ಬೆಂಗಳೂರಿನ ತ್ಯಾಗಿ ಸೇವಾ ಸಮಿತಿ ವತಿಯಿಂದ ನಡೆದ ಶ್ರೀ ಅನಂತನೋಂಪಿ ಉದ್ಯಾಪನ ಸಾಮೂಹಿಕ ಕ್ಷಮಾವಳಿ ಮತ್ತು ಮಾತೃವಂದನಾ ಸಮಾರಂಭ ಮುಂದುವರೆದ ಭಾಗವಾಗಿ ಕೊನೆಯ ದಿನ 18-09-2024 ರಂದು ನಡೆದ ಸಾಮೂಹಿಕ ಕ್ಷಮಾವಳಿ ಮತ್ತು ಮಾತೃವಂದನಾ ಸಭಾ ಕಾರ್ಯಕ್ರಮದ ವರದಿ ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ. ಸಭಾ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಸಾನಿಧ್ಯವಹಿಸಿದ್ದು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು, ಶ್ರೀ ಧರ್ಮಸ್ಥಳ ಸುರೇಂದ್ರ ಕುಮಾರ್ ರವರು ಹಾಗೂ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀ ಎಸ್ ಜಿತೇಂದ್ರ ಕುಮಾರ್, ಶ್ರೀ ಬಿ ಪ್ರಸನ್ನಯ್ಯ, ಶ್ರೀ ವಿಕಾಸ್ ಜೈನ್, ಶ್ರೀ ವಿಮುಕ್ತ್ ಕುಮಾರ್ ಜೈನ್ ಹಾಗೂ ಬೆಂಗಳೂರು ಸಕಲ ದಿಗಂಬರ ಜೈನ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಮಾತೃವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಕರ್ನಾಟಕ ಸ್ತ್ರೀರತ್ನ ಎಂಬ ಉಪಾದಿ ನೀಡುವ ಮೂಲಕ ಗೌರವ ಸಮರ್ಪಣೆ ನಡೆಯಿತು. ಈ ಮೂಲಕ ಕಾರ್ಯಕ್ರಮ ಅಭೂತ ಪೂರ್ವ ಯಶಸ್ಸನ್ನು ಕಂಡಿತು.
ಧೀರಜ್ ಜೈನ್ ರವರ ಸುಂದರ ನಿರೂಪಣೆಯೊಂದಿಗೆ ವೇದಿಕೆ ಗಣ್ಯರಾದ ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಪಂಡಿತ ರತ್ನ ಎ ಶಾಂತರಾಜ ಶಾಸ್ತ್ರೀ ಟ್ರಸ್ಟ್ ನ ಚೇರ್ಮನ್ ರವರಾದ ಶ್ರೀ ಎಸ್ ಜಿತೇಂದ್ರ ಕುಮಾರ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರ ಸನ್ಮಾನ ಕಾರ್ಯಕ್ರಮವನ್ನು ಕುರಿತು ಸಂತಸ ವ್ಯಕ್ತಪಡಿಸಿದರು.
ಸಧರ್ಮ ಬಂಧುಗಳೇ ಇಂದಿನ ಅಮೃತ ಘಳಿಗೆ ಎಂದರೆ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರಿಗೆ ಮಾತೃವಂದನೆ ಮಾಡುವಂತಹ ಸಮಯ ಬಹಳ ವಿಶಿಷ್ಟ ರೀತಿಯಲ್ಲಿ ಮಹಿಳೆಯರು ರಜತ ಪಲ್ಲಕಿಯನ್ನು ಹೊತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.
ನಂತರ ಮಾತೃಶ್ರೀ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರಿಗೆ ಗೌರವ ಸಮರ್ಪಣೆ ಕಾರ್ಯ ನಡೆಯಿತು. ನಂತರ ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಮಾತನಾಡಿ :- ಹೆಗ್ಗಡೆ ಪರಿವಾರದವರು ಮಾಡಿರುವಂತಹ ಸಾಧನೆಗಳು ಅವರು ನಡೆಸಿಕೊಟ್ಟಿರುವಂತಹ ಕಾರ್ಯಕ್ರಮಗಳು ಹಾಗೂ ಶ್ರವಣ ಬೆಳಗೊಳ ಶ್ರಿಗಳಾದ ಪರಮಪೂಜ್ಯ ಸ್ವಸ್ತಿಶ್ರೀ ಚಾರೂ ಕೀರ್ತಿ ಸ್ವಾಮೀಜಿಗಳು ಸಹ ನಡೆಸಿಕೊಟ್ಟಂತಹ ಕಾರ್ಯಗಳನ್ನು ನೆನಪಿಸಿದರು. ಮತ್ತು ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರಿಗೆ ಸಂದಿದಂತಹ ಗೌರವ ಸಮರ್ಪಣೆಗೆ ಅಭಿನಂದನೆ ಮತ್ತು ಸಂತಸವನ್ನು ವ್ಯಕ್ತಪಡಿಸಿದರು.
ಈ ಒಂದು ಕಾರ್ಯಕ್ರಮವನ್ನಪ್ರಸಾರವನ್ನು ಮಾಡಿದಂತಹ ಶ್ರೀಮತಿ ವೈಶಾಲಿ ಚಂದ್ರಪ್ರಭು ರವರಿಗೆ ಧನ್ಯವಾದವನ್ನು ಸಲ್ಲಿಸುತ್ತ ಅವರ ಪರವಾಗಿ ಅವರ ತಂಡದವರಾದಂತಹ ತೇಜಸ್ವಿಯವರು ಗೌರವವನ್ನು ಸ್ವೀಕರಿಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














