ಗೊಮ್ಮಟಗಿರಿ

ವೀಕ್ಷಕ ಬಂಧುಗಳೇ, ಇಂದಿನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಐತಿಹಾಸಿಕ ಹಿನ್ನೆಲೆವುಳ್ಳ ಸುಂದರ ಕ್ಷೇತ್ರ ಶ್ರೀ ಕ್ಷೇತ್ರ ಗೊಮ್ಮಟಗಿರಿಯಲ್ಲಿ ಡಿಸೆಂಬರ್ 13, 14, 15 ರಂದು ನಡೆಯಲಿರುವ ಶ್ರೀ ಭಗವಾನ್ ಬಾಹುಬಲಿ 75 ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳು ನಡೆಯುತ್ತ ಬಂದಿದ್ದು ದಿನಾಂಕ 27-10-2024 ರಂದು ಹಿಂದೆ ಇದ್ದ ರೀತಿಯಲ್ಲಿ ಬ್ರಹ್ಮಸ್ಥಂಭ ಮತ್ತು ಉಪ್ಪರಿಗೆ ಬ್ರಹ್ಮದೇವರನ್ನು ಶಿಲಾಮಯವನ್ನಾಗಿಸಿ ಪ್ರತಿಷ್ಠಾಪಿಸಿ ವಿಧಿ ಪೂರ್ವಕ ಅಭಿಷೇಕ ಪೂರ್ವಾದಿಗಳು ಶ್ರೀಕ್ಷೇತ್ರ ಹೊಂಬುಜದ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ|| ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮತ್ತು ಶ್ರೀ ಕ್ಷೇತ್ರ ಆರತಿ ಪುರದ ಪರಮ ಪೂಜ್ಯ ಸ್ವಸ್ತಿಶ್ರೀ ಸಿದ್ದಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ ನೆರವೇರಿದವು.

ಇದೇ ಸಂದರ್ಭದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಸ್ವಾಮೀಜಿದ್ವಯರು ಪೂಜೆ ಸಲ್ಲಿಸಿದರಲ್ಲದೇ ನೂತನವಾಗಿ ಕಟ್ಟಲಾದ 5 ಕೊಠಡಿಗಳ ಅಮೃತ ಕುಟೀರ ಉದ್ಘಾಟನೆ ಕಾರ್ಯಕ್ರಮವನ್ನು ಕೂಡ ನಡೆಸಿದರು.  ಕಾರ್ಯಕ್ರಮದಲ್ಲಿ ಬ್ರಹ್ಮಸ್ಥಂಭ ಮತ್ತು ಬ್ರಹ್ಮ ದೇವರ ಮೂರ್ತಿ ದಾನಿಗಳು, ಕೊಠಡಿ ದಾನಿಗಳು, ಗೊಮ್ಮಟ ಗಿರಿ ಸೇವ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸುತ್ತಮುತ್ತಲಿನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

ಇಂತಹ ಅದ್ಬುತ ಕಾರ್ಯಕ್ರಮಗಳ  ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.

ಜ್ವಾಲಮಾಲ ಡಾಟ್ ನ್ಯೂಸ್