ಗುಮ್ಮಿನಕಾಡು

ವೀಕ್ಷಕ ಬಂಧುಗಳೇ ಇಂದು ನಾವು ಮತ್ತೊಮ್ಮೆ ಚಿಕ್ಕಮಂಗಳೂರು ಜಿಲ್ಲೆ ಹಾದಿಯಲ್ಲಿ ಸಾಗಿ ಗುಮ್ಮಿನಕಾಡು ಬಸದಿ ನಮ್ಮ ಇಂದಿನ ಪರಿಚಯ ಗುಮ್ಮಿನ ಕಾಡು ಬಸದಿ ಇದು ಒಂದು ಮನೆತನಕ್ಕೆ ಸೇರಿದ ಬಸದಿಯಾದರೂ ಸುತ್ತಮುತ್ತಲಿನ ಜೈನ ಬಾಂಧವರು ಪ್ರತಿ ದಿನ ದರ್ಶನಕ್ಕಾಗಿ ಬರುವುದಲ್ಲದೇ ವಿಷೇಷ ದಿನಗಳ ಪೂಜೆ ಆರಾಧನೆಗಳಲ್ಲಿ ಭಾಗವಹಿಸಿದ್ದಾರೆ.

ಬಸದಿಯ ಮೂಲ ಮೂರ್ತಿಯಾಗಿ ಭಗವಾನ್ ಶ್ರೀ ಚಂದ್ರನಾಥ ಸ್ವಾಮೀಯ ಕಪ್ಪು ಶಿಲೆಯ ಬಿಂಬವಿದ್ದು ಮಾತೆ ಪದ್ಮಾವತಿ ದೇವಿ ಬೈರವ ಪದ್ಮಾವತಿ ರೂಪದಲ್ಲಿ ಪೂಜಿಸಲ್ಪಡುತ್ತಿದ್ದಾಳೆ ಹಾಗೂ ಇಲ್ಲಿನ ಸುಂದರ ಗಂಧದ ಗುಡಿಯಲ್ಲಿಯೂ ಕೂಡ ಅನೇಕ ಪ್ರಾಚೀನ ಪಂಚಧಾತುವಿನ ಬಿಂಬವನ್ನು ನೋಡಬಹುದು.

ಪೂರ್ವಜರಿಂದ ಪೂಜಿಸಿಕೊಂಡು ಬಂದಿರುವ ಈ ಬಸದಿ ಸ್ವರ್ಗೀಯ ವಿಶ್ವನಂದಿ ಮುನಿ ಮಹಾರಾಜರು ವಿಹಾರದ ನಿಮಿತ್ತ ಆಗಮಿಸಿದಾಗ ನಾಲ್ಕಾರು ದಿನ ತಂಗಿದ್ದ ಮುನಿಗಳವರು ಮೂಲದವರಿಗೆ ಬಸದಿ ಹೊಂದಿಕೊಂಡಿರುವುದು ಸರಿಯೆಲ್ಲ ಎಂದು ಶ್ರೇಯಸ್ಕರವಲ್ಲ ಎಂದು ಕುಟುಂಬಸ್ಥರಿಗೆ ಆಜ್ಞೆಮಾಡುತ್ತಾರೆ ಅಲ್ಲದೇ ಬಸದಿಯ ಆಯವನ್ನು ಕೂಡ ನಿರ್ಧರಿಸಿ ತಿಳಿಸುತ್ತಾರೆ ಅದರಂತೆ ನರಸಿಂಹರಾಜ ಪುರದ ಸ್ವರ್ಗೀಯ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ  ಅಮೃತ ಹಸ್ತದಿಂದ ಶಂಖು ಸ್ಥಾಪನೆ ನೆರೆವೇರುತ್ತದೆ ಬಸದಿಯನ್ನು ಮನೆತನದವರೇ ಸಂಪೂರ್ಣ ವೆಚ್ಚಭರಿಸಿ ನಿರ್ಮಾಣಮಾಡಿ 1999ರಲ್ಲಿ ಪಂಚಕಲ್ಯಾಣವನ್ನು ಊರ ಪರಬೂರ ದಾನಿಗಳ ಸಹಕಾರದಿಂದ ಅಮೋಘವಾಗಿ ನೆರೆವೇರಿಸಲಾಯಿತು ನರಸಿಂಹರಾಜಪುರದ ಸ್ವರ್ಗೀಯ ಲಕ್ಷೀಸೇನಾ ಭಟ್ಟಾರಕರು ಕಾರ್ಕಳದ ಕೀರ್ತಿ ಭಟ್ಟಾರಕರು ಪಂಚಕಲ್ಯಾಣದ ಸಾನಿಧ್ಯವನ್ನು ವಹಿಸಿರುತ್ತಾರೆ ಈ ಬಸದಿಯಲ್ಲಿ ಪ್ರತಿನಿತ್ಯ ಬೆಳಗ್ಗೆ ಹಾಗು ಸಂಜೆ  ದೀಪ ಹಚ್ಚಿ ಸಂಜೆ ಗಂಟೆಯನ್ನು ಹೊಡೆಯುವುದು ಸಂಪ್ರದಾಯ ಹಾಗೂ ಪ್ರತಿನಿತ್ಯ ಪೂಜೆಯೊಂದಿಗೆ ಕ್ಷೇತ್ರಪಾಲ ಪೂಜೆ ನಾಗಪೂಜೆ ಕೂಡ ನೆರೆವೇರುತ್ತದೆ ಪ್ರತಿ ದಿನ ಸಂಜೆ ಮನೆತನದ ಮಕ್ಕಳೆಲ್ಲಾ ಕೂಡಿ ಭಜನೆ ಮಾಡುವುದು ಶ್ಲಾಘನೀಯ ವಿಷಯವಾಗಿದೆ ಪ್ರತಿವರ್ಷ ವಾರ್ಷಿಕಪೂಜೆ ಮನೆತನದ ಹಿರಿಯರಾದ ಶ್ರೇಯರ ಅಮ್ಮನವರ ಮುಖಂಡತ್ವದಲ್ಲಿ ನೆಡೆಯುತ್ತದೆ ಈ ಬಸದಿಗೆ ಒಮ್ಮೆ ಬಂದು ದರ್ಶನ ಭಾಗ್ಯ ಪಡೆಯಲು ಈ ಮನೆತನದವರು ಆಹ್ವಾನಿಸಿದ್ದಾರೆ.