ಸರಸ್ವತಿ ದೇವಿ ಪೂಜೆ

ಶರನ್ ನವರಾತ್ರಿ ಅಂಗವಾಗಿ ಮೈಸೂರಿನ ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ಆಶ್ರಯದಲ್ಲಿ ವೈಭವದ ಶ್ರೀ ಸರಸ್ವತಿ ಪೂಜೆಯನ್ನು ದಿನಾಂಕ :- 7  ಅಕ್ಟೋಬರ  2016ನೇ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ  ಸಮಾಜದ  ಅತ್ತಿಮಬ್ಬೆ  ಸಭಾಭವನದಲ್ಲಿ ಅಯೋಜಿಸಲಾಯಿತು.
ಶ್ರೀ ಪದ್ಮಶ್ರೀ ಜೈನ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಶೀಲಾ ಅನಂತರಾಜ್ ರವರ ನೇತೃತ್ವದಲ್ಲಿ ಕಾರ್ಯಕಾರಿಸಮಿತಿಯ ಎಲ್ಲಾ ಪಧಾದಿಕಾರಿಗಳು ಮತ್ತು ಮಹಿಳಾ ಸಮಾಜದ ಎಲ್ಲಾ ಸದಸ್ಯರು ಕೊಡಿ ಅತ್ಯಂತ ಭಕ್ತಿ ಭಾವದಿಂದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಮೊದಲಿಗೆ ಅರೆಯಂತ ಪರಿಮಿಷ್ಟಿಗಳ ಅಷ್ಟಕದೊಂದಿಗೆ ಪೂಜೆ ಪ್ರಾರಂಭವಾಯಿತು ನಂತರ ಗಣದರ ಪೂಜೆ ಮತ್ತು ಆಹ್ವಾನ ಸಹಿತ ಆಷ್ಟವಿಧಾರ್ಚನೆಯೊಂದಿಗೆ ದ್ವಾದಶಾಂಗ ಶೃತದೇವಿ ಸರಸ್ವತಿದೇವಿ ಪೂಜೆ ಅತ್ಯಂತ ವಿಧಿವತ್ತಾಗಿ ನೆರವೇರಿತು. ನಂತರ ನೆರೆದಿದ್ದ ಎಲ್ಲಾ ಸುಮಂಗಲಿಯರು ಸೇರಿ ಮಹಾಮಾತೆ ಶ್ರೀ ಪದ್ಮವತಿದೇವಿ ಅಷ್ಟಕ ಪೂಜೆಯನ್ನು ನೆರವೇರಿಸಿದರು. ಶಕ್ತಿದೇವಿಯರ ಸ್ಮರಣೆಯ ನವರಾತ್ರಿ ಗೀತೆ ಸ್ತುತಿಯೊಂದಿಗೆ ಹಲವು ಭಕ್ತಿಗೀತೆ ಗಾಯನದೊಂದಿಗೆ ಪೂಜಾ ಕಾರ್ಯಕ್ರಮ ಮತ್ತಷ್ಟು ಮೆರಗುಗೊಂಡಿತು.
ಮಹಾಮಂಗಳಾರತಿಯೊಂದಿಗೆ ಪೂಜೆ ಮುಕ್ತಾಯಗೊಂಡಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸಮಾಜದ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರೆವೆರಿಸಿಕೊಟ್ಟರು.