು ಮುನಿಗಳ ಸಂಪರ್ಕ ಇರುವಂತಹ ಶ್ರವಣ ಬೆಳಗೊಳಕ್ಕೆ ಬರಬೇಕು ಎಂದು ಸಂಕಲ್ಪಮಾಡಿದ್ದಿರ ಎಂದು ಕೇಳಿದ್ದೆ. ಅದಕ್ಕೆ ನಮ್ಮ ತಾಯಿಯವರು ಹೇಳಿದರು ನೀನು ಗರ್ಭದಲ್ಲಿ ಇದ್ದಾಗ ಬಹಳ ಜನ ಮುನಿಗಳು ಬಂದಿದ್ದರು ಎಲ್ಲರು ಪಿಂಚಿಕೊಟ್ಟು ಹೋಗುತ್ತಿದ್ದರು ಎಂದರು. ಮುನಿಗಳು ಮಾತಾಜೀಗಳು ಹೆಚ್ಚಾಗಿ ಬರುವಂತಹ ಕ್ಷೇತ್ರ ಶ್ರವಣ ಬೆಳಗೊಳಕ್ಕೆ ಈ ಪೀಠ ದೊರೆಯ ಬೇಕಾದರೆ ನಮ್ಮ ತಾಯಿಯವರ ಒಂದು ಸಂಸ್ಕಾರ. ನಮ್ಮ ತಂದೆಯವರು ಬೆಳಗ್ಗೆ 4 ಗಂಟೆಗೆ ಎದ್ದೇಳಿಸುತ್ತಿದ್ದರು ನಂತರ ಪೂಜಾಪಾಠ, ದರ್ಶನ ಸ್ತುತಿ, ಮಂತ್ರ, ಮಂಗಲ ಅಷ್ಟ, ಧಾರ್ಮಿಕ ವಿಚಾರಗಳುನ್ನು ಹೇಳಿ ಕೊಡುತ್ತಿದ್ದರು. 1ರಿಂದ 4 ನೇ ತರಗತಿಯವರೆಗು ಇಲ್ಲಿಯೇ ಇದ್ದು 5ನೇ ತರಗತಿಗೆ ಕಾರ್ಕಳಕ್ಕೆ ಬಂದು ಅಲ್ಲಿ ಭುಜಬಲಿ ಬ್ರಹ್ಮಚರಿಯ ಆಶ್ರಮ ಇಲ್ಲಿಗೆ ಹೋದೆವು, ನಂತರ 6ನೇ ತರಗತಿಯಲ್ಲಿ ಸಂಸ್ಕೃತ ಪಾಠ ಪ್ರಾರಂಭವಾಯಿತು. ಆಗ ನಾವು ತರಗತಿಯಲ್ಲಿ ಪ್ರಥಮದಲ್ಲಿ ಇದ್ದೇವು. ನಂತರ 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಇತ್ತು ಆಗ ನಾವು ಇದ್ದದು 28 ಜನ ತೇರ್ಗಡೆಯಾಗಿದು ಮಾತ್ರ ನಾವು 4 ಜನ. ನಂತರ 9 ನೇ ತರಗತಿಗೆ ಹೊಂಚದ ಕುಂದ ಕುಂದ ವಿದ್ಯಾ ಪೀಠಕ್ಕೆ ಹೋದೆವು ಅಲ್ಲಿ ಧಾರ್ಮಿಕ ಪರೀಕ್ಷೆಯಲ್ಲಿ ಗೊಲ್ಡ್ ಮೆಡಲ್ ದೊರಕಿತು. ಇಲ್ಲಿ 70 ಜನ ಇದ್ದರು ಮನೆಯನ್ನು ಮರೆಯುವ ಹಾಗೆ ವ್ಯವಸ್ಥೆ ಇತ್ತು, ಇಲ್ಲಿ ನಾಟಕವನ್ನು ಸಹ ಕಲಿಸುತ್ತಿದ್ದರು. ಅಕಲಂಕ ನಿಶ್ಕಲಂಕ ನಾಟಕ, ಪದ್ಮಾವತಿ ಕ್ಷೇತ್ರ ಮಹತ್ಮೆ ಇನ್ನೂ ಹಲವಾರು ನಾಟಕಗಳನ್ನಕಲಿಸುತ್ತಿದ್ದರು, ಸಂಗೀತವನ್ನು ಕಲಿಸುತ್ತಿದ್ದರು.
