ಶ್ರಾವಣಬೆಳಗೋಳ

ಧರ್ಮ ಬಂಧುಗಳೇ, ಶ್ರವಣ ಬೆಳಬೆಳಗೊಳದ ದಕ್ಷಿಣಚಾರ್ಯ ಪೀಠದ ಪೀಠಾಧ್ಯಕ್ಷರಾಗಿದ್ದ ಚೈತನ್ಯ ಛೂಡಾಮಣಿ, ಭಟ್ಟಾರಕ ಶೀರೋಮಣಿ, ಸ್ವದ್ಯಾಯ ಕೇಸರಿ, ಸ್ವದ್ಯಾಯ ಸಿದ್ದಾಂತ ಚಕ್ರವರ್ತಿ, ಭಟ್ಟಾರಕ ಚಿಂತಾಮಣಿ, ಪರಮ ಜಿನ ಧರ್ಮ ಪ್ರಭಾವಕ, ದ್ಯಾನ ಚಿಂತಾಮಣಿ, ವಿಶ್ವವಿದ್ಯಾಪುರುಷ, ಸರ್ವ ವಿದ್ವತ್ ಜನಪ್ರಿಯ, ಕಲ್ಯಾಣವಾರಿದಿ, ಆದ್ಯಾತ್ಮ ಚಿಂತಕ, ದವಲತ್ರೇಯ ಮಹಾಗ್ರಂಥ ಕನ್ನಡ ಅನುವಾದ ಪ್ರವರ್ಧಕ, ಪ್ರಾಕೃತ ಭಾಷ ಸಂರಕ್ಷಕ ಪ್ರಸಾರಕ, ಸರ್ವ ಧರ್ಮಸಮನ್ಮಯಿ, ಬೆಳಗೊಳದ ಬೆಳಕು, ಧರ್ಮ ತೀರ್ಥ ಸಂರಕ್ಷಕ, ಭಗವಾನ್ ಶ್ರೀ ಮಹಾವೀರ ಶಾಂತಿ ಪ್ರಶಸ್ತಿ ಪುರಸ್ಕೃತರು, ಶ್ರವಣ ಬೆಳಗೊಳದ ಅಭಿವೃದ್ಧಿಯ ಅರಿಕಾರ, ಜನ ಕಲ್ಯಾಣ ಚಿಂತಕರು, ಚಂದ್ರಗಿರಿ ಮಹೋತ್ಸವದ ಪ್ರವರ್ತಕರು, ಕ್ಷೇತ್ರದಲ್ಲಿನ 40 ಬಸದಿಗಳ ಜೀರ್ಣೋದ್ದಾರ ಮಾಡಿಸಿದ ತೀರ್ಥ ಸಂರಕ್ಷಕರು, ಪಂಥ ರಹಿತ ಸಂತ, ಪರಮ ಶೃತಭಕ್ತ, ಶಿಕ್ಷಣ ಪ್ರೇಮಿ, ಉತ್ತರ ಮತ್ತು ದಕ್ಷಿಣ ಭಾರತ ಜೈನ ಸಮಾಜದ ಸೇತುವೆ ಆಗಿದ್ದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಅಂತ್ಯಕ್ರಿಯೆಯನ್ನು ಶ್ರೀಮಠದ ಪರಂಪರೆಯಂತೆ ಭಟ್ಟಾರಕ ಸ್ವಾಮೀಜಿಗಳವರ ಸಮಾಧಿ ಬೆಟ್ಟದಲ್ಲಿ ನೆರವೇರಿಸಿ ಅದೇ ಸ್ಥಳದಲ್ಲಿ ಕಟ್ಟಲಾದ ಶಿಲಾಮಯ ನಿಷಿದಿ ಮಂಟಪದ ಲೋಕಾರ್ಪಣೆ ಕಾರ್ಯಕ್ರಮ ಡಿಸೆಂಬರ್ 6, 2024 ರಂದು ಸಮಸ್ತ ಜೈನ ಮಠಗಳ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳವರು ಮತ್ತು ವಿವಿಧ ಮಠಗಳ ಶ್ರೀ ಸ್ವಾಮೀಗಳವರ ದಿವ್ಯಸಾನಿಧ್ಯದಲ್ಲಿ ಹಾಗೂ ರಾಜಕೀಯ ಗಣ್ಯ ವ್ಯಕ್ತಿಗಳು ಸಮಸ್ತ ಭಕ್ತವೃಂದದ ಉಪಸ್ಥಿತಿಯಲ್ಲಿ ಹಮ್ಮಿಕೊಳಲಾಗಿದ್ದು ಈ ಗುರು ಭಕ್ತಿಯ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಶ್ರಾವಕ ಶ್ರಾವಕಿಯರು, ಭಕ್ತವೃಂದದವರು, ಶ್ರವಣ ಬೆಳಗೊಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಣ್ಯಭಾಗಿಗಳಾಗಬೇಕಾಗಿ ಶ್ರೀ ಮಠದ ಪ್ರಾರ್ಥನೆ.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್