ವೀಕ್ಷಕರೆ ನಿಮಗೆಲ್ಲಾ ತಿಳಿದಿರುವಂತೆ ಬಾದ್ರಪದ ಮಾಸದಲ್ಲಿ ದೇಶದೆಲ್ಲೆಡೆ ಜೈನ ಬಾಂಧವರಿಗೆ ಮಹಾಪರ್ವವೇ ಆಗಿರುವ ದಶಲಕ್ಷಣದ ಪರ್ವವೇ ವಿಜೃಂಭಣೆಯಿಂದ ನಡೆಯಲಿದೆ. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ದಿಗಂಬರ ಜೈನ ಮಹಾಸಂಸ್ಥಾನ ಮಠದಲ್ಲಿ ನಡೆಯುವ ದಶಲಕ್ಷಣ ಪರ್ವದ ವೈಭವವೇ ಬೇರೆ. ಇಲ್ಲಿನ ಭಂಡಾರ ಬಸದಿಯಲ್ಲಿ ಹಿಂದಿನ ಪ್ರಾತಃಸ್ಮರಣೀಯ ಪರಮಪೂಜ್ಯ ಜಗದ್ಗುರು ಕರ್ಮಯೋಗಿ ಚಾರುಕೀರ್ತಿ ಪಂಡಿತಾಚರ್ಯವರ್ಯ ಮಹಾಸ್ವಾಮಿಗಳವರ ಕಲ್ಪನೆಯಂತೆ 24 ತೀರ್ಥಂಕರರಿಗೆ ದೇಶದಲ್ಲೇ ಎಲ್ಲಿಯೂ ನಡೆಯದಂತಹ ವಿಶೇಷ ರೀತಿಯಲ್ಲಿ ಕಲ್ಪದೃಮ ಅಭಿಷೇಕವನ್ನು ಪ್ರತಿವರ್ಷ ನಡೆಸಿಕೊಂಡು ಬಂದಂತೆ ಈ ವರ್ಷವೂ ಕೂಡ ದಿನಾಂಕ 08/09/2024 ರಿಂದ 17/09/2024 ರವರೆಗೆ ಪರ್ವದ ಪ್ರತಿದಿನ ಬೆಳಗ್ಗೆ ಕಲ್ಪದೃಮ ಮಹಾಭಿಷೇಕ ಪರಮಪೂಜ್ಯ ಸಾಧುವೃಂದದ ಸಾನಿಧ್ಯ ಪರಮಪೂಜ್ಯ ಜಗದ್ಗುರು ಸ್ವಸ್ತೀಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ನೇತೃತ್ವದಲ್ಲಿ ಲೋಕದ ಸಮಸ್ತ ಜೀವಿಗಳ ಆತ್ಮಕಲ್ಯಾಣಕ್ಕಾಗಿ ಈ ಸಂದರ್ಭದಲ್ಲಿ ಅಭಿಷೇಕ ಪೂಜಾದಿ, ತತ್ವಾರ್ಥ ಸ್ತೋತ್ರ, ಸ್ವಾಧ್ಯಾಯ ತ್ಯಾಗಿಗಳ ಪ್ರವಚನ ಹಾಗೂ ಆರತಿ ಕಾರ್ಯಕ್ರಮಗಲು ಸಂಪನ್ನ ಗೊಳ್ಳುತ್ತಿವೆ .
ಈ ಬಾರಿಯ ಕಲ್ಪದೃಮ ಪೂಜೆ ವೈಶಿಷ್ಟತೆಯಿಂದ ಕೂಡಿದ್ದು 24 ತೀರ್ಥಂಕರರಿಗೆ ಬೆಳ್ಳಿಯ ಬಾವಮಂಡಲ ಹಾಗೂ ಛತ್ರತ್ರಯಗಳು ಸೇರಿದಂತೆ ಪೂಜೆಯ ಸೇವಾರ್ಥದಾರರಿಗೆ 24 ತೀರ್ಥಂಕರರಿಗೆ 24 ಬೆಳ್ಳಿಯ ಶಾಂತದಾರ ಪೂಜೆಗಳಿಂದ ಶಾಂತಿದಾರೆ ಮಾಡುವ ಅವಕಾಶ . ಅಷ್ಟೇ ಅಲ್ಲದೇ ಬಂಗಾರದ ಕಳಸ ಸೇರಿದಂತೆ ಬೆಳ್ಳಿ ಬಂಗಾರದ ಪುಷ್ಪಗಳನ್ನು ಸಮರ್ಪಿಸಿ ವೈಭವವಾಗಿ ಅಭಿಷೇಕ ಶ್ರೀಗಳವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನೆರವೇರುತ್ತಿದ್ದು ಸಮೃದ್ಧತೆಯಿಂದ ಕೂಡಿದ ಅಷ್ಟದ್ರವ್ಯಗಳ ಅಭಿಷೇಕ ನೋಡಲು ಅಮೋಘವಾಗಿದ್ದು ನೆರೆದ ಭಕ್ತಾದಿಗಲ ಕಣ್ಮನ ಸೆಳೆಯುತ್ತದೆ ಒಮ್ಮೆಯಾದರೂ ಶ್ರವಣಬೆಳಗೊಳದ ಶ್ರೀ ಕ್ಷೇತ್ರದಲ್ಲಿ ನಡೆಯುವ ಕಲ್ಪದೃಮ ಪೂಜೆಯನ್ನು ಕಣ್ತುಂಬಿಕೊಂಡು ಜೀವನ ಪಾವನಗೊಳಿಸಿ ಎಂದು ಹೇಳುತ್ತಾ ಇಂತಹ ಅವಕಾಶವನ್ನು ಕಲ್ಪಿಸಿದ ಶ್ರೀಗಳವರಿಗೆ ವಂದಿಸುತ್ತಾ ಆ ಸುಂದರ ದೃಶ್ಯಾವಳಿಗಳು ನಿಮಗಾಗಿ.