1968 ನೇ ಇಸವಿಯಲ್ಲಿ ನಮ್ಮ ಶ್ರವಣ ಬೆಳಗೊಳದ ಸ್ವಾಮೀಜಿಯವರು ಉತ್ತರಾಧಿಕಾರಿಯನ್ನು ಹುಡುಕುವುದಕ್ಕೆ ಇಲ್ಲಿಗೆ ಹೊರಟಿದ್ದಾರೆ ಎಂದು ಸೂಚನೆ ಬಂತು. ಆಗ ನಾವು ಅಲ್ಲಿಗೆ ಆಯ್ಕೆಯಾದೆವು. ಆದರೆ ನಾವು ಇನ್ನೂ 10 ನೇ ತರಗತಿಯಲ್ಲಿ ಓದುತ್ತಿದ್ದೇವು ಹಾಗಾಗಿ ಪರೀಕ್ಷೆ ಬರೆಯ ಬೇಕು ನಂತರ ಯೋಚಿಸುತ್ತೇವೆ ಎಂದು ಹೇಳಿದೆ ಆಗ ನನ್ನ ಮೇಲೆ ಬೇಸರಗೊಂಡು ಅಲ್ಲಿಂದ ಹೊರಗಡೆ ನಡೆ ಎಂದು ಹೇಳಿದರು. ನಾವು ಅಲ್ಲಿಂದ ಹೊರಟು ಕಾರ್ಕಳಕ್ಕೆ ಬಂದೇವು ಅಲ್ಲಿ ಮಾರವಾಡಿ ಅಂಗಡಿಯಲ್ಲಿ ತಿಂಗಳಿಗೆ 50 ರೂಗಳಿಗೆ ಕೆಲಸ ಮಾಡಿದೆವು. ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ತೇರ್ಗಡೆಯಾದೆವು. ಆಗ ಅರಿಹಂತ ದಾಸ ದೇವೇಂದ್ರ ಕೀರ್ತಿಯವರಿಗೆ ಖುಷಿಯಾಗಿ ಶ್ರವಣ ಬೆಳಗೊಳದ ಪಂಡಿತ್ ಪದ್ಮಣ್ಣ ನವರು ಹಾಗೂ ಮುಂತಾದವರು ಬಂದು ನನ್ನನ್ನು ವಾಪಸ್ಸು ಕರೆತಂದರು. ನಂತರ ನನ್ನನ್ನು ಶ್ರವಣ ಬೆಳಗೊಳಕ್ಕೆ ಹೋಗ ಬೇಕು ಎಂದರು ಆದರೆ ನಾನು ನನಗೆ ಅಲ್ಲಿ ಶಿಕ್ಷಣಕ್ಕೆ ಅಡ್ಡಿಯಾದರೆ ನಾನು ಹೋಗುವುದಿಲ್ಲ ನನಗೆ ಓದಲು ಬಿಡಬೇಕು ಎಂದು ಹೇಳಿದೆ. ಅದಕ್ಕೆ ಒಪ್ಪಿ ನನ್ನನ್ನು ಪಿ ಯು ಸಿ ಗೆ ಹೋಗಲು ಅನುಮತಿ ನೀಡಿದರು.
ನಂತರ ಶ್ರವಣ ಬೆಳಗೊಳದ ಶ್ರೀಗಳಿಗೆ ಆರೋಗ್ಯ ಸರಿ ಇರದ ಕಾರಣ ನನಗೆ ಡಿಸೆಂಬರ್ 11 ನೇ ತಾರೀಖು ಬೆಳಗ್ಗಿನ ಜಾವ 4 ಗಂಟೆಗೆ ನಾವು ದೀಕ್ಷೆ ಪಡೆದೆವು. ಅಂದು ಮದ್ಯಾಹ್ನ ಶ್ರೀಗಳ ಸಮಾಧಿಯಾಯಿತು. ಅಂದಿನಿಂದ ಇಂದಿಗೆ ದೀಕ್ಷೆ ಪಡೆದು 50 ವರ್ಷ ಪೂರ್ತಿಯಾಯಿತು. 50ವರ್ಷ ಪೂರ್ತಿಯಾದ ದಿನದಂದು ನಮ್ಮಿಂದ ದೀಕ್ಷೆ ಪಡೆದಂತಹ ಸ್ವಾಮಿಗಳೇಲ್ಲ ಸೇರಿ ಕಾರ್ಯಕ್ರಮವನ್ನು ಮಾಡಿದರು. ಅದರ ಹಿಂದಿನ ದಿನ ಸುವರ್ಣ ರಥದಲ್ಲಿ ಕುಷ್ಮಾಂಡಿನಿ ದೇವಿ ಮೂರ್ತಿ ಮತ್ತು ಗುರುಗಳ ಭಾವ ಚಿತ್ರ ಇಟ್ಟು ನಾವು ರಥ ಏಳೆದು ಉತ್ಸವವನ್ನು ನಡೆಸಿದೆವು ಅಂದು ನಮಗೆ ಬಹಳ ಖುಷಿಯಾಯಿತು.
50 ವರ್ಷದ ಸುವರ್ಣ ದೀಕ್ಷ ಮಹೋತ್ಸವದಲ್ಲಿ ನಾವು ಗುರುವಿನ ಭಾವ ಚಿತ್ರವನ್ನು ರಥದಲ್ಲಿ ಇಟ್ಟು ಏಳೆದಾಗ ಅಂದು ನಮಗೆ ತುಂಬ ಸಂತೋಷವಾಯಿತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














