ಶ್ರೀ ಕ್ಷೇತ್ರ ಶ್ರವಣ ಬೆಳಗೊಳ ಆಧ್ಯಾತ್ಮಿಕ ಲೋಕದ ಸ್ವರ್ಗ. ತ್ಯಾಗ, ಮೈತ್ರಿ ಹಾಗೂ ಅಹಿಂಸೆಯ ಪ್ರತೀಕವಾದ ಮಹಾನ್ ಕ್ಷೇತ್ರ ಗಂಗರ ಸೇನಾಧಿಪತಿ ಚಾವುಂಡರಾಯನಿಂದ ಸ್ಥಾಪಿತವಾದ ಭಗವಾನ್ ಬಾಹುಬಲಿ ಮೂರ್ತಿ ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದ ಮನೋಜ್ಞಪ್ರತಿಮೆ. ಗಂಗ ವಂಶದ ರಾಜರಿಂದ ಒಳಗೊಂಡು ಮೈಸೂರು ಅರಸರವರೆಗು ರಾಜ ಮನ್ನಣೆಯನ್ನು ಪಡೆದ ಮೇರು ದೊರೆ. ಐತಿಹಾಸಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೆರೆದ ಭೌವ್ಯ ಭೂಮಿ. ಇಂತಹ ಪೂಣ್ಯ ಕ್ಷೇತ್ರದಲ್ಲಿರುವ ಪರಮ ಪವಿತ್ರ ಸ್ಥಳ ಗುರು ಪೀಠದ ಸಮಾಧಿಸ್ತ ಶ್ರೀಗಳ ನಿಷಿದಿ ಬೆಟ್ಟ ಈ ಕ್ಷೇತ್ರದಲ್ಲಿ ಸುಮಾರು 2300 ವರ್ಷಗಳ ಪೂರ್ವದಿಂದಲು ಜೈನ ಶ್ರಮಣರು ಆತ್ಮಕಲ್ಯಾಣಕ್ಕಾಗಿ ಅರಸಿ ಬಂದು ಈ ಪವಿತ್ರ ತಾಣದಲ್ಲಿ ಮರಣದ ಮಹಾನವಮಿಯನ್ನು ಕಂಡಿದ್ದಾರೆ. ಅಂತಿಮ ಶೃತಕೇವಲಿಗಳೆನಿಸಿದ ಆಚಾರ್ಯ ಶ್ರೀ ಭದ್ರಬಾಹು ಸ್ವಾಮಿಗಳಿಂದ ಹಿಡಿದು ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರೆಗು ಎಲ್ಲ ಪೂಜ್ಯರುಗಳಿಂದ ಪಾವಿತ್ರತೆಯನ್ನು ಕಂಡಿದೆ. ಶ್ರೀಮಠದ ಪರಂಪರೆಯಂತೆ ಶ್ರೀ ಪೀಠವನ್ನು ಅಲಂಕರಿಸಿ ಧರ್ಮಕಾರ್ಯದಲ್ಲಿ ತೊಡಗಿ ಮುಂದೆ ಆತ್ಮಕಲ್ಯಾಣದ ಹಾದಿಯಲ್ಲಿ ಸಾಗುತ್ತ ಸಮಾಧಿ ಮರಣವನ್ನು ಹೊಂದಿದ ಎಲ್ಲ ಪೂಜ್ಯ ಭಟ್ಟಾರಕ ಸ್ವಾಮೀಜಿಗಳ ಚರಣ ಪಾದುಕೆಗಳನ್ನು ಭಟ್ಟಾರಕ ನಿಷಿದಿ ಬೆಟ್ಟದಲ್ಲಿ ಸ್ಥಾಪಿಸಿ ಸ್ಮರಣೆ ಮಾಡಲಾಗುತ್ತದೆ. ಇದೇ ಪರಂಪರೆಯಲ್ಲಿ ಕ್ರಿ.ಶ 1970 ರಿಂದ 2023ರ ವರೆಗೆ ಶ್ರವಣ ಬೆಳಗೊಳ ದಕ್ಷಿಣಚಾರ್ಯ ಪೀಠದ ಪೀಠಾಧಿಪತಿಗಳಾಗಿ ಸಮಸ್ತ ಭಕ್ತ ಜಿನರ ಗುರು ಸಮಾನರಾಗಿದ್ದ ಧರ್ಮದ ಪ್ರಭಾವನೆಗೈದು ದಿನಾಂಕ 23-3-2023 ರಂದು ಸಮಾಧಿ ಮರಣ ಹೊಂದಿದ ಪ್ರಾಥ ಸ್ಮರಣಿಯ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ಅಂತ್ಯ ಕ್ರಿಯೆಯನ್ನು ಶ್ರೀ ಮಠದ ಪರಂಪರೆಯಂತೆ ಭಟ್ಟಾರಕ ಸ್ವಾಮೀಜಿಗಳವರ ಸಮಾಧಿ ಬೆಟ್ಟದಲ್ಲಿ ನೆರವೇರಿಸಲಾಗುತ್ತದೆ. ಅದೇ ಸ್ಥಳದಲ್ಲಿ ಶಿಲಾಮಯ ನಿಷಿದಿ ಮಂಟಪವನ್ನು ಸ್ಥಾಪಿಸಿ ಅಲ್ಲಿ ಪೂಜ್ಯರ ಶ್ರೀ ಚರಣ ಪಾದುಕೆಗಳನ್ನು ಪ್ರತಿಷ್ಠಾಪಿಸಿ ಸ್ಮರ್ಣ ಶಾಸನ ಲೋಕಾರ್ಪಣೆ ಕಾರ್ಯಕ್ರಮವು ಡಿಸೆಂಬರ್ 6-2024 ರಂದು ಬೆಳಗ್ಗೆ 9:00 ಗಂಟೆಗೆ ಸರಿಯಾಗಿ ಸಮಸ್ತ ಮಠಗಳ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳವರು ಹಾಗೂ ವಿವಿಧ ಮಠಗಳ ಪೂಜ್ಯ ಶ್ರೀ ಸ್ವಾಮೀಜಿಗಳವರ ದಿವ್ಯಸಾನಿಧ್ಯದಲ್ಲಿ ಜರುಗಲಿದೆ ಈ ಗುರುಭಕ್ತಿಯ ಕಾರ್ಯಕ್ರಮಗಳಲ್ಲಿ ನಾಡಿನ ಸಮಸ್ತ ಶ್ರಾವಕ ಶ್ರಾವಕಿಯರು, ಭಕ್ತವೃಂದದವರು, ಶ್ರವಣ ಬೆಳಗೊಳದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಣ್ಯಭಾಗಿಗಳಾಗಬೇಕಾಗಿ ವಿನಂತಿಸಲಾಗುತ್ತದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














