ಜೈ ಜಿನೇಂದ್ರ ವೀಕ್ಷಕರೆ, ನಿಮಗೆಲ್ಲಾ ತಿಳಿದಿರುವಂತೆ ದೇವನಗರಿ ದಾನಿಗಳ ಊರು ದಾವಣಗೆರೆ ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಸುಂದರ ನಗರದಲ್ಲಿ ಬಹಳ ಹಿಂದೆ ಅಂದರೆ ದೇಶ ಸ್ವತಂತ್ರ ಗೊಂಡ ಕಾಲದಲ್ಲಿ ದಿಗಂಬರ ಜೈನ ಮನೆತನಗಳಲ್ಲಿ ಬೀಟಿ ಮನೆತನ, ಬೇತೂರು ಮನೆತನ, ಹೊಳಲು ಮನೆತನ, ಇಜಾರಿ ಮನೆತನ, ಮೋತಿಖಾನೆ ಕುಟುಂಬ, ಪ್ರಥಮ ಶೆಟ್ಟಿ ಕುಟುಂಬಗಳು ಪ್ರಮುಖವಾಗಿದ್ದು ಇಲ್ಲಿನ ಶ್ರಾವಕರೊಬ್ಬರ ಮನೆಯಲ್ಲಿ ಇದ್ದ ಜಿನ ಬಿಂಬದ ದರ್ಶನ ಪಡೆಯುತ್ತ ಪರ್ವಗಳಲ್ಲಿ ಹೊಳಲ್ಕೆರೆಗೆ ಹೋಗ ಬೇಕಾದ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಇಲ್ಲಿ ಒಂದು ಜೈನ ಬಸದಿ ನಿರ್ಮಿಸಲೆ ಬೇಕು ಎನ್ನುವ ಸಂಕಲ್ಪದಿಂದ ಬೀಟಿ ಕುಟುಂಬದ ಹರಿಯರಾದ ಬ್ರಹ್ಮಪ್ಪ, ದೇವೇಂದ್ರಪ್ಪ, ತವನಪ್ಪನವರು 1951-52 ರಲ್ಲಿ ಜಿನ ಮಂದಿರವನ್ನು ನಿರ್ಮಾಣ ಮಾಡಿ ಪಂಚಕಲ್ಯಾಣ ನಡೆಸಿದ್ದರು.
ಇಂತಹ ಒಂದು ಮಹತ್ ಸಂಕಲ್ಪದಿಂದ ನಿರ್ಮಿತವಾದ ಈ ಸುಂದರ ಜಿನ ಮಂದಿರದಲ್ಲಿ ಶ್ರೀ 1008 ಪಾರ್ಶ್ವನಾಥ ಸ್ವಾಮಿ ವಿರಾಜಮಾನರಾಗಿದ್ದು ಇದರ ಕೆತ್ತನೆ ಮೈಸೂರಿನಲ್ಲಿ ಆಗಿದೆ. ಕಪ್ಪು ಕಲ್ಲಿನ ಪದ್ಮಾಸನದ ಅತಿಶಯದ ಮೂರ್ತಿ ಇದಾಗಿದ್ದು ನೋಡಲು ಬಹಳ ಅಕರ್ಷಣಿಯವಾಗಿದೆ. ಅಲ್ಲದೇ ಧರಣೇಂದ್ರ ಯಕ್ಷ ಪದ್ಮಾವತಿ ಮಾತೆಯ ಮಂಟಪ ಕೂಡ ಲ್ಲಿ ನಿರ್ಮಿಸಲಾಗಿದೆ.
ಅಚಾರ್ಯ ಶಾಂತಿಸಾಗರ ಪಾದುಕೆಯನ್ನು ಕೂಡ ನೀವು ಕಾಣಬಹುದು. ಅದೇ ರೀತಿ ಮೇಗಿನ ನೆಲೆಯಲ್ಲಿ ಶ್ರೀ 1008 ಚಂದ್ರನಾಥ ಸ್ವಾಮಿಯ ಖಡ್ಗಾಸನ ಪ್ರತಿಮೆಯನ್ನು ಕೂಡ ಸ್ಥಾಪಿಸಲಾಗಿದೆ. ಈ ಮೂರ್ತಿಯು 900 ವರ್ಷ ಪುರಾತನವಾಗಿದ್ದು ನರಸಿಂಹ ರಾಜಪುರ ಪರಮಪೂಜ್ಯ ಲಕ್ಷ್ಮಿಸೇನಾ ಭಟ್ಟಾರಕ ಮಹಾಸ್ವಾಮಿಗಳಿಂದ ಸ್ಥಾಪಿಸಲಾಗಿದೆ.
ಬೀಟಿ ಕುಟುಂಬದ ಹಿರಿಯರು ಉಳಿದ ಕುಟುಂಬಗಳ ಸಹಕಾರದೊಂದಿಗೆ ಜಿನ ಮಂದಿರದ ನಿರ್ವಾಹಣೆ ಹಾಗೂ ಕಾರ್ಯಕ್ರಮಗಳು ನಿರ್ವಿಜ್ಞಾವಾಗಿ ನಡೆಯುತ್ತಾ ಬಂದು 2012 ರಿಂದ ಪರಮ ಪೂಜ್ಯ ಮುನಿಶ್ರೀ 108 ಪುಣ್ಯಸಾಗರ ಮುನಿ ಮಹಾರಾಜರು ಬಂದಾಗ ಮಹಾವೀರ ಮಂಚ್ ಎಂಬ ಸಂಸ್ಥೆ ಪ್ರಾರಂಭವಾಗಿದ್ದು ಜಿನ ಮಂದಿರದ ಉಸ್ತುವಾರಿ ತೆಗೆದುಕೊಂಡು ಇದುವರೆಗು ಉತ್ತಮ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಮುನಿಶ್ರೀಗಳ ಮಾರ್ಗ ದರ್ಶನದಲ್ಲಿ ಅನೇಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದು ಅದರಲ್ಲೂ ಮುಕುಟ ಸಪ್ತಮಿಯ 24 ತೀರ್ಥಂಕರರ ಪಲ್ಲಕಿ ಉತ್ಸವ ವೈಭವದಿಂದ ಕೂಡಿತ್ತು. ಸ್ಥಳಿಯರು ಈ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಪ್ರಸ್ತುತ ಶ್ರೀ ಪಾರ್ಶ್ವನಾಥ ಟೆಂಪಲ್ ಟ್ರಸ್ಟ್ ವತಿಯಿಂದ ಕೂಡ ಪೂಜರಾಧನೆಗಳು ನಡೆದುಕೊಂಡು ಬರುತ್ತಿವೆ. ಇಂತಹ ಒಂದು ಸುಂದರ ಜಿನ ಮಂದಿರವನ್ನ ಒಮ್ಮೆಯಾದರು ದರ್ಶನ ಪಡೆಯಿರಿ.
ಇಲ್ಲಿನ ಸ್ಥಳಿಯರು ಜ್ವಾಲಮಾಲ ನ್ಯೂಸ್ ನ ಕಾರ್ಯ ವೈಕರಿಯನ್ನು ಪ್ರಶಂಸಿ ಶ್ಲಾಘೀಸಿದರು.
ಇಂತಹ ಅದ್ಬುತ ಕಾರ್ಯಕ್ರಮಗಳ ವೀಕ್ಷಣೆಗಾಗಿ ವೀಕ್ಷಿಸುತ್ತಿರಿ.
ಜ್ವಾಲಮಾಲ ಡಾಟ್ ನ್ಯೂಸ್














