ಜೈ ಜಿನೇಂದ್ರ ವೀಕ್ಷಕರೆ, ಕಳೆದ ಸಂಚಿಕೆಯಲ್ಲಿ ಅನಂತನೋಂಪಿ ಮಹತ್ವವನ್ನು ಪ್ರಸ್ತುತ ಪಡಿಸಲಾಗಿತ್ತು. ಇಂದಿನ ಸಂಚಿಕೆಯಿಂದ ಹಲವೆಡೆ ನಡೆದ ಅನಂತನೋಂಪಿ ಹಾಗೂ ನೋಂಪಿ ಪ್ರಯುಕ್ತ ನಡೆದ ಅನೇಕ ಕಾರ್ಯಕ್ರಮಗಳು ಮುಂದಿನ ಒಂದೇರಡು ಸಂಚಿಕೆಗಳ ವರೆಗೆ ಅನಂತನೋಂಪಿ ವಿಶೇಷವಾಗಿ ಪ್ರಸಾರಗೊಳ್ಳಲಿದೆ. ನೋಡಿ ಧನ್ಯರಾಗಿ. ಅದರಂತೆ ಬೆಂಗಳೂರಿನ ಕರ್ನಾಟಕ ಜೈನ ಭವನದಲ್ಲಿ ದಿನಾಂಕ 14-09-2024 ರಿಂದ 18-09-2024 ರವರೆಗೆ ಶ್ರೀ ಅನಂತನೋಂಪಿ ಉದ್ಯಾಪನ, ಸಾಮೂಹಿಕ ಕ್ಷಮಾವಳಿ ಮತ್ತು ಮಾತೃ ವಂದನ ಸಮಾರಂಭ ಪ್ರಾತಸ್ಮರಣೀಯ ಕೀರ್ತಿ ಶೇಷ ಜಗದ್ಗುರು ಕರ್ಮಯೋಗಿ ಸ್ಯಾಧ್ವಾದ ಸಿದ್ದಾಂತ ಚಕ್ರವರ್ತಿ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಚಾರ್ಯ ವರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಮತ್ತು ಅವರ ನೆನಪಿನೊಂದಿಗೆ ಶ್ರೀಕ್ಷೇತ್ರ ಕನಕಗಿರಿಯ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಶ್ರೀಕ್ಷೇತ್ರ ಧರ್ಮಸ್ಥಳ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಪಾವನ ಮಾರ್ಗದರ್ಶನ ಹಾಗೂ ತ್ಯಾಗಿ ಸೇವಾ ಸಮಿತಿ ಅಧ್ಯಕ್ಷರಾರ ಧರ್ಮಸ್ಥಳ ಸುರೇಂದ್ರ ಕುಮಾರ್ ಮತ್ತು ಕಾರ್ಯಾಧ್ಯಕ್ಷರಾದ ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ರವರ ನೇತೃತ್ವದಲ್ಲಿ ಧರ್ಮದರ್ಶಿಗಳಾದ ಶ್ರೀ ಎಸ್ ಜಿತೇಂದ್ರ ಕುಮಾರ್, ಶ್ರೀ ವಿಮುಕ್ತ್ ಕುಮಾರ್ ಹಾಗೂ ಶ್ರೀ ವಿಖಾಸ್ ಜೈನ್ ಇವರ ಸಹಕಾರದೊಂದಿಗೆ ಕರ್ನಾಟಕ ಜೈನ್ ಅಸೋಸಿಯೇಶನ್ ರವರ ಸೈಯೋಗದೊಂದಿಗೆ ಸಂಪನ್ನಗೊಂಡಿತು. ಮೊದಲಿಗೆ ದಿನಾಂಕ 15 ರಂದು ಡಾ|| ಡಿ ವೀರೇಂದ್ರ ಹೆಗ್ಗಡೆ ಸಭಾಭವನದಲ್ಲಿ ಶ್ರೀವಿಹಾರ ಮೆರವಣಿಗೆ ದ್ವಜಾರೋಹಣ, ತೋರಣ ಮುಹೂರ್ತ, ಭವನ ಪ್ರವೇಶ, ಸರ್ವಾಣಿಯಕ್ಷ ನೃತ್ಯ, ಯಕ್ಷ ಸ್ಥಾಪನೆ ನಡೆದು ದಿನಾಂಕ 16 ರಿಂದ 18ರ ವರೆಗೆ ಶ್ರೀ ಅನಂತನೋಂಪಿ ಉದ್ಯಾಪನ ಪೂಜಾವಿಧಿ ಸಕಲ ವಿಧಿವಿಧಾನಗಳೊಂದಿಗೆ ವಿಧಿ ಪೂರ್ವಕವಾಗಿ ನಡೆದು ರಾಜ್ಯದಲ್ಲಿ ಅತಿ ಹೆಚ್ಚು 108 ರತಿಕ ದಂಪತಿಗಳು ಭಾಗವಹಿಸುವ ಮೂಲಕ ದಾಖಲೆ ನಿರ್ಮಿಸಿದ್ದು ಅಷ್ಟು ರತಿಕರು ಏಕಕಾಲದಲ್ಲಿ ನೋಂಪಿ ಆಚರಿಸಿದ ದೃಶ್ಯ ವೈಭವವೇ ಮೆರಗು ತುಂಬಿತ್ತು. ಇಲ್ಲಿ ಆ ವೈಭವವನ್ನು ಅನಾವರಣಗೊಳಿಸಲಾಗಿದೆ.
ಶ್ರೀಕ್ಷೇತ್ರ ಕನಕಗಿರಿಯ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಭೂವನ ಕೀರ್ತಿ ಭಟ್ಟಾರಕ ಸ್ವಾಮೀಜಿಯವರ : ಧರ್ಮ ಬಂಧುಗಳೇ, ಅನಂತನೋಂಪಿ ವಿಧಾನ ಅಂದರೆ ನೀವು ಒಂದು ವರ್ಷದಿಂದಲೇ ಸಿದ್ಧರಾಗುತ್ತೀರಿ, ಸಿದ್ದರಾಗುವುದು ಎಂದರೆ ಸಿದ್ಧತೆಗೆ ಸಿದ್ದರಾಗುವುದು. ಈ ವಿಷಯ ನಿಮ್ಮ ಮನಸಿಗೆ ಬಂದರೆ ಮೂರು ದಿನದ ಆರಾಧನೆ ನಿಮ್ಮಗೆ ಕಷ್ಟ ಅನಿಸುವುದಿಲ್ಲ. ಅನಂತನೋಂಪಿಯನ್ನು ಕೆಲವರು ಮಾಡಿದ್ದಾರೆ ಕೆಲವರು ನೋಡಿದ್ದೀರಿ, ಇನ್ನೂ ಕೆಲವರು ಮಾಡು ಇಲ್ಲ ನೋಡು ಇಲ್ಲಾ. ಇನ್ನೂ ಸ್ವಲ್ಪ ವ್ಯವಸ್ಥೆಯನ್ನು ಮಾಡಿದ್ದರೆ ಈ ಸಭಾ ಭವನ ಸಾಲುತ್ತಿರಲಿಲ್ಲ.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














