ದಾವಣಗೆರೆ, ಇಲ್ಲಿನ ಬೆಣ್ಣೆ ದೋಸೆ ಎಷ್ಟು ರುಚಿಯೋ ಪೇಡಾ ಎಷ್ಟು ಸಿಹಿಯೋ ಇಲ್ಲಿ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮಗಳು ಅಷ್ಟೇ ವ್ಯವಸ್ಥಿತ ವಿಜೃಂಭಣೆಯಿಂದಲು ಕೂಡಿರುವುದಂತು ದಿನಾಂಕ 29-09-2024 ರಂದು ನಡೆದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ನೂತನ ಕಾರ್ಯಧ್ಯಕ್ಷರ ಹಾಗೂ ಕಾರ್ಯಕಾರಿ ಮಂಡಳಿಯ ಪದಗ್ರಹಣ ಸಮಾರಂಭ ಮತ್ತೊಮ್ಮೆ ನಿರೂಪಿಸಿದೆ. ಇಲ್ಲಿನ ಮಹಿಳಾ ಸಮಾಜದ ಮಹಿಳಾ ಮಣಿಗಳ ಒಗ್ಗಟ್ಟು ಹಾಗೂ ಅವರು ತಮ್ಮ ಸಿಂಗಾರದ ಜೊತೆಗೆ ಕಾರ್ಯಕ್ರಮವನ್ನು ಸಿಂಗರಿಸಿ ಮೆರಗುಗೂಳಿಸಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರಲ್ಲಿ ಒಕ್ಕೂಟದ ಗೌರವಾಧ್ಯಕ್ಷರಾದ ಧರ್ಮಸ್ಥಳ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಅನಿತಕ್ಕ ಹಾಗೂ ಸುಪ್ರಿತಕ್ಕ ನವರ ಮಾರ್ಗದರ್ಶನ ಬಹು ಮುಖ್ಯವಾಗಿ ನೂತನ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್ ರವರ ಪತಿ ಪಿ ಬಿ ಪ್ರಕಾಶ್ ರವರ ಉಸ್ತುವಾರಿ ಕೂಡ ಪ್ರಮುಖ ಕಾರಣವಾಗಿತ್ತು. ನಡೆದ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರು, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು, ಶ್ರೀಮತಿ ಪದ್ಮಲತಾ ನಿರಂಜನ್ ಕುಮಾರ್ ರವರು, ಇಲ್ಲಿಯ ವರೆಗು ಕಾರ್ಯಧ್ಯಕ್ಷರಾಗಿ ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀಮತಿ ಪದ್ಮಿನಿ ಪದ್ಮರಾಜ್ ರವರು, ನೂತನ ಕಾರ್ಯಧ್ಯಕ್ಷರಾದ ಪದ್ಮಪ್ರಕಾಶ್ ರವರು ಇಂದಿನ ಹಾಗೂ ನೂತನ ಕಾರ್ಯಗಾರಿ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯಾತಿ ಗಣ್ಯರು ಭಾಗವಹಿಸಿದ್ದು ವೇದಿಕೆ ಗಣ್ಯರಿಂದ ದೀಪ ಪ್ರಜ್ವಲನೆ ಮೂಲಕ ಚಾಲನೆಗೊಂಡಿತು.
ಸಮಾರಂಭದಲ್ಲಿ ವೇದಿಕೆ ಗಣ್ಯರಿಗೆ ಹಾಗೂ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು ಹಾಗೂ ವಿಭಾಗವಾರು ಅಧ್ಯಕ್ಷರುಗಳಿಗೆ ಸುಂದರ ಪೇಟ ಕಾಲರ್ ಸಹಿತ ಬ್ಯಾಡ್ಜ್ ಗಳ ಧಾರಣೆ ಮಾಡಿಸುವ ಮೂಲಕ ಗೌರವ ಪೂರ್ವಕವಾಗಿ ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಅಖಿಲ ಕರ್ನಾಟಕ ಜೈನ ಮಹಿಳಾ ವೆಬ್ ಸೈಟ್ ಚಾಲನೆ ಕೂಡ ನಡೆಯಿತು. ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರು ವೀಡಿಯೋ ಸಂದೇಶದ ಮೂಲಕ ಶುಭಹಾರೈಸಿದರು.
ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರು :- ಇಂದು 150 ಕ್ಕು ಹೆಚ್ಚು ಮಹಿಳಾ ಸಮಾಜವನ್ನು ಒಳಗೊಂಡ ಅಖಿಲ ಕರ್ನಾಟಕ ಮಹಿಳಾ ಒಕ್ಕೂಟ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಇದನ್ನು ಮುಂದುವರೆಸುವಲ್ಲಿ ಸಮರ್ಥ ನಾಯಕರ ಅಗತ್ಯವಿದ್ದು ಮಹಿಳಾ ಮಂಡಳಿಗಳ ಸಂಪರ್ಕದೊಂದಿಗೆ ಮಾರ್ಗದರ್ಶನ ಪ್ರೇರಣೆ ಕೊಡುವ ಅಗತ್ಯವಿದೆ. ಅದನ್ನು ನಮ್ಮ ಪದ್ಮ ಪ್ರಕಾಶ್ ರವರು ಸಮರ್ಥವಾಗಿ ನಿರ್ವಹಿಸಬಲ್ಲರು ಎಂದು ಮನಗಂಡು ನಮ್ಮ ಎಲ್ಲ ಮಹಿಳಾ ಮಂಡಳಿಗಳು ಅವರನ್ನು ಆಯ್ಕೆ ಮಾಡಿದ್ದಾರೆ. ಅವರ ಎಲ್ಲ ಪ್ರಯತ್ನಗಳಿಗೆ ನನ್ನ ಸಹಕಾರ ಇರುತ್ತದೆ. ಈ ಬಾರಿ ಪದ್ಮ ಪ್ರಕಾಶ್ ರವರ ಪತಿಯವರು ಸಹ ಬಹಳ ಆಸಕ್ತಿಯಿಂದ ನಮ್ಮೊಂದಿಗೆ ಕೈಜೊಡಿಸಿ ಒಕ್ಕೂಟಕ್ಕೆ ಒಂದು ವೆಬ್ ಸೈಟ್ ಮಾಡಿದ್ದಾರೆ. ಅವರಿಗು ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ದಾವಣಗೆರೆ ಸಂಸತ್ ಸದಸ್ಯರಾದ ಪ್ರಭಾ ಮಲ್ಲಿಖಾರ್ಜುನ್ ರವರು ಮಹಿಳಾ ಸಂಘಟನೆಗಳು ಹಮ್ಮಿಕೊಳ್ಳ ಬಹುದಾದ ಕಾರ್ಯಕ್ರಮಗಳ ಬಗ್ಗೆ ಸಲಹೆ ನೀಡಿದರು.
ಅನಿತಾ ಸುರೇಂದ್ರ ಕುಮಾರ್ ರವರು :- ನೂತನ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕುಮುದಾ ಮತ್ತು ವೈಶಾಲಿ ಎಲ್ಲ ಕಾರ್ಯಕ್ರಮಗಳಲ್ಲಿ ಸಹಕಾರ ಕೊಡುತ್ತಾರೆ, ಇಂದು ಸಂಭ್ರಮದ ಕಾರ್ಯಕ್ರಮ ನೂತನ ಕಾರ್ಯಾಧ್ಯಕ್ಷರ ಹಾಗೂ ಕಾರ್ಯಕಾರಿ ಮಂಡಳಿಯ ಪದಗ್ರಹಣ ಸಮಾರಂಭ. ಮೊನ್ನೆ ಧರ್ಮಸ್ಥಳದಲ್ಲಿ ಎಲ್ಲರೂ ಸೇರಿ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಅಖಿಲ ಕರ್ನಾಟಕದ ಮಹಿಳಾ ಒಕ್ಕೂಟದ 25 ನೇ ವರ್ಷದ ಸಮಾರಂಭ ನಡೆಯಿತು. ನಿವೇಲ್ಲಾ ಅಲ್ಲಿಗೆ ಬಂದು ಸಂಭ್ರಮ ಪಟ್ಟಿದ್ದೀರಿ. ಬೆಂಗಳೂರಿನ ಚೌಡಯ್ಯ ಸಭಾ ಭವನದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಅಮ್ಮನವರ ಭೌವ್ಯ ಸನ್ಮಾನ ಸಮಾರಂಭದ ಸ್ಪೂರ್ತಿಯೆ ಮಹಿಳಾ ಒಕ್ಕೂಟಕ್ಕೆ ಕಾರಣವಾಯಿತು. ಇಲ್ಲಿ ನಾವು ಮುಂಚಿನ ಶ್ರವಣ ಬೆಳಗೊಳದ ಪೂಜ್ಯ ಚಾರೂಕೀರ್ತಿ ಜಗದ್ಗುರುಗಳನ್ನು ನೆನಪಿಸಬೇಕು. ಅವರೇ ಈ ಸಂಘಟನೆಗೆ ಸ್ಪೂರ್ತಿ. ಒಗ್ಗಟಿನಿಂದ ಒಂದಾಗಿ ಇರಲು ಎಲ್ಲ ಮಹಿಳಾ ಸಂಘಗಳಿಗೆ ಅಲ್ಲಿ ಕರೆನೀಡಲಾಯಿತು. ಆ ಸಂದರ್ಭದಲ್ಲಿ ಉದ್ಗಾಟನೆ ಮಾಡುವ ಸಂದರ್ಭವು ನನಗೆ ಬಂತು. ಒಂದು ಸುಂದರವಾದಂತಹ ಕಾರ್ಯಕ್ರಮ ಅಮ್ಮನ ಸನ್ಮಾನ ಮಹಿಳಾ ಸಮಾಜ ದಿಂದ ನಡೆದ್ದು ನಮಗೆ ಗೌರವತಂದಂತಹ ಕಾರ್ಯವಾಗಿತ್ತು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














