ಬಂಧುಗಳೇ ಇಂದಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿರುವ ದಡಗ ಗ್ರಾಮದ ಶ್ರೀ ಶಾಂತಿನಾಥ ದಿಗಂಬರ ಜೈನ ಬಸದಿಯಲ್ಲಿ ಶ್ರೀಮದ್ ಅನಂತನಂಬಿ ಅಂಗವಾಗಿ ಪ್ರತಿ ವರ್ಷದಂತೆ ಅಭಿಷೇಕ ಪೂಜಾದಿಗಳನ್ನು ಏರ್ಪಡಿಸಲಾಗಿತ್ತು ಇದರ ಮೂಲ ಮೂರ್ತಿ ಭಗವಾನ್ ಶಾಂತಿನಾಥ ಸ್ವಾಮಿಯಾಗಿದ್ದು ಶ್ರೀ ಶಾಂತಿನಾಥ ಜೈನ ಸಂಘದವತಿಯಿಂದ ಬಸದಿ ಪೂಜರಾಧನೆಗಳು ನೆಡೆದುಕೊಂಡುಬರುತ್ತದೆ ಅದರಂತೆ ಅಲ್ಲಿ ನೆಡೆದ ಅನಂತನಾಥ ಸ್ವಾಮಿ ಭಗವಂತರ ಅಭಿಷೇಕದ ಮಧುರ ಕ್ಷಣಗಳು ಇಲ್ಲಿವೆ.
ಅಷ್ಟೇ ಅಲ್ಲದೇ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ನೆಡೆದ ಶ್ರೀಮದ್ ಅನಂತನೂಪಿ ಪೂಜೆಯ ಕೆಲವು ದೃಶ್ಯಾವಳಿಗಳನ್ನು ಇಲ್ಲಿ ನೋಡಬಹುದು.














