ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಬ್ರಹ್ಮಚರ್ಯಾಶ್ರಮ, ಶ್ರೀ ಕ್ಷೇತ್ರ ಶ್ರವಣ ಬೆಳಗೊಳಕ್ಕೆ ಸುಮಾರು 2300 ವರ್ಷಗಳ ಇತಿಹಾಸವಿದೆ, ಅಷ್ಟೇ ಇತಿಹಾಸ ಈ ಬ್ರಹ್ಮಚರ್ಯಾ ಆಶ್ರಮಕ್ಕೂ ಇದೆ. ಏಕೆಂದರೆ ಆಚಾರ್ಯ ನೇಮಿಚಂದ್ರ ಸಿದ್ದಾಂತ ಚಕ್ರವರ್ತಿಗಳಾದ ಮುನಿ ಪುಂಗವಾದಿ ಕಾಲದಿಂದಲು ಗುರುಶಿಷ್ಯ ಪರಂಪರೆಯಿಂದ ನಡೆದ ಅಧ್ಯಯನ ಅಧ್ಯಾಪನ ಕಾರ್ಯಕ್ರಮವು ಸ್ವರ್ಗಿಯ ಪೂಜ್ಯ ನೇಮಿಸಾಗರ ವರ್ಣೀಜಿಯವರ ಕಾಲದ ವರೆಗು ಈ ಪರಂಪರೆ ಮುಂದುವರೆದುಕೊಂಡು ಬಂದು ಈ ವಿದ್ಯಾಪೀಠದಿಂದ ಅನೇಕ ವಿದ್ವಾಂಸರುಗಳು ತಯಾರಾಗಿ ವಿಶ್ವಾದ್ಯಂತ ಅನೇಕ ಸ್ಥಳಗಳಲ್ಲಿ ಧರ್ಮಪ್ರಚಾರಮಾಡಿ ಧರ್ಮಪ್ರಭಾವನೆ ಮಾಡಿದ್ದಾರೆ. ಅದೇ ಪರಂಪರೆ ಇಂದಿನ ಪ್ರಾತ: ಸ್ಮರಣೀಯ ಪರಮ ಪೂಜ್ಯ ಜಗದ್ಗುರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ಸಮಯದಲ್ಲೂ ಮುಂದುವರೆದು ಅನುಚಾನವಾಗಿ ಪ್ರಾಚೀನ ಗುರುಕುಲ ಪದ್ಧತಿಯಂತೆ ನಡೆದುಕೊಂಡು ಬಂದಿದೆ. ಅಂದಿನಿಂದಲು ಪೂಜ್ಯ ಶ್ರೀಗಳವರ ಬೃಹತ್ ಯೋಜನೆಯಲ್ಲಿ ಆಶ್ರಮದ ಹೊಸ ಪಠ್ಯರೂಪವು ಶೃತಪಂಚಮಿಯಂದು ದಿನಾಂಕ 31 ಮೇ 1979 ರಂದು ಪೂಜ್ಯ ಶ್ರೀಗಳವರ ಅಮೃತ ಹಸ್ತದಿಂದ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠವು ಪ್ರಾರಂಭವಾಗಿ ಸುಮಾರು 40 ವರ್ಷಗಳು ಪೂರೈಸಿವೆ. ಪ್ರತಿವರ್ಷ ಜಾತ್ರ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿಯನ್ನು ನೀಡುವುದರ ಮೂಲಕ ಪೂಜ್ಯ ಶ್ರೀಗಳವರು ವಿದ್ಯಾಪೀಠದ ಘನತೆಯನ್ನು 4 ದಿಕ್ಕಿಗೂ ಹರಡುವಂತೆ ಮಾಡಿದರು. ಪೂಜ್ಯ ಶ್ರೀಗಳವರ ಈ ಬೃಹತ್ ಯೋಜನೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಊಟ, ಉಪಹಾರ, ವಸತಿ, ವಸ್ತ್ರ, ತಟ್ಟೆ, ಎಣ್ಣೆ, ಸೋಪು, ಪಠ್ಯಪುಸ್ತಕಗಳು, ನೋಟ್ ಪುಸ್ತಕಗಳು, ಪರೀಕ್ಷಾ ಶುಲ್ಕ, ಔಷಧ ವ್ಯಚ, ಉಪಾಧ್ಯಾಯರ ವೇತನ, ಇವೆಲ್ಲವನ್ನು ಸಂಸ್ಥೆಯ ಪರವಾಗಿ ಪೂಜ್ಯ ಶ್ರೀಗಳವರೇ ಪೂಜ್ಯ ಶ್ರೀಗಳವರೇ ಉದಾರವಾಗಿ ಖರ್ಚು ಮಾಡುತ್ತಾರೆ. ಇದರ ಪರಿಣಾಮವಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಧಾರ್ಮಿಕ, ಸಂಸ್ಕೃತ, ಪ್ರಾಕೃತ, ಹಿಂದಿ ಹಾಗೂ ಜೈನಾಗಮ ವಿಷಯಗಳಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಪೂಜ್ಯ ಶ್ರೀಗಳವರ ಅಡಿಯಲ್ಲಿ ತಯಾರಾದ ಅನೇಕ ವಿದ್ಯಾರ್ಥಿಗಳು ಇಂದಿಗೂ ಅನೇಕ ಉತ್ತುಂಗ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರುಗಳಲ್ಲಿ ಇಲ್ಲಿನಿಂದ ಕೊಡುಗೆಯಾಗಿ ಜೈನ ಮಠಗಳಲ್ಲಿ ಭಟ್ಟಾರಕರಾಗಿ ಪಟ್ಟಾಭಿಷಕ್ತರಾಗಿ ಸಮಾಜವನ್ನು ಧರ್ಮದ ಪಥದಲ್ಲಿ ನಡೆಸುತ್ತ ಕೀರ್ತಿ ತಂದಿದ್ದಾರೆ. ವಿದ್ಯಾ ಪೀಠದಿಂದ ಸಂಸ್ಕಾರ ಪಡೆದವರು ಉತ್ತಮ ಶ್ರೇಯೋ ಮಾರ್ಗದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಎಂಬುವುದಕ್ಕೆ ಇದಕ್ಕಿಂತ ಬೆರೆ ಸಾಕ್ಷಿ ಬೇಕಿಲ್ಲ. ಅದಕ್ಕೆ ಅನುಸರಿಸಲಾಗುವ ಆಶ್ರಮದ ಮಕ್ಕಳ ದಿನಚರಿಯೇ ಹಾಗೆ. ಈಗ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರು ಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಶ್ರಮದ ಮಕ್ಕಳ ದಿನಚರಿಯ ಪ್ರಕಾರ ಬೆಳಗಿನ ಜಾವ ಬೇಗ ಎದ್ದು ಯೋಗಾಸನವನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ.
ಮುಂಜಾನೆ ಓದುವ ಹವ್ಯಾಸ ನಂತರ ಬೆಳಗ್ಗಿನ ಪೂಜಾ ಕಾರ್ಯಕ್ಕೆ ಮಕ್ಕಳು ಸರತಿ ಸಾಲಿನಲ್ಲಿ ಸಾಗುವ ಪರಿ ನೋಡಲು ಬಹಳ ಶಿಸ್ತುಬದ್ದವಾಗಿರುತ್ತದೆ.
ಇನ್ನೂ ಭಗವಂತ ದರ್ಶನ ಪಡೆದು ಅಭಿಷೇಕ ಅಷ್ಟವಿದಾರ್ಚನೆಯಲ್ಲಿ ತೊಡಗುವ ವಿದ್ಯಾರ್ಥಿಗಳು ಸ್ವತಃ ತಾವೇ ಮಂತ್ರಗಳನ್ನು ಉಚ್ಚರಿಸುತ್ತ ಒಂದಾದ ಮೇಲೊಂದರಂತೆ ಪೂಜಾ ವಿಧಾನಗಳನ್ನು ವಿಧಿವತ್ತಾಗಿ ಮಾಡುವ ದೃಶ್ಯಾವಳಿಗಳು ಕಣ್ಣಿಗೆ ದನ್ಯತೆಯ ಭಾವವನ್ನು ಮೂಡಿಸುತ್ತದೆ. ಮಕ್ಕಳಲ್ಲಿ ಇಂತಹ ಒಂದು ಸಂಸ್ಕಾರವೊಂದು ಸಿಕ್ಕರೆ ಸಮಾಜಕ್ಕೆ ಉಪಯುಕ್ತ ಜೀವನ ಶೈಲಿ ಇವರದಾಗುವುದಂತು ಖಂಡಿತ.
ಉಪಹಾರದ ನಂತರ ಶಾಲೆ ನಂತರ ವಿಶ್ರಾಮ, ಆಟ–ಪಾಠ ತದನಂತರ ಸಂಧ್ಯಾ ಪೂಜಾ ಭಜನೆ, ಅಲ್ಲದೇ ವಿಶೇಷ ದಿನಗಳಲ್ಲಿ ರಜಾ ದಿನಗಳಲ್ಲಿ ಧರ್ಮ ಪಾಠದ ಕಡೆ ಹೊತ್ತನ್ನು ನೀಡಿ ಧರ್ಮ ಶ್ರದ್ದೆ ಮೂಡಿಸಿ ಧರ್ಮದ ಅರಿವನ್ನು ನೀಡಲಾಗುತ್ತದೆ.
