ವೀಕ್ಷಕ ಬಂಧುಗಳೇ ಇಂದು ಶ್ರೀ ಹೊಂಭುಜ ಅತಿಶಯ ಮಹಾಕ್ಷೇತ್ರ ಪರಮಪೂಜ್ಯ ಸ್ವಸ್ತಶ್ರೀ ಡಾಕ್ಟರ್ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಹೊಂಭುಜ ಅತಿಶಯ ಮಹಾಕ್ಷೇತ್ರದಲ್ಲಿ ಪರಂಪರಾಗತವಾಗಿ ನೆಡೆದುಕೊಂಡು ಬಂದಿರುವ ಭಗವಾನ್ ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಹಾಮಾತೆ ಶ್ರೀ ಶ್ರೀ ಪದ್ಮಾವತಿ ವಾರ್ಷಿಕ ರಥಾಯಾತ್ರ ಮಹೋತ್ಸವದ ಸಂಕ್ಷಿಪ್ತ ದೃಶ್ಯಾವಳಿಗಳನ್ನು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ ಅಂದು ಸಂಜೆ ಶ್ರೀ ಕ್ಷೇತ್ರದಲ್ಲಿ ನೆಡೆದ ಸಭಾ ಕಾರ್ಯಕ್ರಮದಲ್ಲಿ ಆಚಾರ್ಯ ಶ್ರೀ 108 ಕೊಂತು ಸಾಗರ ಮುನಿ ಮಹಾರಾಜರ ಪಾವನ ಸಾನಿಧ್ಯ ವಹಿಸಿ ಕಂಬದ ಹಳ್ಳಿ ಸ್ವಸ್ತಶ್ರೀ ಭಾನುಕೀರ್ತಿ ಭಟ್ಟಾರಕ ಮಹಾ ಸ್ವಾಮಿಜೀಗಳವರು ಉಪಸ್ಥಿತರದ್ದು ಹೊಂಬುಜ ಶ್ರೀಗಳವರ ನೇತೃತ್ವದಲ್ಲಿ ಮೈಸೂರಿನ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದ ಜೈನಾಲಾಜಿಯ ಫೋಫೆಸರ್ ಡಾಕ್ಟರ್ ಪದ್ಮಶೇಖರ್ ರವರಿಗೆ ಸಿದ್ದಾಂತ ಕೀರ್ತಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಅನೇಕ ಪ್ರಶಸ್ತಿಗಳು ಬಂದಿದಾವೆ ಕಳೆದ ವರ್ಷ ತಾನೆ ಪ್ರಶಸ್ತಿ ಪತ್ರ ಓದಿದ ಹಾಗೆ ಶಿಕ್ಷಣ ಕ್ಷೇತ್ರಕ್ಕೆ ನಾನು ಮಾಡಿದಂತಹ ಕೆಲಸಕ್ಕೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಿತು ಇವತ್ತು ನನಗೆ ತುಂಬಾ ಸಂತೋಷ ಬಹಳ ವರ್ಷಗಳ ಮೇಲೆ ಮತ್ತೋಂದು ಸಂತೋಷವನ್ನು ನಾನು ಪಡೆಯುತ್ತಾ ಇದ್ದೇನೆ ಚಾವುಂಡರಾಯನ ಪ್ರಶಸ್ತಿಯನ್ನು ನಾನು ತೆಗೆದು ಕೊಂಡಾಗ ಬಹುಶಂ 16 ಅಥವಾ 17ನೇ ಇಸವಿ ಅಂತ ಕಾಣುತ್ತೆ ಒಂದು ತರ ಸಂತೋಷ ಆಗಿತ್ತು ಹಾಗೇಯೇ ಮತ್ತೊಮ್ಮೆ ಸಂತೋಷ ಆಗುತ್ತಾ ಇದೆ ಸಿದ್ದಾಂತ ಕೀರ್ತಿ ಪ್ರಶಸ್ತಿ ತೆಗೆದುಕೊಳ್ಳಲು ಇಲ್ಲಿಯ ಮೂಲ ರಾಜಗುರು ಆಗಿದ್ದವರು ಸಿದ್ದಾಂತ ಕೀರ್ತಿಗಳು ಹಾಗಾಗಿ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ತಗೊಳ್ಳುತ್ತಾ ಇರುವುದು ಒಂದು ರೀತಿಯ ಹೆಮ್ಮೆ ಅನಿಸುತ್ತದೆ ಜೊತೆಗೆ ಈ ಪ್ರಶಸ್ತಿಯನ್ನು ಕೊಡುತ್ತಾ ಇರುವವರು ಈಗ ಸ್ವಾಮೀಜಿ ಹೌದು ದೇವೇಂದ್ರ ಕೀರ್ತಿಗಳವರು ಆದರೆ ನನ್ನ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಮಾಡುದರಲ್ಲಾ ಹಾಗೇಯೇ ಅನೇಕ ಸಾದ್ವಿಗಳು ನನ್ನ ಮಾರ್ಗದರ್ಶನದಲ್ಲಿ ಪಿ ಹೆಚ್ ಡಿ ಮಾಡಿದರೆ ನನಗೆ ಇದೆಲ್ಲಾ ಪೂರ್ವಜನ್ಮದ ಸುಕೃತ ಸ್ವಾಮೀಜಿ ಸುಮ್ಮ ಸುಮ್ಮನೆ ಇವೆಲ್ಲಾ ಘಟಿಸುವುದಿಲ್ಲಾ ಯಾವಾಗಲೂ ನಾನು ದೈವದ ಮೇಲೆ ನಂಬಿಕೆ ಇಟ್ಟುಕೊಂಡವಳು ಹಾಗಾಗಿ ಈ ಪೂರ್ವಜನ್ಮದ ಪುಣ್ಯ ಯದ ಫಲ ಇಂತವರೆಲ್ಲರನ್ನು ಕೂಡ ಶಿಷ್ಯರನ್ನಾಗಿ ಮತ್ತು ಮಕ್ಕಳಾಗಿ ಸಂತೋಷ ಉಕ್ಕೆರಿ ಸ್ವಾಮೀಜಿಯವರನ್ನು ನಾನು ಇಲ್ಲಿ ನೆನೆಸಿಕೊಳ್ಳುತ್ತೇನೆ ಅವರು ಹೇಳುತ್ತಾರೆ ನಮ್ಮ ಯಜಮಾನರನ್ನು ಶಿಷ್ಯರು ಅಂತಾರೆ ನಿಮ್ಮನ್ನು ಮಾತ್ರ ಅಮ್ಮ ಅನ್ನುತ್ತೇನೆ ಎಂದರು ಹಾಗೇಯೇ ನನ್ನ ಮಗನ ವಯಸ್ಸು ದೇವೇಂದ್ರಕೀರ್ತಿ ಸ್ವಾಮೀಜಿಯವರದು ಹಾಗಾಗಿ ನನ್ನ ಮಗ ಸಾಂಸಾರಿಕ ಲೌಕಿಕದಲ್ಲಿದ್ದಾನೆ ಇನ್ನೋಬ್ಬ ಮಗ ನಿಮ್ಮವರಾಗಿ ಇಲ್ಲಿ ಉಳಿದಿದ್ದಾನೆ ಈ ದಿವಸ ತಮ್ಮೆಲ್ಲರಿಗೂ ಸಂತೋಷದ ವಿಚಾರ ಅಂತ ಹೇಳಿದರೆ ಸುಮಾರು 41 ವರ್ಷಗಳ ನಂತರ ಪರಮಪೂಜ್ಯ ಆಚಾರ್ಯ ಶ್ರೀ ಕೊಂತು ಸಾಗರ ಮುನಿ ಮಹಾರಾಜರು ಹೊಂಬುಜ ಕ್ಷೇತ್ರಕ್ಕೆ ಆಗಮಿಸಿದ್ದಾರೆ 1966ನೇ ಇಸವಿಯಲ್ಲಿ ಪರಮಪೂಜ್ಯ ಆಚಾರ್ಯ ಶ್ರೀ ರವರು ದಿಗಂಬರ ಮುನಿ ದೀಕ್ಷೆ ಯನ್ನು ಪಡೆದಿದ್ದರು ಆನಂತರ ಅವರು 84ನೇ ಇಸವಿಯಲ್ಲಿ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಸಂಧರ್ಭದಲ್ಲಿ ಬಂದಾಗ ಇಲ್ಲಿ ಅನೇಕ ದಿನಗಳು ಇದ್ದು ಅವರು 3 ದೀಕ್ಷೇ ಕೊಟ್ಟದ್ರು ಮಾತಾಜಿಗಳ ದೀಕ್ಷೆ ಆನಂತರ ಕಳೆದ 10ನೇ ತಾರೀಖು ಈ ಕ್ಷೇತ್ರಕ್ಕೆ ಪ್ರವೇಶಮಾಡಿ ಭಗವಾನ್ ಶ್ರೀ ಪಾರ್ಶ್ವನಾಥಸ್ವಾಮಿ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ಒಂದು ವಿಷೇಶ ಆರಾಧನೆ ಪೂಜೆಯನ್ನು ಮಾಡಿಸಿ ಮೊನ್ನೆ 16ನೇ ತಾರೀಖು ಒಂದು ನಮ್ಮ ಕರ್ನಾಟಕದ ಬೆಳಗಾಂ ಜಿಲ್ಲೆ ಗೋಕಾಖ್ ತಾಲ್ಲೂಕು ಕೊಣ್ಣೂರು ಗ್ರಾಮದ ಶ್ರೀ ಬ್ರಹ್ಮಚಾರಿ ಸೂರಜ್ ಎನ್ನುವವರು ಪರಮ ಪೂಜ್ಯ ಆಚಾರ್ಯ ಶ್ರೀ ಗಳ ನಂತರ ಹೊಂಬುಜಕ್ಷೇತ್ರದಲ್ಲಿ 60 ವರ್ಷದೀರ್ಘ ಕಾಲಗಳ ನಂತರ ಮುನಿದೀಕ್ಷೆ ಹೊಂಬುಜದಲ್ಲಿ ಆಯಿತು ಈಗ ಅವರು ಪರಮಪೂಜ್ಯ ಮುನಿ ಶ್ರೀ ಸಂಯವನಂದಿ ಮುನಿ ಮಹಾರಾಜರಾಗಿದ್ದಾರೆ ಹೀಗೆ ಒಂದು ಐತಿಹಾಸಿಕ ಕಾರಣಕ್ಕೂ ಪರಮಪೂಜ್ಯ ಆಚಾರ್ಯ ಶ್ರೀರವರ ಸಾನಿಧ್ಯ ಆಚಾರ್ಯ ಶ್ರೀರವರು ಸ್ವತಹ 40 ವರ್ಷಗಳ ನಂತರ ಈ ಕ್ಷೇತ್ರಕ್ಕೆ ಬಂದಿದ್ದು ವಿಷೇಶವಾಗಿತ್ತು ಆಚಾರ್ಯ ಕೊಂತು ಸಾಗರಮುನಿ ಮಹಾರಾಜರ ಬಗ್ಗೆ ಹೇಳಬೇಕು ಅಂದರೆ ಬಹುಶಂ ನಮ್ಮ ಭಾರತದಲ್ಲಿ ಇವತ್ತು ನಾವು ಏನು ಪರೋಪಕಾರ ದಯೆ ಧರ್ಮ ದಾನ ಇತ್ಯಾದಿಗಳನ್ನು ನಾವು ಪ್ರವಚನಗಳಲ್ಲಿ ಭಾಷಣಗಳಲ್ಲಿ ಹೇಳುತ್ತಾ ಇದ್ದೇವೆ ಅಥವಾ ಆ ಕ್ರಿಯೆಗಳನ್ನು ಚೆನ್ನಾಗಿ ನಿಬಾಯಿಸಿಕೊಂಡು ಹೋಗುತ್ತಾ ಇದ್ದೇವೆ ಅಂತ ಹೇಳಿದರೆ ಇವತ್ತು ಇಡೀ ದೇಶಾದ್ಯಂತ ನಮ್ಮ ಪ್ರಾಚೀನ ಜೈನ ಧರ್ಮವನ್ನು ಯಥೋಚಿತವಾಗಿ ಮುನಿಗಳು ಮತ್ತು ಶ್ರಾವಕರಿಗೆ ಪ್ರವಚನ ನೀಡುವ ಮೂಲಕವಾಗಿ ಸುಮಾರು ದೇಶಾದ್ಯಂತ ಶಿಷ್ಯರು ಅವರ ಶಿಷ್ಯರು ಪ್ರಶಿಷ್ಯರು ಎಲ್ಲರೂ ಸೇರಿದರೆ ಒಂದು ಸಾವಿರ ಶಿಷ್ಯರನ್ನು ಒಳಗೊಂಡಂತಹ ದೊಡ್ಡ ಸಂಘ ಎಂದು ಹೇಳಿದರೇ ಆಚಾರ್ಯ ಶ್ರೀ ಕೊಂತು ಸಾಗರ ಮುನಿಮಹಾರಾಜರು.














