ಜೈ ಜಿನೇಂದ್ರ ವೀಕ್ಷಕರೆ, ಇಂದಿನ ನಮ್ಮ ಧರ್ಮಯಾತ್ರೆ ಚಿಕ್ಕಮಗಳೂರಿನ ಕಡೆಗೆ, ಇಲ್ಲಿನ ಕಳಸ ತಾಲ್ಲೂಕಿನ ಇಡಕನಿ ಎಂಬ ಪುಟ್ಟ ಗ್ರಾಮ ಅಲ್ಲಿ ನಡೆಯುತ್ತಿರುವ ಒಂದು ಜಿನ ಮಂದಿರದ ಜೀರ್ಣೋದ್ಧಾರ ಕಾರ್ಯ ಅ ಬಸದಿಯ ಹಿನ್ನೇಲೆ ಹಾಗೂ ವಿವರವನ್ನು ನೋಡೋಣ.
ಇಲ್ಲಿ ಸುಮಾರು 2 ಶತಮಾನಗಳ ಹಿಂದೆ ಇಡಕನಿ ಪದ್ಮಯ್ಯ ಹೆಗ್ಗಡೆ ಮತ್ತು ಚಂದ್ರಯ್ಯ ಹೆಗ್ಗಡೆ ಯವರು ಭಗವಾನ್ 1008 ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಜಿನ ಮಂದಿರವನ್ನ ನಿರ್ಮಿಸಿ ಅಂದಿನಿಂದ ಇಂದಿನವರೆಗೂ ಈ ಬಸದಿಯನ್ನು ಆರಾಧಿಸಿಕೊಂಡು ಪೂಜಿಸಿಕೊಂಡು ಬರುತ್ತಿರುವುದು ಈ ಗ್ರಾಮದಲ್ಲಿ ನೂರಾರು ವರ್ಷಗಳ ಹಿಂದೆ ಅನೇಕ ಜೈನ ಕುಟುಂಬಗಳು ವಾಸವಿದ್ದು ಅವರೆಲ್ಲರು ಈ ಜಿನ ಮಂದಿರದ ಪೂಜರಾಧನೆಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಕಾಲ ನಂತರದಲ್ಲಿ ಅನೇಕ ಕಾರಣಗಳಿಂದ ಜೈನ ಸಮುದಾಯದ ಕೆಲವಾರು ಕುಟುಂಬಗಳು ಬೇರೆ ಊರಿಗೆ ವಲಸೆ ಹೋಗಿದ್ದು. ಪ್ರಸ್ತುತ ಈ ಜಿನಮಂದಿರದ ಮೂಲ ಸ್ಥಾಪಕ ವಂಶಸ್ಥರು ಮತ್ತು ನಾಲ್ಕಾರು ಜೈನ ಮನೆಗಳು ಮಾತ್ರ ಗ್ರಾಮದಲ್ಲಿ ಉಳಿದಿದ್ದು ಇದೀಗ ಅವರೇಲ್ಲರ ಸಹಕಾರದಿಂದ ಪೂಜಾ ಕಾರ್ಯವನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಈ ಜಿನ ಮಂದಿರವು ಶಿಥಿಲಾವಸ್ಥೆಗೊಂಡದ್ದರಿಂದ ಮಂದಿರವನ್ನು ಜೀರ್ಣೋದ್ಧಾರಗೊಳಿಸ ಬೇಕೆಂದು ಇಡಕನಿ ಜೈನ ಬಾಂಧವರು ಎಲ್ಲರು ಒಟ್ಟಾಗಿ ತೀರ್ಮಾನಿಸಿ ಕಳಸ ಸೀಮೆಗೆ ಆಗಮಿಸಿದಂತಹ 108 ಪ್ರಸಂಗ ಸಾಗರ ಮುನಿ ಮಹಾರಾಜರು ಕಳಸದಿಂದ ನರಸಿಂಹ ರಾಜ ಪುರ ಕ್ಷೇತ್ರಕ್ಕೆ ವಿಹಾರ ಮಾಡುವಂತಹ ಸಂದರ್ಭದಲ್ಲಿ ನಮ್ಮ ಜಿನ ಮಂದಿರಕ್ಕೆ ಆಗಮಿಸಿದ್ದು ಈ ಸಂದರ್ಭದಲ್ಲಿ ಈ ಸ್ವಾಮಿಯ ದರ್ಶನ ಪಡೆದಂತಹ ಮುನಿ ಶ್ರೀಗಳು ಜಿನ ಮಂದಿರ ಜೀರ್ಣಾವಸ್ಥೆಯಲ್ಲಿ ಇದ್ದುದ್ದರಿಂದ ಈ ಮಂದಿರವನ್ನು ಅತಿ ಶೀಘ್ರವಾಗಿ ಜೀರ್ಣೋದ್ಧಾರಗೊಳಿಸ ಬೇಕೆಂದು ಸಲಹೆಯನ್ನು ನೀಡಿ ಆಶೀರ್ವದಿಸಿದರು. ಮುಂದೆ ಮುನಿಶ್ರೀಗಳ ನುಡಿಯಂತೆ ಇಡಕನಿ ಜೈನ ಬಾಂಧವರೆಲ್ಲಾ ಒಟ್ಟಾಗಿ ಕಾರ್ಕಳ ಜೈನ ಮಠದ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯನ್ನ ಸಂಪರ್ಕಿಸಿ ಸ್ವಾಮೀಜಿಯವರನ್ನು ಈ ಜಿನ ಮಂದಿರಕ್ಕೆ ಆಗಮಿಸುವಂತೆ ಕೋರಿಕೊಂಡಾದ ಜಿನ ಮಂದಿರಕ್ಕೆ ಆಗಮಿಸಿದಂತಹ ಭಟ್ಟಾರಕರು ಜಿನ ಮಂದಿರವನ್ನು ಪರಿಶೀಲನೆ ನಡೆಸಿ ಈ ಬಸದಿಯನ್ನು ಪರಿಶೀಲಿಸಿ ಜೀರ್ಣೋದ್ಧಾರಗೊಳಿಸ ಬೇಕೆಂದು ಸಲಹೆಯನ್ನು ಮತ್ತು ಮಾರ್ಗದರ್ಶನವನ್ನು ನೀಡಿದರು. ಅದರಂತೆ ಮುಂದೆ ಇಡಕನಿ ಪದ್ಮಯ್ಯ ಹೆಗ್ಗಡೆ ಮತ್ತು ಚಂದ್ರಯ್ಯ ಹೆಗ್ಗಡೆ ಕುಟುಂಬಸ್ಥರು ಮತ್ತು ಅಲ್ಲಿನ ಜೈನ ಬಾಂಧವರು ಸಭೆ ನಡೆಸಿ ಬಸದಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿದ್ದು ಈ ಸಮಿತಿಗೆ ಅಧ್ಯಕ್ಷರಾಗಿ ಕಳಸದ ಕೆ ಸಿ ಧರಣೇಂದ್ರಯ್ಯ ನವರ ಆಯ್ಕೆಮಾಡಿದ್ದು ಇವರ ಜೋತೆಗೆ 10 ಜನ ಸದಸ್ಯರನ್ನು ನೇಮಿಸಿದ್ದು ಒಟ್ಟಾಗಿ ಜೀರ್ಣೋದ್ಧಾರ ಸಮಿತಿ ಕೂಡ ರಚನೆಯಾಗಿದೆ.
ಪುತ್ತೂರಿನ ಖ್ಯಾತ ಜ್ಯೋತಿಷ್ಯರಾದ ವರ್ಧಮಾನ್ ಜೈನ್ ರವರ ಅಷ್ಟ ಮಂಗಳ ಪ್ರಶ್ನೆಯೊಂದಿಗೆ ಭಟ್ಟಾರಕರ ಅಪ್ಪಣೆಯಂತೆ ಜಿನ ಮಂದಿರದಲ್ಲಿ ಇದ್ದ ಜಿನ ಬಿಂಬಗಳನ್ನು 23 ಮಾರ್ಚ್ 2023 ರಂದು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ನಂತರ ಜಿನ ಮಂದಿರದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಶಿಲಾಮಯ ಬಸದಿ ನಿರ್ಮಿಸಲು ಪಂಚಾಂಗ ನಿರ್ಮಿಸಿದ್ದು ಇದುವರೆಗೂ ಸುಮಾರು 25 ಲಕ್ಷ ವೆಚ್ಚ ಮಾಡಿದ್ದು ಈ ಹಣವನ್ನು ಇಡಕನಿ ಚಂದ್ರಯ್ಯ ಹೆಗ್ಗಡೆ ಮತ್ತು ಪದ್ಮಯ್ಯ ಹೆಗ್ಗಡೆ ವಂಶಸ್ಥರು ಬರೆಸಿದ್ದು ಈ ಜಿನ ಮಂದಿರಕ್ಕೆ ಹೋಗುವ ಮಾರ್ಗದಲ್ಲಿ ಉತ್ತಮ ಸ್ಥಿತಿ ಇಲ್ಲದಿರುವುದರಿಂದ ಕಳೆದ ಮೂರು ತಿಂಗಳಿಂದ ಮಳೆಗಾಲದಲ್ಲಿ ಕೆಲಸ ಸ್ಥಗಿತಗೊಂಡಿದ್ದು ಮುಂದಿನ ತಿಂಗಳ ನವೆಂಬರ್ ನಿಂದ ಕೆಲಸ ಆರಂಭಗೊಳ್ಳಲಿದೆ. ಈಗಾಗಲೇ ಗರ್ಭಗುಡಿಯ ಶಿಲಾನ್ಯಾಸ ಕಾರ್ಯ ನಡೆದಿದ್ದು ಮುಂದಿನ ದಿನಗಳಲ್ಲಿ ಈ ಬಸದಿ ನಿರ್ಮಾಣಕ್ಕೆ ಹೆಚ್ಚಿನ ಆರ್ಥಿಕ ಸಹಕಾರದ ಅವಶ್ಯಕತೆ ಇದೆ. ಜೈನ ಸಮಾಜ ಬಾಂಧವರ ಸಹಕಾರದ ನಿರೀಕ್ಷೆಯಲ್ಲಿ ಈ ಸಮಿತಿ ಇದೆ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