ಶ್ರೀಗಳವರ ನೇತೃತ್ವದಲ್ಲಿ ಆಶ್ರಮದ ಮಕ್ಕಳಿಗೆ ಸಿಗುತ್ತಿರುವ ಸವಲತ್ತು ಇಗಿವೆ.
- ಸಂಪೂರ್ಣ ಉಚಿತ ಶಿಕ್ಷಣ
- ಸಂಪೂರ್ಣ ಉಚಿತ ಶಿಕ್ಷಣ
- ಯೋಗಾಸನ
- ಕಂಪ್ಯೂಟರ್ ಶಿಕ್ಷಣ
- ಪ್ರತಿದಿನ ಪೂಜಾ-ಪಾಠ
- ಶುದ್ಧ ರುಚಿಕರ ಭೋಜನ
- ಸಂಗೀತ
- ಪ್ರಾಕೃತ ಭಾಷೆಯ ಕಲಿಕೆ
- ಜೈನ ಧರ್ಮಪಾಠ(ಭಾನುವಾರ)
- ಕೃಷಿ-ತೋಟಗಾರಿಕೆ
- ವಾಸ್ತು-ಜ್ಯೋತಿಷ್ಯ
- ಹೈನುಗಾರಿಕೆ ಮತ್ತು ಜೀವನ ಶಿಕ್ಷಣ
ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಆನಾರೋಗ್ಯದ ಸಂದರ್ಭದಲ್ಲು ತುರ್ತು ಮೆಡಿಕಲ್ ಸೌಲಭ್ಯ ಒದಗಿಸಲಾಗುತ್ತದೆ. ಇತ್ತೀಚೆಗೆ ಕಾಳಲಾದೇವಿ ಕನ್ಯಾಶ್ರಮ ಕೂಡ ತೆರೆಯಲಾಗಿದ್ದು ಬ್ರಹ್ಮಚರ್ಯಾಶ್ರಮ ಹಾಗೂ ಕನ್ಯಾಶ್ರಮದಲ್ಲಿ ಒಟ್ಟು 120 ಮಕ್ಕಳು ವ್ಯಾಸಾಂಗಮಾಡುತ್ತಿದ್ದಾರೆ. ಆಶ್ರಮದಿಂದ ಪೂಜ್ಯ ಶ್ರೀಗಳವರ ಆಶಿರ್ವಾದ ಪಡೆದು ವಿದ್ಯಾವಂತರಾಗಿ ಪೂಜ್ಯರ ಅನುಭವಗಳಿಂದ ವ್ಯವಹಾರಿಕ ಜೀವನದಲ್ಲಿ ಹಾಗೂ ಆದ್ಯಾತ್ಮಿಕ ಜೀವನದಲ್ಲಿಯು ಸಮರ್ಥರಾದ ಇವರು ಭಾವಿ ಜೀವನವನ್ನು ಸುಖಮಯ ಮಾಡುವುದರಲ್ಲಿ ಸಂಶಯವೇ ಇಲ್ಲ. ಆಶ್ರಮದಲ್ಲಿ ಲೌಖಿಕ ಶಿಕ್ಷಣವನ್ನು ಪಡೆದು ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿ ವರ್ಷ ಶೇಕಡ 93 ರಿಂದ 100 ರವರೆಗೆ ಪಲಿತಾಂಶವನ್ನು ತಂದುಕೊಡುತ್ತಿದ್ದಾರೆ. ಇದರ ಹಿನ್ನೇಲೆಯಲ್ಲಿ ಸಾಧನ ನಿರತರಾದ ಪ್ರಾಂಶುಪಾಲರು ಶಿಕ್ಷಕ ವರ್ಗದವರು ಸಹಕಾರ ಕೊಡುತ್ತಿರಲು ಸುತ್ಯಾರ್ಹವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಶೇಕಡ ನೂರಕ್ಕೆ ನೂರು ಹಾಗೂ ಸಂಸ್ಕೃತ ಪರೀಕ್ಷೆಯಲ್ಲಿ ಶೇಕಡ ನೂರಕ್ಕೆ ನೂರು ಪ್ರಥಮ ಶ್ರೇಣಿಯಲ್ಲಿ ಫಲಿತಾಂಶವನ್ನು ತಂದುಕೊಟ್ಟಿದ್ದಾರೆ. ಈ ಆಶ್ರಮಕ್ಕೆ ತಮ್ಮ ಮಕ್ಕಳನ್ನು ಸೇರಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡ ಬೇಕಾಗಿ ಶ್ರೀ ಮಠದ ವಿನಂತಿ. ಆ ಮಕ್ಕಳ ಭವಿಷ್ಯ ರೂಪಿಸುವ ಮಹಾನ್ ಕಾರ್ಯವಾದ ವಿದ್ಯಾದಾನಕ್ಕೆ ನಿಮ್ಮಗಳ ಸಹಕಾರವಿರಲಿ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














